ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೧೩

ಮಾತು ಒಂದಿದೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ತಕ್ಕಷ್ಟು ಮುಂದುವರಿದಿಲ್ಲ ; ಸೇಕಡ ಹತ್ತರಷ್ಟು ಕೂಡ ಓದು ಬರಹ ಬಲ್ಲವರಿಲ್ಲ. ದುಃಸ್ಥಿತಿ ಆದಷ್ಟು ಬೇಗ ತೊಲಗಬೇಕು, ಸರಕಾರದವರು ಧಾರಾಳವಾಗಿ ಹಣವನ್ನು ಖರ್ಚು ಮಾಡಬೇಕು ; ಮತ್ತು ಆ ಹಣ ಪೋಲಾಗದಂತೆ ದಕ್ಷರಾದ ಉಪಾಧ್ಯಾಯರನ್ನೂ ದಕ್ಷರಾದ ಅಧಿಕಾರಿಗಳನ್ನೂ ನೇಮಿಸಿ ಎಚ್ಚರಿಕೆಯ ಕ್ರಮಗಳನ್ನು ಕೈಕೊಳ್ಳಬೇಕು. ಜನಗಳೂ ಮುಖಂಡರೂ ಈ ಮಹತ್ಪ್ರಯತ್ನದಲ್ಲಿ ಸಹಾಯವನ್ನೂ ಸಹಕಾರವನ್ನೂ ನೀಡಬೇಕು' ಎಂದು ಮುಂತಾಗಿ ಹೇಳಿ, ಸ್ವಾಮಿಯವರು ಮಾಡಿದ ಆತಿಥ್ಯವನ್ನು ಹೊಗಳಿ, ಎಲ್ಲರಿಗೂ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಣೆ ಮಾಡಿದನು.

ಸ್ವಾಮಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಮ್ಮ ಪೂರ್ವಾಶ್ರಮದ ವಿಚಾರವನ್ನೇನೂ ಪ್ರಸ್ತಾಪ ಮಾಡಲಿಲ್ಲ, ಚತುರ್ವಿಧ ಪುರುಷಾರ್ಥಗಳನ್ನು ವಿವರಿಸಿ, ಆ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಿನಲ್ಲಿ ಹೇಳಿರುವುದರ ಕಾರಣವನ್ನು ತಿಳಿಸಿದರು. “ಧರ್ಮದ ತಳಹದಿಯ ಮೇಲೆ ಲೋಕ ನಿಂತಿದೆ. ಧರ್ಮದ ಸ್ವರೂಪವನ್ನು ಎಲ್ಲರೂ ತಿಳಿದುಕೊಂಡು ಸದ್ಧರ್ಮಿಗಳಾಗ ಬೇಕು ; ಧರ್ಮಾರ್ಜನೆಗಾಗಿ ಆರ್ಥಾರ್ಜನೆ ; ಅರ್ಥದ ಮುಂದೆ ಕಾಮವನ್ನು ಹೇಳಿರುವುದಾದರೂ ಮುಂದೆ ಮೋಕ್ಷವನ್ನು ಹೇಳಿರುವುದರಿಂದ ಆ ಕಾಮ ಮೋಕ್ಷಪರವಾಗಿರಬೇಕೆಂದು ಎಲ್ಲರೂ ಗ್ರಹಿಸಬೇಕು' ಎಂದು ಮುಂತಾಗಿ ಆಧ್ಯಾತ್ಮ ವಿಚಾರಗಳನ್ನು ಕುರಿತು ಭಾಷಣ ಮಾಡಿದರು. ಬಳಿಕ ರಂಗಣ್ಣನ ವಿದ್ವತ್ತನ್ನೂ ಅವನ ಸೇವಾ ಬುದ್ಧಿಯನ್ನೂ ಪ್ರಶಂಸೆಮಾಡಿ ಈಗ ವರ್ಗವಾಗಿ ಬೆಂಗಳೂರಿಗೆ ಹೋಗುವುದಾದರೂ ಆಗಾಗ

ಜನಾರ್ದನಪುರದ ಪ್ರಾಂತಕ್ಕೆ ಬರುತ್ತಿರಬೇಕೆಂದೂ, ಮಠಕ್ಕೆ ಭೇಟಿ ಕೊಡುತ್ತಿರಬೇಕೆಂದೂ ಹೇಳಿದರು. ಕಲ್ಲೇಗೌಡರು ರಂಗಣ್ಣನಿಗೆ ಹೂವಿನ ಹಾರವನ್ನು ಹಾಕಿ ಹಣ್ಣುಗಳನ್ನು ಒಪ್ಪಿಸಿ ಮುಕ್ತಾಯ ಭಾಷಣ ಮಾಡಿದರು, 'ರಂಗಣ್ಣನವರು ಶೀಘ್ರದಲ್ಲಿಯೇ ದೊಡ್ಡ ಹುದ್ದೆಗೇರಿ ನಮ್ಮ ಪ್ರಾಂತಕ್ಕೆ ಜಿಲ್ಲಾಧಿಕಾರಿಗಳಾಗಿ ಬರಬೇಕೆಂ

20B