ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೦೭

ಮುಖಂಡರಿಗೆ ನಾವು ಹೇಳುತ್ತೇವೆ: ಇನ್ ಸ್ಪೆಕ್ಟರು ದೊಡ್ಡ ಮನುಷ್ಯರು. ದೇಶಾಭಿಮಾನದಿಂದ ಕೆಲಸ ಮಾಡುವ ದಕ್ಷರಾದ ಅಧಿಕಾರಿಗಳು ಅವರು ಜಂಬದಿಂದ ಇದ್ದುದು ಉಂಟು. ಆದರೆ ಇಲಾಖೆಯ ಗೌರವವನ್ನು ಎತ್ತಿ ಹಿಡಿಯಬೇಕೆಂದೂ ಇತರ ಇಲಾಖೆಯವರನ್ನು ಮೀರಿಸಿರಬೇಕೆಂದೂ ಹಾಗೆ ವರ್ತಿಸುತ್ತಿದ್ದರು. ಅದನ್ನೆಲ್ಲ ನೋಡಿ ಪೂರ್ವಾಶ್ರಮದಲ್ಲಿ ನಮಗೂ ಬಹಳ ಸಂತೋಷವಾಗುತ್ತಿತ್ತು ; ಉಪಾಧ್ಯಾಯರೆಲ್ಲ ಸಂತೋಷ ಪಡುಆದ್ದರು. ಅವರ ಅಧಿಕಾರ ಕಾಲದಲ್ಲಿ ವಿದ್ಯಾಭಿವೃದ್ಧಿ ಬಹಳ ಚೆನ್ನಾಗಿ ಆಯಿತು. ಉಪಾಧ್ಯಾಯರ ವಿಷಯದಲ್ಲಿ ಬಹಳ ಸಹಾನುಭೂತಿಯಿಂದ ಅವರು ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಯಾವುದೊಂದು ಕೆಟ್ಟ ನಡತೆಯೂ ಇರಲಿಲ್ಲ. ಅವುಗಳನ್ನೆಲ್ಲ ನೀವು ಸಹ ಮೆಚ್ಚಿಕೊಂಡಿದ್ದೀರಿ. ಆದ್ದರಿಂದ ಈಗ ನೀವಿಬ್ಬರೂ ಅವರಲ್ಲಿ ದ್ವೇಷ ಮಾಡದೆ ಸ್ನೇಹವನ್ನಿಡ ಬೇಕು. ಅವರು ಜನಾರ್ದನಪುರವನ್ನು ಬಿಟ್ಟು ಹೊರಡುವಾಗ ಅವರನ್ನು ಗೌರವಿಸಿ ಕಳಿಸಿಕೊಡಬೇಕು. ಏನು ಹೇಳುತ್ತೀರಿ ? '

'ಸ್ವಾಮಿಯವರ ಅಪ್ಪಣೆಯಂತೆ ನಾವು ನಡೆದು ಕೊಳ್ಳುತ್ತೇವೆ ! ಶಾಂತವೀರೇಶ್ವರನ ಸಾಕ್ಷಿಯಾಗಿ ನಾವು ಅವರ ಮೇಲಿನ ದ್ವೇಷವನ್ನು ತ್ಯಜಿಸಿ ಸ್ನೇಹ ಹಸ್ತವನ್ನು ನೀಡುತ್ತೇವೆ ! ? ಎಂದು ಮುಖಂಡರು ಹೇಳಿದರು.

ರಂಗಣ್ಣನು ಅಪ್ರತಿಭನಾದನು. ತನಗೆ ಶತ್ರುಗಳಾಗಿದ್ದ ಆ ಮೂವರು ಆ ಏಕಾಂತ ಗೃಹದಲ್ಲಿ ತನ್ನನ್ನು ಬರಮಾಡಿಕೊಂಡು ಏನು ಅಪಮಾನ ಮಾಡುವರೋ? ಏನು ಕೆಡುಕು ಮಾಡುವರೋ ? ಎಂದು ಶಂಕಿಸುತ್ತಿದ್ದಾಗ ಅಲ್ಲಿ ಶಾಂತಿ ಸಂಧಾನಗಳು | ಕಲ್ಲೇಗೌಡ ಮತ್ತು ಕರಿಯಪ್ಪನವರ ಶಪಥ ಪೂರ್ವಕವಾದ ಸ್ನೇಹ ಹಸ್ತ ! ಸ್ವಾಮಿಗಳು ಪ್ರಸನ್ನವದನರಾಗಿ ಶ್ರೇಯೋಸ್ತು !' ಎಂದು ಹರಸಿದರು ಬಳಿಕ ರಂಗಣ್ಣನ ಕಡೆಗೆ ತಿರುಗಿಕೊಂಡು,

'ನೀವು ಸಹ ವೈರವನ್ನು ಬಿಟ್ಟಿದ್ದೀರಿ ಎಂದು ಭಾವಿಸುತ್ತೇವೆ, ನಮ್ಮ ಮುಖಂಡರು ಬಹಳ ನೀಚರೆಂದು ದುರಭಿಪ್ರಾಯವಿಟ್ಟುಕೊಳ್ಳಬೇಡಿ, ಅವರೂ ನಾಡಿನ ಪುರೋಭಿವೃದ್ಧಿಗಾಗಿ ದುಡಿಯುವ