ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೪

ರಂಗಣ್ಣನ ಕನಸಿನ ದಿನಗಳು

ಬೋಂಡಗಳನ್ನೂ, ಲೋಟಗಳಲ್ಲಿ ಕಾಫಿಯನ್ನೂ ತೆಗೆದುಕೊಂಡು ಬಂದು ಮೇಜಿನ ಮೇಲಿಟ್ಟನು.

'ಸ್ವಲ್ಪ ಉಪಾಹಾರ ಸ್ವೀಕರಿಸಬೇಕು ! ಶ್ರೀಗಳವರು ಪೂಜಾಗೃಹದಲ್ಲಿದ್ದಾರೆ. ಅರ್ಧಗಂಟೆಯ ತರುವಾಯ ತಮ್ಮನ್ನು ಅವರಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ತಾವು ಒಬ್ಬರೇ ಅಲ್ಲಿಗೆ ದಯಮಾಡಿಸಬೇಕೆಂದು ಶ್ರೀಗಳವರು ತಿಳಿಸಿದ್ದಾರೆ' ಎಂದು ಪಾರುಪತ್ಯಗಾರನು ಹೇಳಿದನು.

ಉಪಾಹಾರ ಮುಗಿಯತು. ಆರ್ಧ ಗಂಟೆಯೂ ಮುಗಿಯಿತು, ಇದೇ ಉಡುಪಿನಲ್ಲಿ ಸ್ವಾಮಿಗಳ ದರ್ಶನಕ್ಕೆ ಬರಬಹುದೇ ? ಇಲ್ಲ.ಕೋಟು ರುಮಾಲುಗಳನ್ನು ತೆಗೆದಿಟ್ಟು ಬರಲೇ ? ' ಎಂದು ರಂಗಣ್ಣ ಕೇಳಿದನು,

'ಹೇಗೆ ಬಂದರೂ ಆಕ್ಷೇಪಣೆಯಿಲ್ಲ ಸ್ವಾಮಿ !”

ಪಾರುಪತ್ಯಗಾರ ಮುಂದೆ ರಂಗಣ್ಣ ಹಿಂದೆ ಹೊರಟರು. ತಾನು ಹೇಗೆ ನಡೆದುಕೊಳ್ಳಬೇಕು? ಏನೆಂದು ಆತನನ್ನು ಸಂಬೋಧಿಸಬೇಕು ? ಆತನೊಡನೆ ಏನನ್ನು ಮಾತನಾಡಬೇಕು ? ರಂಗಣ್ಣ ಆಲೋಚಿಸತೊಡಗಿದನು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಅವನು ಅದುವರೆಗೂ ಸಿಕ್ಕಿಕೊಂಡದ್ದೇ ಇಲ್ಲ. ಆ ಕಾಲಕ್ಕೆ ಏನು ಹೊಳೆಯುವುದೋ ಹಾಗೆ ಮಾಡೋಣವೆಂದು ತೀರ್ಮಾನಿಸಿ ಕೊಂಡು ರಂಗಣ್ಣ ಮೌನದಿಂದ ಹೊಗುತ್ತಿದ್ದನು. ಮಠದ ಮುಂಭಾಗದಲ್ಲಿ ಜನರ ಓಡಾಟ ಸುಮಾರಾಗಿತ್ತು. ಮುಂದಿನ ಕೈ ಸಾಲೆಯಲ್ಲಿ ಒಂದು ಎತ್ತರವಾದ ಗದ್ದುಗೆ ಇತ್ತು. ಅದರ ಮೇಲೆ ರತ್ನಗಂಬಳಿ ಹಾಕಿ ವ್ಯಾ ಘ್ರಾಜಿನವನ್ನು ಹರಡಿತ್ತು. ಕಾವಿಬಟ್ಟೆಯ ಮೇಲ್ಕಟ್ಟು ಮತ್ತು ಕಾವಿ ಬಟ್ಟೆಯ ಗವಸುಗಳಿದ್ದ ದಿಂಬುಗಳು ಇದ್ದು ವು. ಹಲವರು ಭಕ್ತರು ಆ ಗದ್ದುಗೆಯ ಬಳಿಗೆ ಹೋಗಿ ಅಲ್ಲಿದ್ದ ಪಾದುಕೆಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಪಕ್ಕದಲ್ಲಿದ್ದ ಹುಂಡಿಯ ಪೆಟ್ಟಿಗೆಯಲ್ಲಿ ಕಾಣಿಕೆಗಳನ್ನು ಹಾಕಿ ಬರುತ್ತಿದ್ದರು. ಹುಂಡಿ ಪೆಟ್ಟಿಗೆಯ ಪಕ್ಕದಲ್ಲಿ ದವಾಲಿಯ ಜವಾನ ಕೋಲು ಹಿಡಿದುಕೊಂಡು ನಿಂತಿದ್ದನು. ಕೈಸಾಲೆಯನ್ನು ದಾಟಿದಮೇಲೆ ದೊಡ್ಡ ದೊಡ್ಡ ಮರದ ಕಂಬಗಳ ವಿಶಾಲವಾದ ತೊಟ್ಟಿ, ಅಲ್ಲಿ ಹೆಚ್ಚು ಜನವಿರಲಿಲ್ಲ. ಆ