ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ರಂಗಣ್ಣನ ಕನಸಿನ ದಿನಗಳು

ಮಾಡಬೇಕಾಗಿತ್ತು ? ಅವನು ಮಹಾ ದುರಹಂಕಾರಿ, ಸ್ವಾರ್ಥಪರ, ನೀಚ ! ಹೇಳು, ನೋಡೋಣ ?'

'ನನ್ನನ್ನು ಪರೀಕ್ಷೆ ಮಾಡುತ್ತೀರಾ ?'

'ಪರೀಕ್ಷೆ ಏನೂ ಅಲ್ಲ. ನಿನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣವೆಂದು ಕೇಳುತ್ತೇನೆ. ನಾನು ಮಾಡಿದ್ದು ಸರಿ, ನನ್ನದು ತಪ್ಪಿಲ್ಲ-ಎಂದು ನಾನು ತಿಳಿದು ಕೊಂಡಿದ್ದೇನೆ.'

'ನಿಮ್ಮದು ತಪ್ಪಿಲ್ಲ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಆವಲಹಳ್ಳಿಯ ಗೌಡರಿಗೂ ರಂಗನಾಧಪುರದ ಗೌಡರಿಗೂ ತಿಂಡಿಗಿಂಡಿ ಕೊಟ್ಟು ನಯವಾಗಿ ಮಾತನಾಡಿ ಸಿ ಅವರ ಸ್ನೇಹವನ್ನು ಸಂಪಾದಿಸಿದಿರಿ. ಕಲ್ಲೇಗೌಡ ಮಾಡಿದ ಪಾಪವೇನು ? ದಿವಾನರಾದಿಯಾಗಿ ಆತನನ್ನು ಮುಖಂಡನೆಂದು ಎಲ್ಲರೂ ಗೌರವಿಸುತ್ತಾರೆ ; ಆತನ ಮನೆಗೆ ಸಹ ಹೋಗುತ್ತಾರೆ. ನೀವು ಜಂಬದಿಂದ ಆತನನ್ನು ಒತ್ತರಿಸಿ ಬಿಟ್ಟರೆ, ಒಂದೆರಡು ದಿನ ಆತನ ಮನೆಗೂ ಹೋಗಿ, ಯೋಗಕ್ಷೇಮ ವಿಚಾರಿಸಿ, ನಿಮ್ಮ ಬಿಡಾರಕ್ಕೂ ಕರೆದುಕೊಂಡು ಬಂದಿದ್ದು ಆ ತೇಂಗೊಳಲು ಮತ್ತು ಬೇಸಿನ್ ಲಾಡುಗಳ ರುಚಿಯನ್ನು ತೋರಿಸಿದ್ದಿದ್ದರೆ ನಿಮಗೇನು ತಾನೆ ನಷ್ಟವಾಗುತ್ತಿತ್ತು ? ನೀವೇನೂ ಅವನ ಮನೆಯ ಬಾಗಿಲು ಕಾಯಬೇಕಾಗಿರಲಿಲ್ಲ ; ಅವನ ಮುಂದೆ ಹಲ್ಲುಗಿರಿಯ ಬೇಕಾಗಿರಲಿಲ್ಲ. ಸ್ನೇಹದ ಮಾಡಿಗೇನು ಕೊರತೆ ? ನಿಮಗೆ ಆತನನ್ನು ಕಂಡರೇನೇ ಎಲ್ಲೂ ಇಲ್ಲದ ದ್ವೇಷ ! ಈ ಇನ್ಸ್ಪೆಕ್ಟರು ನನ್ನನ್ನು ಸಡ್ಡೆಯೇ ಮಾಡುವುದಿಲ್ಲವಲ್ಲ ! ಎಂದು ಆತನಿಗೆ ನಿಮ್ಮ ಮೇಲೆ ಕೋಪ ! ಅದಕ್ಕೇಕೆ ಅವಕಾಶ ಕೊಟ್ಟಿರಿ ??

'ಆವನು ಹೇಳಿದ ಹಾಗೆಲ್ಲ ಮೇಷ್ಟರುಗಳ ವರ್ಗಾವರ್ಗಿ, ಬಡ್ತಿ ನಾನು ಮಾಡಬೇಕಾಗಿತ್ತೋ ??

'ನೋಡಿದಿರಾ ! ನಿಮಗೆ ಹೇಗೆ ಸಿಟ್ಟು ಏರುತ್ತದೆ ! ಆತ ಯಾವಾಗಲೋ ಶಿಫಾರಸುಮಾಡುವುದರಲ್ಲಿ ಸಮಯ ಸಂದರ್ಭ ನೋಡಿಕೊಂಡು ಹತ್ತಕ್ಕೆ ಎರಡೋ ಮೂರೋ ಮಾಡಿ ಕೊಟ್ಟರೆ ತಪ್ಪೇನು ? ಆವಲಹಳ್ಳಿಯ ಗೌಡರು ಶಿಫಾರಸು ಮಾಡಿಯೇ ಇಲ್ಲವೇ? ಮೇಷ್ಟರುಗಳಿಗೆ ಕಷ್ಟ ನಿಷ್ಟುರ ಕಾಯ