ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಗ್ರಪ್ಪನ ವಾದ

೨೮೯

ಗವಿಮಠಕ್ಕೆ ಬರಬೇಕು, ಒಪ್ಪೊತ್ತು ಇದ್ದು ನನ್ನ ಪ್ರೇಮ ಗೌರವಗಳ -ಆತಿಥ್ಯವನ್ನು ಸ್ವೀಕರಿಸಬೇಕು !?

'ಮೇಷ್ಟೆ ! ಇದೇನಿದು ! ನಿಜವಾಗಿಯೂ ನೀವು ಸಂಸಾರತ್ಯಾಗ ಮಾಡಿ ಸಂನ್ಯಾಸಿಗಳಾಗುತ್ತೀರಾ ? ಹೆಂಡತಿ ಮತ್ತು ಮಕ್ಕಳ ಕೈಬಿಡುತ್ತೀರಾ ? ಇವಕ್ಕೆಲ್ಲ ನಾನು ಕಾರಣನಾದ ಹಾಗಾಯಿತಲ್ಲ ಅವರ ಶಾಪ ನನಗೆ ತಟ್ಟದೇ ಹೋಗುವುದೇ !

'ಸ್ವಾಮಿ ! ತಾವು ಖಿನ್ನರಾಗಬೇಡಿ, ನಾನು ಸಂನ್ಯಾಸಿಯಾಗುವುದು ನಿಶ್ಚಯ. ಹೆಂಡತಿ ಮಕ್ಕಳ ರಕ್ಷಣೆಯನ್ನು ಎಲ್ಲರನ್ನೂ ರಕ್ಷಿಸುವ ಭಗವಂತನೇ ಮಾಡುತ್ತಾನೆ ! ಲೌಕಿಕ ರೀತಿಯಲ್ಲಿ ಅವರನ್ನು ನಾನು ನಿರ್ಗತಿಕರನ್ನಾಗಿ ಬಿಟ್ಟಿಲ್ಲ. ಈಗ ಇಪ್ಪತ್ತೈದು ವರ್ಷ ನಾನೂ ಸರ್ವಿಸ್ ಮಾಡಿದೆ. ತಿ೦ಗಳಿಗೆ ಹದಿನೇಳು ರುಪಾಯಿ ಬರುತ್ತಿತ್ತು ! ಸಂಸಾರನ್ನು ಅಷ್ಟರಿಂದಲೇ ನಡೆಸುವುದಕ್ಕೆ ಸಾಧ್ಯವೇ ? ನನಗೆ ಜಮೀನಿದೆ. ಹೆಂಡತಿ ಮತ್ತು ಮಕ್ಕಳು ಹಿಂದಿನಂತೆಯೇ ಮುಂದೆಯೂ ಆ ಜಮೀನಿನಿಂದ ಜೀವನ ನಡೆಸಿಕೊಳ್ಳಬಹುದು. ಗವಿಮಠಕ್ಕೂ ತಕ್ಕಷ್ಟು ಆದಾಯವಿದೆ. ನನ್ನ ಸಂಸಾರ ಪೋಷಣೆಗೆ ಅಗತ್ಯ ಬಿದ್ದರೆ ಸ್ವಲ್ಪ ಸಹಾಯ ಮಾಡಬಹುದು. ನಾನು ಸಂನ್ಯಾಸ ತೆಗೆದುಕೊಳ್ಳುವುದಕ್ಕೆ ತಾವೇನೂ ಕಾರಣರಲ್ಲ, ಆ ಪ್ರೇರಣೆಯೇ ಕಾರಣ. ನಾನು ಪ್ರಪಂಚವನ್ನು ಚೆನ್ನಾಗಿ ನೋಡಿದ್ದೇನೆ. ದೊಡ್ಡ ದೊಡ್ಡ ಅಧಿಕಾರಿಗಳ ಹೊಲಸು ಚರಿತ್ರೆಗಳನ್ನೆಲ್ಲ ತಿಳಿದುಕೊಂಡಿದ್ದೇನೆ ; ಮುಖಂಡರುಗಳನ್ನೂ ನೋಡಿದ್ದೇನೆ. ಅವರು

ಒಬ್ಬರಿಗೊಬ್ಬರು ಬೆಂಬಲ. ಆ ದೊಡ್ಡ ಅಧಿಕಾರಿಗಳು ತಮ್ಮ ಹೊಲಸನ್ನೆಲ್ಲ ತಿಳಿದುಕೊಂಡಿದ್ದೇನೆ. ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮುಖಂಡರು ಎಲ್ಲಿ ಹೊರಗೆಡಹುತ್ತಾರೋ ಎಂದು ಹೆದರಿಕೊಂಡು ಆ ನೀತಿಗೆಟ್ಟ ಮುಖಂಡರ ಬೆನ್ನು ತಟ್ಟುತ್ತ, ಕೈ ಕುಲುಕುತ್ತ, ಲಂಚು ಮಿಂಚುಗಳಿಗೆ ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳುತ್ತ, ಅವರ ಬೆಂಬಲವನ್ನೂ ಅವರ ಕಡೆಯ ಓಟುಗಳನ್ನೂ ಪಡೆದುಕೊಂಡು ಬಹಳ ನಿಸ್ಸಹ ರಂತೆಯೂ ಪ್ರಜಾನುರಾಗಿಗಳಂತೆಯೂ ತೋರ್ಪಡಿಸಿಕೊಳ್ಳುವುದು ! ಆ ಮುಖಂಡರಾದರೋ ಅಲ್ಪ ಸ್ವಲ್ಪ ಆದಾಯದ ರೊಟ್ಟಿ ಚೂರುಗಳಿಗೆ

19