ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೮೫

'ಎಲ್ಲವೂ ಸರಿಯೇ ಉಗ್ರಪ್ಪನವರೇ ! ನೀವು ಮೊದಲೇ ನನ್ನ ಹತ್ತಿರ ಬಂದು ಈ ವಾದವನ್ನೆಲ್ಲ ಮಾಡಬಹುದಾಗಿತ್ತಲ್ಲ. ಅದಕ್ಕೆ ಬದಲು ಹೆಡ್‌ಮೇಷ್ಟರನ್ನು ಬೆದರಿಸಿದಿರಿ ; ಮೆಮೋ ಪುಸ್ತಕವನ್ನು ಕಿತ್ತಿಟ್ಟುಕೊಂಡಿರಿ. ಇವುಗಳನ್ನು ನೀವು ಮಾಡಬಹುದೇ ?

'ಸ್ವಾಮಿ | ನಾನು ಅಹಂಕಾರ ಸ್ವಭಾವದವನು, ಸ್ವಪ್ರತಿಷ್ಟೆಯುಳ್ಳವನು. ಜೊತೆಗೆ ನಮ್ಮ ಮುಖಂಡರ ಏಜೆಂಟಾಗಿ ಇದ್ದು ಕೊಂಡು ಅವರ ಬೆಂಬಲದಿಂದ ಗರ್ವಿತನಾಗಿ ಕೆಟ್ಟು ಹೋದವನು ! ಮೇಲ್ಪಟ್ಟ ಅಧಿಕಾರಿಗಳನ್ನು ಕಂಡು ಸಮಾಧಾನ ಮತ್ತು ಸಮಜಾಯಿಷಿಗಳನ್ನು ಹೇಳುವುದು ಈ ಚೇತನಕ್ಕೆ ವಿರುದ್ಧವಾದ್ದು ! ತಾವೇ ಪಾಠಶಾಲೆಗೆ ಬಂದು ವಿಚಾರಿಸುತ್ತೀರಿ ಎಂದು ನನ್ನ ನಂಬಿಕೆಯಿತ್ತು. ಆದ್ದರಿಂದ ನಾನು ಬರಲಿಲ್ಲ. ಆ ಹೆಡ್‌ಮೇಷ್ಟು ! ಮುಚ್ಚು ಮರೆಯಿಲ್ಲದೆ ಹೇಳುತ್ತೇನೆ. ಆತನಿಗೆ ಹೆಡ್ ಮೇಷ್ಟ ಕೆಲಸವೇ ಗೊತ್ತಿಲ್ಲ ; ನಾಲಾ ಯಕ್ ಮನುಷ್ಯ ; ತಾಕತ್ ಇಲ್ಲದವನು. ಹುಡುಗರನ್ನು ಸುಮ್ಮನೇ ತರಗತಿಗಳಲ್ಲಿ ತುಂಬುವ ಬದಲು ತಂದೆ ತಾಯಿಗಳಿಗೆ ಖಂಡಿತವಾಗಿ ಹೇಳಬೇಕಾಗಿತ್ತು ; ಸ್ಥಳವಿಲ್ಲ, ಸೇರಿಸುವುದಿಲ್ಲ ಎಂದು ಹೇಳಬೇಕಾಗಿತ್ತು. ತಮಗೆ ಕಾಗದ ಬರೆದು ಹೆಚ್ಚು ಮಕ್ಕಳು ಬರುತ್ತಿದಾರೆ, ಹೆಚ್ಚು ಮೇಷ್ಟ್ರುಗಳನ್ನು ಕೊಡಿ ಎಂದು ಕೇಳಬೇಕಾಗಿತ್ತು, ಹಾಗೆ ರಿಪೋರ್ಟು ಮಾಡಿದ್ದಾರೆಯೇ? ಸ್ವಾಮಿ ? ?

'ಮಾಡಿದ ಹಾಗೆ ಜ್ಞಾಪಕವಿಲ್ಲ ಮೇಷ್ಟೆ !”

'ನನ್ನ ಪ್ರತಿಭಟನೆ ಹೊಸದಲ್ಲ ; ವರ್ಷವರ್ಷವೂ ಇದೆ. ತಮ್ಮ ನೋಟಿಸಿಗೂ ಆಗಾಗ ಬಂದಿರುತ್ತದೆ. ಆದ್ದರಿಂದ ತಮ್ಮ ಬಳಿಗೆ ಬಂದು ಹೊಸದಾಗಿ ಹೇಳಬೇಕಾದ್ದು ಏನೂ ಇರಲಿಲ್ಲ ಒಂದುವೇಳೆ ನನ್ನ ನಡತೆ ತಪ್ಪಾಗಿಯೇ ಇದ್ದಿರಲಿ ಸ್ವಾಮಿ! ಆ ಹೆಡ್ ಮೇಷ್ಟು ಬೇರೆ ಒಂದು ಕಾಗದದಲ್ಲಿ ರಹಸ್ಯವಾಗಿ ಬರೆದು ಕವರಿನಲ್ಲಿಟ್ಟು ಗೋ೦ದು ಹಚ್ಚಿ ನನ್ನ ಹತ್ತಿರ ಕಳಿಸಿ ಸಮಜಾಯಿಷಿ ಕೇಳಿದ್ದಿದ್ದರೆ, ನಾನು ವಿವರವಾಗಿ ಸಮಜಾಯಿಷಿ ಕೊಡುತ್ತಿದ್ದೆ, ಸಮಜಾಯಿಷಿ ಕೇಳುವವರು ಹತ್ತು ಜನ ನೋಡುವ ಮೆಮೋ ಪುಸ್ತಕದಲ್ಲಿ ಬರೆಯುತ್ತಾರೆಯೇ ಸ್ವಾಮಿ ? ಹಾಗೆ