ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೨

ರಂಗಣ್ಣನ ಕನಸಿನ ದಿನಗಳು

ಮನಶ್ಯಾಸ್ತ್ರದ ತತ್ತ್ವಗಳನ್ನು ತಿಳಿದುಕೊಡಿದ್ದೀರಿ. ಒಬ್ಬ ಉಪಾಧ್ಯಾಯನು ಎಷ್ಟು ಜನ ಮಕ್ಕಳಿಗೆ ನ್ಯಾಯವಾಗಿ ಪಾಠ ಹೇಳಬಹುದು ? ತರಗತಿಯಲ್ಲಿ ಎಷ್ಟು ಜನ ಮಕ್ಕಳಿದ್ದರೆ ವಿದ್ಯಾಭಿವೃದ್ಧಿಗೆ ಮತ್ತು ಸಂವಿಧಾನಕ್ಕೆ ಅನುಕೂಲ ? ಎಂಬ ಅಂಶಗಳನ್ನು ಗಮನಿಸಿ ಅಲ್ಲವೇ ನಿಗದಿ ಮಾಡಿರುವುದು ? ನನ್ನ ತರಗತಿಯಲ್ಲಿ ನಲವತ್ತೈದು ಜನ ಮಕ್ಕಳು ! ಕುಳಿತುಕೊಳ್ಳುವುದಕ್ಕೆ ಎಲ್ಲರಿಗೂ ಬೆಂಚುಗಳಿಲ್ಲ, ಹಲಗೆಗಳಿಲ್ಲ. ಕೊಟಡಿ ಚಿಕ್ಕದು ; ಕಿಟಕಿಗಳಲ್ಲಿ, ನೆಲದ ಮೇಲೆ, ನನ್ನ ಮೇಜಿನ ಪಕ್ಕಗಳಲ್ಲಿ, ಎಲ್ಲ ಕಡೆಯೂ ಮಕ್ಕಳು ಕುಳಿತಿರುತ್ತಾರೆ. ಬರೆಯಲು ಬೋರ್ಡಿನ ಹತ್ತಿರ ಹೋಗಬೇಕಾದರೆ ಹೆಜ್ಜೆಯಿಡುವುದಕ್ಕೆ ಜಾಗವಿಲ್ಲ ; ಬೋರ್ಡಿನ ಮೇಲೆ ಬರೆದರೆ ಅರ್ಧ ಜನ ಮಕ್ಕಳಿಗೆ ಕಾಣಿಸುವುದಿಲ್ಲ. ಹೌದು ಸ್ವಾಮಿ! ನಾನು ಹೇಳಿದೆ : ಮುವ್ವತ್ತು ಹುಡುಗರಿಗಿಂತ ಹೆಚ್ಚಾಗಿದ್ದರೆ ನಾನು ಪಾಠ ಮಾಡುವುದಿಲ್ಲ ಎಂದು ಹೇಳಿದೆ ; ಹೆಚ್ಚು ಹುಡುಗರನ್ನು ಕಳಿಸಿಬಿಟ್ಟೆ. ಸರಕಾರ ಕೊಡುವ ಅಲ್ಪ ಸಂಬಳಕ್ಕೆ ಹೆಚ್ಚು ಜನ ಹುಡುಗರನ್ನೆಲ್ಲ ಸೇರಿಸಿಕೊಂಡು ಉಸಿರು ಕಳೆದುಕೊಂಡು ನಾನೇಕೆ ಪಾಠಮಾಡಬೇಕು ? ನಾನೇಕೆ ಸಾಯಬೇಕು ? ನಾನು ಸತ್ತರೆ ನನ್ನ ಸಂಸಾರ ಪೋಷಣೆಗೆ ಸರಕಾರ ನೆರವಾಗುತ್ತದೆಯೆ ? ತಾವು ಆ ಹೆಡ್‌ಮೇಷ್ಟರ ಮಾತು ಕೇಳಿ ಕೊಂಡು ನನ್ನನ್ನು ಸಸ್ಪೆಂಡ್ ಮಾಡಿದಿರಿ. ರೋಗಕ್ಕೆ ಮದ್ದು ಹುಡುಕದೆ ರೋಗಿಯನ್ನೇ ಕೊಂದುಬಿಟ್ಟರೆ, ಮಾಡಬಹುದೇ ಸ್ವಾಮಿ ?'

'ಇಲಾಖೆಗೂ ರೂಲ್ಕು ರೆಗ್ಯುಲೇಷನ್ ಗೊತ್ತಿದೆ ಮೇಷ್ಟೆ ! ಊರ ಜನರ ಒತ್ತಾಯದಿಂದ, ಸಾಹೇಬರ ನಿರ್ದೆಶದಿಂದ ನಿಗದಿಯ ಸಂಖ್ಯೆಗಿ೦ತ ಹೆಚ್ಚಾಗಿ ಸೇರಿಸಬೇಕಾಗುತ್ತದೆ. ಏನು ಮಾಡಬೇಕು ??

'ಬಡಮೇಷ್ಟರುಗಳ ಬಲಿಯಾಗ ಬೇಕು ಎಂದು ಹೇಳುತ್ತೀರಾ ಸ್ವಾಮಿ ! ಊರ ಜನ ಒತ್ತಾಯ ಮಾಡಿದರೆ ಸರ್ಕಾರಕ್ಕೆ ತಗಾದೆ ಕೊಟ್ಟು ನೀವು ಬೇರೊಂದು ಸ್ಕೂಲನ್ನು ಸ್ಥಾಪಿಸಿರಿ! ಹೆಚ್ಚಿಗೆ ಉಪಾಧ್ಯಾಯರನ್ನು ಸರ್ಕಾರದಿಂದ ಕೊಡಿಸಿಕೊಡಿ ! ಈ ದೊಡ್ಡ ಊರಿಗೆಲ್ಲ ಒಂದೇ ಪ್ರೈಮರಿ ಸ್ಕೂಲು! ನಾನೂರು ಐವತ್ತು ಜನ ಮಕ್ಕಳು! ಒಂದೊಂದು ತರಗತಿಯಲ್ಲಿ ನಲವತ್ತು ಐವತ್ತು ಮಕ್ಕಳು ! ಸ್ಥಳ ಕಿಷ್ಕಿಂಧ, ಕುರಿಗಳನ್ನು ರೊಪ್ಪದಲ್ಲಿ