ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೬

ಉಗ್ರಪ್ಪನ ವಾದ

ಉಗ್ರಪ್ಪನ ಸಸ್ಪೆಂಡ್ ಆರ್ಡರ್ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತೃವದಿಂದ ಮನಸ್ಸು ಹರ್ಷಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಒಂದು ತಿಂಗಳು ಸಸ್ಪೆಂಡ್ ಮಾಡುವ ಅಧಿಕಾರ ಮಾತ್ರ. ತಾನು ಎಲ್ಲ ಕಾರ್ಡುಗಳನ್ನೂ ಸಾಹೇಬರಿಗೆ ಹೊತ್ತು ಹಾಕಿ ರಹಸ್ಯದ ವರದಿಯನ್ನು ಬರೆದು ಉಗ್ರಪ್ಪನನ್ನು ಡಿಸ್ಟ್ರಿಕ್ಟ್ ನಿಂದಲೇ ವರ್ಗಾಯಿಸಬೇಕೆಂದೂ, ಅವನನ್ನು ಮನ್ನಿಸಿ ಇದ್ದ ಸ್ಥಳದಲ್ಲಿಯೇ ಇಟ್ಟರೆ ತನ್ನಿಂದ ಮುಂದೆ ಕೆಲಸ ಮಾಡುವುದು ಸಾಧ್ಯವಿಲ್ಲ ವಂದೂ ಕಡಾಖಂಡಿತವಾಗಿ ತಿಳಿಸಿದ್ದಾಯಿತು. ಸಾಹೇಬರಿಂದ ಏನೊಂದು ಆರ್ಡರೂ ಬರಲಿಲ್ಲ. ಬೇರೆ ಡಿಸ್ಟ್ರಿಕ್ಟ್ ಗೆ ವರ್ಗಮಾಡಿಸುವುದಕ್ಕೆ ಹೆಚ್ಚು ಕಾಲ ಹಿಡಿಯುವುದೆಂದು ರಂಗಣ್ಣನಿಗೆ ತಿಳಿದಿತ್ತು. ಆ ಬೇರೆ ಜಿಲ್ಲೆಯ ಅಧಿಕಾರಿಯೊಡನೆ ಪತ್ರ ವ್ಯವಹಾರ ನಡೆಸಿ ಅಲ್ಲಿರುವ ಖಾಲಿ ಜಾಗಕ್ಕೆ ಕಳಿಸಿಯೋ, ಪರಸ್ಪರ ವಿನಿಮಯದಿಂದಲೋ ಉಗ್ರಪ್ಪನನ್ನು ತೊಲಗಿಸಬೇಕಾಗಿತ್ತು. ಈ ಮಧ್ಯೆ ಒಂದು ತಿಂಗಳ ಅವಧಿ ಮುಗಿದು ಹೋದರೆ ಅವನು ಪುನಃ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ಆಗ ಏನು ಮಾಡಬೇಕು ? ಅವನನ್ನು ಕೆಲಸಕ್ಕೆ ತೆಗೆದು ಕೊಳ್ಳುವುದಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ಬಲಾತ್ಕಾರದಿಂದ ರಜ ಕೊಟ್ಟು ಕಳಿಸಿದರೆ ಮೇಲಿನವರು ಒಪ್ಪದೆ ಆಕ್ಷೇಪಿಸಬಹುದು. ಹೀಗೆ ಆಲೋಚನಾ ತರಂಗಗಳಲ್ಲಿ ಮಗ್ನನಾಗಿ ರಂಗಣ್ಣ ಕಚೇರಿಯಲ್ಲಿ ಕುಳಿತಿದ್ದಾಗ ಬಾಗಿಲ ಮುಂದೆ ಒಂದು ಅಗಲವಾದ ನೆರಳು ಬಿದ್ದಂತೆ ಕಂಡಿತು. ಆ ನೆರಳು ಅದೃಶ್ಯವಾಗಿ ಉಗ್ರಪ್ಪ ನೇ ಸಾಕ್ಷಾತ್ತಾಗಿ ನಿಂತಿದ್ದನು ! ದೊಡ್ಡ ಬೂದುಗುಂಬಳ ಕಾಯಿನಂತೆ ದಪ್ಪ ಬೋಳು ತಲೆ ! ಸ್ವಲ್ಪ ಕುಳಿ ಬಿದ್ದಿದ್ದರೂ ತೇಜಸ್ವಿಯಾಗಿದ್ದ ಕಣ್ಣುಗಳು | ಮುಖಕ್ಕೆಲ್ಲ ಕಿಟ್ಟೆ ರಟ್ಟಿ ಗಾತ್ರದ