ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೮೭

ದೊಡ್ಡ ಸಾಹೇಬರನ್ನು ಕಂಡು ಗಟ್ಟಿ ಮಾಡಿಕೊಂಡು ಬಂದಿದ್ದಿರಿ. ಸಿದ್ದಪ್ಪನವರು ನಿಮ್ಬ ಬಲಕ್ಕಿರುವರೆಂದು ತೋರಿಸುವ ಏರ್ಪಾಟು ಮಾಡಿಕೊಂಡು ಬಂದಿದ್ದೀರಿ. ಆದ್ದರಿಂದ ಹೇಗೂ ನನಗೆ ಒಳ್ಳೆಯದಾಗುತ್ತಿರಲಿಲ್ಲ ಇಷ್ಟಾಗಿ ನಾನು ಹೇಳಿದ್ದೇನು ! ರೂಲ್ಸು ರೆಗ್ಯುಲೇಷನ್ನು ತಿಳಿಯದವರಿಗೆ ನಾನು ಅವಿಧೇಯನೇ !-- ಎಂದು ಹೇಳಿದೆ, ತಮಗೆ ಜ್ಞಾಪಕವಿರಬಹುದು.

'ಮೇಷ್ಟೆ ! ಒಂದು ವಿಷಾದ ಪ್ರಕರಣ ಆಗಿ ಹೋಯಿತು ! ನೀವು ಆ ದಿನ ವಿನಯದಿಂದ ವರ್ತಿಸಿ, ಹೇಳಬೇಕಾದ್ದನ್ನೆಲ್ಲ ಹೇಳಿ ಕಡೆಯ ತನಕ ಕಾದಿದ್ದರೆ, ನಾನೇನು ಮಾಡುತ್ತಿದ್ದೆನೋ ತಿಳಿಯುತ್ತಿತ್ತು. ಈಗ ನನಗೆ ನಿಮ್ಮ ಮೇಲೆ ದ್ವೇಷವಿಲ್ಲ, ಛಲವಿಲ್ಲ. ಕೆಲಸಕ್ಕೆ ನೀವು ಬನ್ನಿ. ಈಗ ಆಗಿರುವ ಸಸ್ಪೆನ್ಷನ್ ಆರ್ಡರನ್ನು ರದ್ದುಗೊಳಿಸಿ, ರಜವನ್ನಾಗಿ ಪರಿವರ್ತಿಸಿ, ನಿಮಗೆ ಕಳಂಕ ಹತ್ತದಂತೆ ಮಾಡುತ್ತೇನೆ. ಕಡೆಗೆ ಸರ್ವಿಸ್ ರಿಜಿಸ್ಟರಿನಲ್ಲಿ ಸಹ ಆದು ದಾಖಲಾಗದಂತೆ ಏನಾದರೂ ಉಪಾಯ ಮಾಡುತ್ತೇನೆ.'

'ಸ್ವಾಮಿ ! ನನಗೂ ತಮ್ಮ ಮೇಲೆ ಛಲವಿಲ್ಲ, ದ್ವೇಷವಿಲ್ಲ ! ಸತ್ಯವಾಗಿ ಹೇಳುತ್ತೇನೆ. ಆದರೆ ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಕಾರಣವನ್ನು ಆಗಲೇ ತಿಳಿಸಿದ್ದೇನೆ. ಈಗ ನಾನು ಹೊಸ ಮನುಷ್ಯ ; ಪುನರ್ಜನ್ಮ ತಾಳಿದ್ದೇನೆ. ಈಗ ಇಪ್ಪತ್ತು ಇಪ್ಪತ್ತೈದು ದಿನಗಳಿಂದ ನನ್ನ ಮನಸ್ಸಿನೊಡನೆ ಬಲವಾಗಿ ಹೋರಾಡಿದೆ. ದ್ವೇಷವನ್ನು ಸಾಧಿಸಲೇ ? ಶಾಂತಿಯನ್ನು ಸಾಧಿಸಲೇ ? ಎಂದು ಹಗಲಿರುಳೂ ಗುದ್ದಾಡಿದೆ. ತಾವೇನೋ ಪೊಲೀಸ್ ಸಿಬ್ಬಂದಿಯ ಸಹಾಯ ತೆಗೆದುಕೊಂಡಿರಿ. ಮನೆಯ ಹತ್ತಿರ, ಕಚೇರಿಯ ಹತ್ತಿರ ಕಾನ್ ಸ್ಟೇ ಬಲ್ಲುಗಳನ್ನು ನಿಲ್ಲಿಸಿಕೊಂಡಿರಿ. ಊರೂರುಗಳಿಂದ ನಿಮ್ಮ ಇಷ್ಟ ಮಿತ್ರರನ್ನು ಕರೆಸಿಕೊಂಡಿರಿ. ನಿಮ್ಮ ಬಲವನ್ನೂ ನಿಮಗಿದ್ದ ಬೆಂಬಲನ್ನೂ ಪ್ರಕಟಿಸಿದಿರಿ. ಆದರೆ, ನಾನು ತಮ್ಮನ್ನು ಘಾತಿಸಬೇಕೆಂದು ಸಂಕಲ್ಪ ಮಾಡಿದ್ದಿದ್ದರೆ ನಿಮ್ಮನ್ನು ಯಾರೂ ರಕ್ಷಿಸಲಾಗುತ್ತಿರಲಿಲ್ಲ! ಅದು ಖಂಡಿತ ! ನಿಮಗೆ ಯಾರು ತಾನೆ ಎಷ್ಟು ದಿನ ಕಾವಲಿದ್ದಾರು ? ನಾನೇ ಬಹಳವಾಗಿ ಪೂರ್ವಾಪರಗಳನ್ನು