ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮೮

ರಂಗಣ್ಣನ ಕನಸಿನ ದಿನಗಳು

ಚರ್ಚಿಸಿಕೊ೦ಡೆ ಚರ್ಚಿಸಿ ಕೊಳ್ಳುತ್ತಿದ್ದಾಗ ನನ್ನ ಉಡುಪಿನ ಮೇಲೆ ನನ್ನ ದೃಷ್ಟಿ ಹೋಯಿತು! ನಾನು ಧರಿಸುತ್ತಿರುವುದು ಖಾದಿ! ಪೂಜ್ಯ ಗಾಂಧಿಯವರ ಪ್ರೇಮ ವಸ್ತ್ರವಾದ ಖಾದಿ! ನಾನು ಮಾಡಿದ ಪಾಪಕಾರ್ಯಗಳೆಲ್ಲ ಚಲನಚಿತ್ರದಂತೆ ಪರಂಪರೆಯಾಗಿ ಚಿತ್ರಪಟದಲ್ಲಿ ಕಾಣಿಸಿಕೊಂಡುವು ! ಗಾಂಧಿಯವರ ಸತ್ಯ, ಅಹಿಂಸೆ, ಮತ್ತು ಪ್ರೇಮಗಳನ್ನು ನಾನು ಆಚರಣೆಯಲ್ಲಿಟ್ಟುಕೊಳ್ಳದೇ ಹೋದೆನಲ್ಲಾ! ಎಂದು ಬಲವಾದ ಪಶ್ಚಾತ್ತಾಪ ಉಂಟಾಯಿತು. ಸ್ವಾಮಿ | ಅದನ್ನು ಏನೆಂದು ಹೇಳಲಿ ! ದ್ವೇಷವನ್ನೂ ಸ್ವಾರ್ಥವನ್ನೂ ಗೆಲ್ಲುವುದೆಂದರೆ ಮರಣ ಸಂಕಟ ಪಟ್ಟ ಹಾಗೆ ; ಗೆದ್ದ ಮೇಲೆ ಪುನರ್ಜನ್ಮ; ಶಾಂತಿ, ಆತ್ಮಕಲ್ಯಾಣ. ದ್ವೇಷದಿಂದ ಪ್ರಯೋಜನ ಏಲ್ಲ ಎಂದು ತೀರ್ಮಾನಿಸಿದೆ ಆಗ ತಮ್ಮ ಮೇಲಿನ ಕ್ರೋಧವನ್ನು ವಿಸರ್ಜಿಸಿಬಿಟ್ಟೆ ! ಶಾಂತಿಯಿಂದಲೇ ಸೌಖ್ಯ, ಪ್ರೇಮದಿಂದಲೇ ಆತ್ಮಕಲ್ಯಾಣ ಎಂದು ಗ್ರಹಣ ಮಾಡಿದೆ! ನಾನು ಇದುವರೆಗೂ ಮಾಡಿರುವ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ, ಸಂನ್ಯಾಸವನ್ನು ಸ್ವೀಕಾರ ಮಾಡಬೇಕೆಂದು ಸಂಕಲ್ಪಿಸಿದ್ದೇನೆ ! ಇಲ್ಲಿಗೆ ಹತ್ತು ಮೈಲಿಗಳ ದೂರದಲ್ಲಿ ನಮ್ಮವರ ಗವಿಮಠವಿದೆ. ಅಲ್ಲಿ ಹಿಂದೆ ಮಹಾತ್ಮರಾದ ಯೋಗಿಶ್ವರರೊಬ್ಬರು ಸಮಾಧಿಯಾಗಿದ್ದಾರೆ. ಮಠದಲ್ಲಿ ಈಗ ಅಧ್ಯಕ್ಷಪೀಠ ಖಾಲಿಯಾಗಿದೆ. ನಮ್ಮ ಜನ ಒಪ್ಪಿ ಕೊಂಡಿದ್ದಾರೆ. ಎರಡು ಮೂರು ದಿನಗಳಲ್ಲಿ ಅಲ್ಲಿಗೆ ಹೋಗಿ ನೆಲೆಸುತ್ತೇನೆ. ನಾನು ಇಲ್ಲಿಗೆ ತಮ್ಮನ್ನು ಕಾಣಲು ಬಂದದ್ದು : ಮೊದಲನೆಯದಾಗಿ, ತಾವು ನನ್ನ ವಿಚಾರದಲ್ಲಿ ಅನ್ಯಾಯ ಮಾಡಿದಿರಿ ಎಂದು ತಿಳಿಸುವುದಕ್ಕೆ ; ಎರಡನೆಯದಾಗಿ, ಹಾಗೆ ಅನ್ಯಾಯ ಮಾಡಿದ್ದರೂ ನನಗೆ ತಮ್ಮ ವಿಚಾರದಲ್ಲಿ ದ್ವೇಷವೇನೂ ಇಲ್ಲ ; ಗೌರವ ಮತ್ತು ಪ್ರೇಮ ಇವೆ ಎಂದು ತಿಳಿಸುವುದಕ್ಕೆ, ತಾವು ಒಳ್ಳೆಯ ಕೆಲಸ ಮಾಡಿದ್ದೀರಿ. ಯಾರೂ ಇದುವರೆಗೂ ತಾವು ತೋರಿಸಿ ಕೊಟ್ಟಿರುವ ಮಾರ್ಗಗಳನ್ನು ತೋರಿಸಲಿಲ್ಲ, ಹೀಗೆ ವಿದ್ಯಾಭಿವೃದ್ಧಿಯನ್ನುಂಟುಮಾಡಲಿಲ್ಲ. ತಮ್ಮ ಶೀಲವೂ ಸ್ತೋತ್ರಾರ್ಹವಾದುದು. ಆದ್ದರಿಂದ ತಮ್ಮಲ್ಲಿ ನನಗೆ ಗೌರವವಿದೆ. ತಮಗೆ ಇನ್ನು ಕೆಲವು ದಿನಗಳೊಳಗಾಗಿ ಇಲ್ಲಿಂದ ವರ್ಗವಾಗುತ್ತದೆ. ಅದು ಖಂಡಿತ, ಏನೆಂದರೆ : ನನ್ನ ಅರಿಕೆ ಏನೆಂದರೆ, ತಾವು ಜನಾರ್ದನಪುರವನ್ನು ಬಿಟ್ಟು ಹೋಗುವುದರೊಳಗಾಗಿ