ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೬

ರಂಗಣ್ಣನ ಕನಸಿನ ದಿನಗಳು


'ಈಚೆಗೆ ತಾವು ನಮ್ಮ ಹಳ್ಳಿ ಕಡೆ ಬರಲೇ ಇಲ್ಲ ಸಾರ್ ! ಆಪ್ಪಣೆಯಾದರೆ ಇಲ್ಲೇ ಶಿಷ್ಯನ ಸೇವೆ ಸಲ್ಲಿಸೋಣ ಅಂತ ಬಂದಿದ್ದೇನೆ!”

ರಂಗಣ್ಣನು ನಗುತ್ತಾ, 'ನೀವೇನೂ ಹತಾರಗಳನ್ನು ತಂದುಕೊಂಡಿಲ್ಲವಲ್ಲ ಮೇಷ್ಟೆ !' ಎಂದು ಹೇಳಿದನು.

'ಎಲ್ಲಾ ಮಡಕೊಂಡಿದ್ದೆ ಆನೆ ಸಾರ್ ! ಹೊರಕ್ಕೆ ಕಾಣೋದಿಲ್ಲ !? ಎಂದು ಹೇಳಿ ಮುನಿಸಾಮಿ ಒಳಗೆ ಗೋಪ್ಯವಾಗಿದ್ದ ಕ್ರಾಪ್ ಮೆಷಿನ್ ಮತ್ತು ರೇಜರುಗಳನ್ನು ತೋರಿಸಿದನು.

ರಂಗಣ್ಣನು ನಗುತ್ತ, “ಆಗಲಿ ಮೇಷ್ಟೆ ! ಕೊಟಡಿಯೊಳಕ್ಕೆ ಬನ್ನಿ, ನಿಮ್ಮ ಪರಮಾಯಿಷಿ ಸೇವೆ ನನಗೆ ಪುನಃ ಲಭ್ಯವಿಲ್ಲವಲ್ಲ ಎಂದು ನನಗೂ ಬಹಳ ವ್ಯಸನವಾಗುತ್ತದೆ' ಎಂದು ಹೇಳಿ ಒಳ ಕೊಟಡಿಗೆ ಹೋದನು. ನೀರಮನೆಯಿಂದ ಬಿಸಿನೀರು, ಸೋಪು, ಬ್ರಷ್ ತಂದಿಟ್ಟುಕೊಂಡು, ಟವಲನ್ನು ಮೇಲೆ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತನು. ಮುನಿಸಾಮಿಗೆ ಆ ದಿನ ಉತ್ಸಾಹವಿರಲಿಲ್ಲ. ಪಾಪ ಮೇಷ್ಟು ಮಧ್ಯೆ ಮಧ್ಯೆ ಕಣ್ಣೀರನ್ನೊರಸಿಕೊಳ್ಳುತ್ತ, ಕ್ರಾಪು ಕತ್ತರಿ ಸುತ್ತ, 'ಸಾರ್ ! ತಾವು ಆ ದಿನ ಕೊಟ್ಟ ಸಲಹೆ ನನ್ನನ್ನು ಉದ್ಧಾರ ಮಾಡಿತು. ಈಗ ಸೆಲೂನ್ ಪಸಂದಾಗಿ ನಡೀತಿದೆ. ದಿನಕ್ಕೆ ಐದೂ ಆರೂ ರುಪಾಯಿ ಸಂಪಾದನೆ ಆಗುತ್ತಿದೆ ! ಈಗ ನಮ್ಮ ಹಳ್ಳಿಲಿ ಹುಡುಗರಿಗೆ ಉದ್ದ ಜುಟ್ಟೆ ಇಲ್ಲ ಸಾರ್ ! ನಮ್ಮ ಸ್ಕೂಲಿನಲ್ಲಂತೂ ಹುಡುಗರಿಗೆಲ್ಲ ಕ್ರಾಪೇ ! ಜೇನುಗೀನು ತುಂಬಿದ ಕೊಳಕು ಕೂದಲ ತಲೆಗಳೇ ಇಲ್ಲ ! ಮಕ್ಕಳೆಲ್ಲ ಕ್ರಾಪು ಬಾಚಿಕೊಂಡು ಠೀಕಾಗಿ ಬೆಳಗ್ಗೆ ಬರುತ್ತಾರೆ. ತಾವು ಬಂದು ನೋಡಬೇಕು ಸಾರ್ !' ಎಂದು ಹೇಳಿದನು.

'ನಾನೇನು ನೋಡುವುದು ಮೇಷ್ಟೆ ! ನಿಮ್ಮ ಕೆಲಸವನ್ನು ದೇವರೇ ಮೆಚ್ಚಿಕೊಳ್ಳುತ್ತಾನೆ.'

'ತಾವು ನನ್ನ ಗುರುಗಳು ಸಾರ್ ! ಗುರುಗಳು ದೇವರಿಗೆ ಸಮಾನ ! ಈಗ ದೊಡ್ಡವರೆಲ್ಲ ಕ್ರಾಪಿನ ಷೋಕಿ ಕಲಿತುಬಿಟ್ಟಿದ್ದಾರೆ. ಒಂದು ವಾರದ ಹಿಂದೆ ಶ್ಯಾನುಭೋಗರು ಏನೋ ಕೆಲಸಕ್ಕೆ ಸ್ಕೂಲ ಹತ್ತಿರ ಬಂದಿದ್ದರು.