ಪುಟ:ರಂಗಣ್ಣನ ಕನಸಿನ ದಿನಗಳು.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೪

ರಂಗಣ್ಣನ ಕನಸಿನ ದಿನಗಳು

ಷಿಪ್ಪನ್ನು ಬಡಹುಡುಗನಿಗೆ ಕೊಟ್ಟು ಬಿಡೋಣ, ನಾವೇ ಸರಿಪಡಿಸಿಬಿಡೋಣ ಎಂದು ಹೇಳುತ್ತಿದ್ದ ; ನ್ಯಾಯವೂ ದೊರೆಯುತ್ತಿತ್ತು. ಅದಕ್ಕೆ ಬದಲು ಅಮಲ್ದಾರರಿಗೆ ಬರೆದಿರಿ, ಸ್ಟೇಷನ್ ಮಾಸ್ಟರಿಗೆ ಬರೆದಿರಿ, ಮೇಲಿನ ಸಾಹೇಬರಿಗೆ ಬರೆದಿರಿ, ಎಲ್ಲ ಕಡೆಯೂ ಪ್ರಕಟಮಾಡಿದಿರಿ ! ನಿಮಗೇನು ಬೇಕಾಗಿತ್ತು ? ಸ್ಕಾಲರ್ ಷಿಪ್ಪು ಕೊಡುವುದಕ್ಕೆ ಬಿಡುವುದಕ್ಕೆ ಕಮಿಟಿ ಇಲ್ಲವೇ ? ಆ ಅರ್ಜಿಯನ್ನು ಆ ಕಮಿಟಿಯ ಮುಂದಾದರೂ ಇಡಬಹುದಾಗಿತ್ತಲ್ಲ. ಅಲ್ಲಿ ಆ ಕರಿಯಪ್ಪನು ಏನು ಸಮಜಾಯಿಷಿ ಹೇಳುತ್ತಿದ್ದನೋ ನೋಡಬಹುದಾಗಿತ್ತು. ಒಂದು ವೇಳೆ ಬದಲಾಯಿಸಬೇಕಾಗಿದ್ದಿದ್ದರೆ ಕಮಿಟಿಯವರೇ ನಿರ್ಣಯ ಮಾಡುತ್ತಿದ್ದರು. ಆ ನಿರ್ಣಯವನ್ನು ಸಾಹೇಬರಿಗೆ ಕಳಿಸಿ. ನಿಮ್ಮ ಜವಾಬ್ದಾರಿಯಿಲ್ಲದಂತೆ ಉಪಾಯ ಮಾಡಬಹುದಾಗಿತ್ತಲ್ಲ. ನೀವೇಕೆ ಹಾಗೆ ಮಾಡಲಿಲ್ಲ ?”

'ಹೌದು, ನನ್ನ ಬುದ್ಧಿಗೆ ಆಗ ಹೊಳೆಯಲಿಲ್ಲ! ನೀನು ಹೇಳಿದಂತೆ ಮಾಡಬಹುದಾಗಿತ್ತು. ಆದರೆ ನೋಡು ! ಮುಖಂಡ ಅನ್ನಿಸಿಕೊಂಡವನು ಸುಳ್ಳು ಸರ್ಟಿಫಿಕೇಟನ್ನು ಕೊಡಬಹುದೋ ?'

'ಅದೇನು ಮಹಾ ಪ್ರಮಾದ ! ಕೊಡಬಾರದು ಎಂದು ಇಟ್ಟುಕೊಳ್ಳೋಣ. ಆದರೆ ಇವರಿಗೆಲ್ಲ ನಿಮ್ಮ ದೊಡ್ಡ ದೊಡ್ಡ ಅಧಿಕಾರಿಗಳೇ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಎಷ್ಟೊಂದು ಜನ ದೊಡ್ಡ ಮನುಷ್ಯರು, ದೊಡ್ಡ ಅಧಿಕಾರಿಗಳು, ತಮ್ಮ ಕಣಿವೇ ಕೆಳಗಿನ ಬಂಧುಗಳಿಗೆ- ಇವರು ಮೈಸೂರಿನವರು ಎಂದು ಸುಳ್ಳು, ಸರ್ಟಿಫಿಕೇಟುಗಳನ್ನು ಕೊಟ್ಟು ಇ೦ಜನಿಯರಿಂಗ್ ಸ್ಕೂಲು ಮುಂತಾದ ಸ್ಕೂಲುಗಳಿಗೆ ಸೇರಿಸಿಲ್ಲ ; ಫೀಜಿನ ರಿಯಾಯಿತಿ ಕೊಡಿಸಿಲ್ಲ; ಕಡೆಗೆ ಬಹಳ ಬಡವರು ಎಂದು ಸುಳ್ಳು ಹೇಳಿ ಸ್ಕಾಲರ್ ಷಿಪ್ಪನ್ನೂ ಕೊಡಿಸಿಲ್ಲ. ಆ ಕಣಿವೆ ಕೆಳಗಿನ ಹುಡುಗರಿಗೆ ಆಟ, ಊಟ, ಎಂದು ಎರಡು ಕನ್ನಡದ ಮಾತು ಕೂಡ ಬರುವುದಿಲ್ಲ ! ವಿಶ್ವೇಶ್ವರಪುರದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇರುವ ಒಬ್ಬರು ಅಯ್ಯಂಗಾರ್ ದೊಡ್ಡ ಮನುಷ್ಯರು ತಮ್ಮ ನೆಂಟನಿಗೆ ಹೀಗೆ ಸುಳ್ಳು ಸರ್ಟಿಫಿಕೇಟನ್ನು ಕೊಟ್ಟಿಲ್ಲವೇ ? ಅವರನ್ನೇನು ಸರಕಾರದವರು ಡಿಸ್ ಮಿಸ್ ಮಾಡಿದ್ದಾರೆಯೇ ? ಎಲ್ಲ ಕಡೆಯೂ ಇಂಥ ಮೋಸಗಳು