ಪುಟ:ರಂಗಣ್ಣನ ಕನಸಿನ ದಿನಗಳು.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೮೩

ಕೂಡಿದಂತೆ ಮಕ್ಕಳನ್ನು ಕೂಡುತ್ತಾರೆ, ಊರ ಜನ,-ನಮ್ಮ ಮಕ್ಕಳನ್ನು ಸ್ಕೂಲಿಗೆ ಹಾಕಿದರೂ ವಿದ್ಯೆಯೆ ಬರುವುದಿಲ್ಲ, ಮೇಷ್ಟರು ಪಾಠವೇ ಮಾಡುವುದಿಲ್ಲ ಎಂದು ನಮ್ಮನ್ನು ದೂರಬೇಕು ! ಸಾಹೇಬರುಗಳು ವಿದ್ಯಾಭಿವೃದ್ಧಿ ಏನೂ ಆಗಿಲ್ಲ, ಮೇಷ್ಟು ಗಳು ಕಳ್ಳಾಟ ಆಡುತ್ತಾರೆ ಎಂದು ನಮ್ಮನ್ನು ದಂಡಿಸಬೇಕು ! ಇದು ನ್ಯಾಯವೇ ಸ್ವಾಮಿ? ಹಿಂದಿನ ಡಿ. ಇ. ಓ ಸಾಹೇಬರು ಆ ದಿನ ಮಿಡಲ್ ಸ್ಕೂಲಿಗೆ ಹೋಗಿ ತನಿಖೆಯ ಶಾಸ್ತ್ರ ಮಾಡಿ, ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿಲ್ಲ ಎಂದು ಆಕ್ಷೇಪಿಸಿ, ಎಲ್ಲ ಮೇಷ್ಟರುಗಳಿಗೂ ಐದು ಐದು ರುಪಾಯಿ ಜುಲ್ಮಾನೆ ಹಾಕಿದರಲ್ಲ ! ಒಂದೊಂದು ತರಗತಿಯಲ್ಲಿ ಅರುವತ್ತೈದು ಮಕ್ಕಳಿದ್ದಾರೆ; ಹೆಚ್ಚಾಗಿ ಮೇಷ್ಟರುಗಳನ್ನು ಕೊಟ್ಟಿಲ್ಲ. ಸತ್ಯವಾಗಿ ಹೇಳುತ್ತೇನೆ ಸ್ವಾಮಿ! ನಾನು ಆ ದಿನ ಮಿಡಲ್ ಸ್ಕೂಲಿನಲ್ಲಿದ್ದಿದ್ದರೆ ಜೀವದ ಹಂಗು ತೊರೆದು ಆ ಸಾಹೇಬರನ್ನು ನನ್ನ ದೊಣ್ಣೆಯಿಂದ ಚಚ್ಚಿ ಬಿಡುತ್ತಿದ್ದೆ ! ಯಾವಾಗ ನೀವು ಸಂವಿಧಾನದ ನಿಯಮಗಳನ್ನು ಪಾಲಿಸುವುದಿಲ್ಲವೋ, ಯಾವಾಗ ನೀವು ರೂಲ್ಸು ರೆಗ್ಯುಲೇಷನ್ನುಗಳನ್ನು ಉಲ್ಲಂಘಿಸುತ್ತೀರೋ ಆವಾಗ ವಿದ್ಯಾ ಭಿವೃದ್ಧಿಯ ಮಾತು ಆಡಬೇಡಿ, ಶಿಸ್ತಿನ ಮಾತು ಎತ್ತಬೇಡಿ, ನಮಗೆ ದಂಡನೆ ಗಿ೦ಡನೆ ಮಾಡಬೇಡಿ, ನಮಗಿಷ್ಟವಿದ್ದರೆ ನಾವು ಪಾಠ ಮಾಡುತ್ತೆವೆ ; ಇಷ್ಟವಿಲ್ಲದಿದ್ದರೆ ಮಲಗಿ ನಿದ್ರೆ ಮಾಡುತ್ತೇವೆ. ರೂಲ್ಸು ಗಳನ್ನು ಪಾಲಿಸುವುದಕ್ಕೂ ಉಲ್ಲಂಘಿಸುವುದಕ್ಕೂ ನಿಮಗೆ ಸ್ವಾತಂತ್ರ್ಯ ! ಪಾಠ ಹೇಳುವುದಕ್ಕೂ ಬಿಡುವುದಕ್ಕೂ ನಮಗೆ ಸ್ವಾತಂತ್ರ್ಯ !

'ಸರಕಾರದ ನೌಕರರಿಗೆ ಸ್ವಾತಂತ್ರ್ಯವಿಲ್ಲ ಮೇಷ್ಟೇ

'ನಾವು ಗುಲಾಮರೇನು ಸ್ವಾಮಿ ? ಸರಕಾರದ ಅಂಗಗಳಲ್ಲಿ ನಾವೂ ಒಂದಲ್ಲವೇ ? ನಮ್ಮ ಸ್ಕೂಲಿನ ಕಾಗದಪತ್ರಗಳು ಸರಕಾರಿ ಪತ್ರಗಳಲ್ಲವೇ ? ತಮ್ಮ ಕಚೇರಿಯ ಕಾಗದಪತ್ರಗಳು ಸರಕಾರದ ರಿಕಾರ್ಡುಗಳಲ್ಲವೇ ? ತಮ್ಮ ಕಚೇರಿಯ ವ್ಯವಹಾರವೆಲ್ಲ ಮೈಸೂರು ಸರ್ಕಾರಿಯ ಮೇಲೆ ನಡೆಯುವುದಿಲ್ಲವೇ ? ನಾವು ಗುಲಾಮರೇ ಸ್ವಾಮಿ ? ಮನುಷ್ಯರಲ್ಲವೇ ನಾವು ? ಆತ್ಮ ಗೌರವವಿಲ್ಲವೇ ನಮಗೆ ? ಮನುಷ್ಯ ಸಹಜವಾದ ಹಕ್ಕುಗಳಿಲ್ಲವೇ ನಮಗೆ ? ಮದಾಂಧರಾದ ಅಧಿಕಾರಿಗಳು ನಮ್ಮನ್ನು