ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಗಮನ ಸಮಾರಂಭ

೩೧೩

ನಾನು- ಸ್ವಾಮಿ! ಶ್ಯಾನುಭೋಗರೇ ! ಹಾಗೆಯೇ ಸೆಲೂನ್ ಬಳಿ ನಡೀರಿ, ಒಂದು ಕ್ರಾಪ್ ಹೊಡೀತೇನೆ ನಿಮಗೆ~ ಎಂದು ಹೇಳಿದೆ.'

'ಶ್ಯಾನುಭೋಗರಿಗೂ ಕ್ರಾಪ್ ಹೊಡೆದುಬಿಟ್ಟಿರಾ ಮೇಷ್ಟೆ ? ಎಂದು ರಂಗಣ್ಣ ನಗುತ್ತಾ ಕೇಳಿದನು.

'ಇಲ್ಲ ಸಾರ್! ಶ್ಯಾನುಭೋಗರು ನಕ್ಕು ಬಿಟ್ಟ ರು : ನಾನು ಮುದುಕ ; ಬ್ರಾಹ್ಮಣ್ಯಕ್ಕೆ ಸ್ವಲ್ಪ ಜುಟ್ಟಿರಲಿ ಮುನಿಸಾಮಿ ! ಮುಂದಿನ ತಲೆ ಮೊರೆ ಗಳೆಲ್ಲ ಬರಿ ಕ್ರಾಪಿನ ತಲೆಗಳೇ ಆಗುತ್ತವೆ. ನಾನು ಈ ವಯಸ್ಸಿನಲ್ಲಿ ಸುಧಾರಿಸಲಾ-ಎಂದು ಹೇಳಿದರು ಸಾರ್ !?

ಹೀಗೆ ಮಾತುಗಳನ್ನಾಡುತ್ತ ಮುನಿಸಾಮಿ ರಂಗಣ್ಣನಿಗೆ ಕ್ರಾಪು ಕತ್ತರಿಸಿ, ಕ್ಷೌರವನ್ನು ಮಾಡಿದನು. ಸ್ನಾನವಾಯಿತು. ರಂಗಣ್ಣ ಮುನಿಸಾಮಿಗೆ ಕಾಫಿಯನ್ನು ತಂದು ಕೊಟ್ಟು, 'ತೆಗೆದುಕೊಳ್ಳಿ ಮೇಷ್ಟೆ !? ಎಂದು ಉಪಚಾರ ಮಾಡಿ, ಅವನನ್ನು ಸಮಾಧಾನ ತಿಳಿಸಿ ಕೊಟ್ಟು, ಕಳಿಸಿದನು.

ಸ್ವಲ್ಪ ಹೊತ್ತಾದಮೇಲೆ ಗುಂಡೇನಹಳ್ಳಿ ಯ ರಂಗಪ್ಪ ಮೇಷ್ಟು ತಲೆಹಾಕಿದನು. ಏನು ಮೇಷ್ಟೆ ! ನನಗೆ ವರ್ಗವಾಗಿದೆ. ನಾನು ನಾಳೆಯೇ ಇಲ್ಲಿಂದ ಹೊರಡಬೇಕು. ನನ್ನ ಬಟ್ಟೆ ಬರೆ ಬರಲಿಲ್ಲ ! ಏನು ಮಾಡುತ್ತೀರಿ ?' ಎಂದು ರಂಗಣ್ಣ ಕೇಳಿದನು.

'ಎಲ್ಲಾ ಬಟ್ಟೇನೂ ತೊಳೆದು ಇಸ್ತ್ರಿ ಮಾಡಿ ತಂದಿದೇನೆ ಸ್ವಾಮಿ ! ತಮಗೆ ವರ್ಗ ಎಂದು ಸಮಾಚಾರ ತಿಳಿಯಿತು. ನನಗೆ ಬಹಳ ವ್ಯಸನ ಆಯಿತು. ಆ ವ್ಯಸನದಲ್ಲಿ ಸ್ವಾಮಿಯವರ ಸೇವೆ ಮಾಡಿ ಬಟ್ಟೆ ತಂದಿದ್ದೇನೆ

'ಒಳ್ಳೆಯದು ಮೇಷ್ಟೆ ! ಬಹಳ ಸಂತೋಷ, ನಿಮ್ಮ ಇಷ್ಟು ದಿನಗಳ ಸೇವೆಗೆ ಏನಾದರೂ ಪ್ರತಿಫಲ ನಾನು ಕೊಡ ಬೇಕು.?

'ನನಗೇಕೆ ಸ್ವಾಮಿ ಪ್ರತಿಫಲ ! ನಾನೇನೂ ತೆಗೆದುಕೊಳ್ಳೋದಿಲ್ಲ! ನಮಗೆಲ್ಲ ತಿಳಿವಳಿಕೆ ಕೊಟ್ಟು ಕಾಪಾಡಿಕೊಂಡು ಬಂದಿರಿ. ತಾವು ಇನ್ಸ್ಪೆಕ್ಟರು, ನಾವು ತಾಪೇದಾರರು ಎಂಬುವ ವ್ಯತ್ಯಾಸವೇ ಕಾಣಲಿಲ್ಲ.