ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೮

ರಂಗಣ್ಣನ ಕನಸಿನ ದಿನಗಳು


ಅಷ್ಟೊಂದು ಸಲಿಗೆಯಿಂದ ಅಣ್ಣ ತಮ್ಮಂದಿರಂತೆ ತಾವು ನಡೆಸಿಕೊಂಡು ಬಂದಿರಿ ಸ್ವಾಮಿ!?

ರಂಗಣ್ಣನು ಆ ಮೇಷ್ಟರಿಗೂ ಕಾಫಿ ತಂದು ಕೊಟ್ಟು ಉಪಚಾರ ಮಾಡಿ ಕಳಿಸಿದನು. ಆಮೇಲೆ ಬೊಮ್ಮನಹಳ್ಳಿಯಿಂದ ಹೆಡ್ ಮೇಷ್ಟು ವೆಂಕಟಸುಬ್ಬಯ್ಯ ಮತ್ತು ಮೇ ಷ್ಟು ವೆಂಕಣ್ಣ ಬ೦ದರು. ಮೇಷ್ಟು ವೆಂಕಣ್ಣ ನಿಗೆ ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ವರ್ಗವಾಗಿತ್ತು,

'ವೆಂಕಟಸುಬ್ಬಯ್ಯ ! ನಿಮ್ಮ ಕಾಗದ ಬಂದು ಸೇರಿತು. ಸದ್ಯ ; ನಿಮ್ಮ ಹಿರಿಯ ಅಳಿಯ ವಾಪಸು ಬಂದು ನಿಮ್ಮನ್ನು ಸೇರಿದನಲ್ಲ ! ನನಗೆ ಬಹಳ ಸಂತೋಷ ' ಎಂದು ರಂಗಣ್ಣ ಹೇಳಿದನು.

'ದೇವರ ದಯೆಯಿಂದ, ತಮ್ಮ ಆಶೀರ್ವಾದಫಲದಿಂದ ಬಂದು ಸೇರಿದ್ದಾನೆ ಸ್ವಾಮಿ ! ತಮಗೆ ಖುದ್ದಾಗಿ ವರ್ತಮಾನ ತಿಳಿಸೋಣವೆಂದು ಹಿಂದೆ ಬಂದಿದ್ದೆ. ಸ್ವಾಮಿ ಯವರ ಸವಾರಿ ಆಗ ಬೆಂಗಳೂರಿಗೆ ಹೋಗಿತ್ತು, ಅದರಮೇಲೆ ತಮಗೆ ಕಾಗದ ಬರೆದೆ.'

'ವಾಪಸು ಬರುವುದಕ್ಕೆ ಕಾರಣ ? ಅಳಿಯನಿಗೆ ಬುದ್ಧಿ ಬಂದಿರಬೇಕಲ್ಲವೆ ?'

'ಸ್ವಾಮಿ ! ಆ ನಾಟಕದ ಕಂಪೆನಿ ಪಾಪರ್ ಎದ್ದೊಯ್ತು ! ಅಲ್ಲಿ ಸೇರಿಕೊಂಡಿದ್ದವರು ಚೆದರಿಹೋದರು. ನಮ್ಮವನಿಗೆ ಕೂಳಿಗೆ ಮಾರ್ಗ ಕಾಣಲಿಲ್ಲ ! ಆ ಕಾಲಕ್ಕೆ ದೇವರೂ ಅವನಿಗೆ ಒಳ್ಳೆಯ ಬುದ್ದಿ ಕೊಟ್ಟ ಸ್ವಾಮಿ ! ಒಂದು ದಿನ ಸಾಯಂಕಾಲ ಇದ್ದಕ್ಕಿದ್ದ ಹಾಗೆ ನಮ್ಮ ಮನೆಗೆ ಬಂದ ! ನಮಗೆಲ್ಲ ಬಹಳ ಹೆದರಿಕೆಯಾಯಿತು. ಏನು ಅವಾಂತರ ಮಾಡುತ್ತಾನೋ ಎಂದು ಇದ್ದೆವು. ದೇವರ ದಯೆ ಸ್ವಾಮಿ ! ಅಳಿಯ ವಿಹಿತವಾಗಿ ನಡೆದು ಕೊಳ್ಳುತ್ತಿದ್ದಾನೆ. ಬೆಳಗ್ಗೆ ಹೊಲ ಗದ್ದೆಗಳ ಕಡೆಗೆ ಹೋಗಿ ನೋಡಿಕೊಂಡು ಬರುತ್ತಿದ್ದಾನೆ.'

'ಜಮೀನು ವಿಚಾರ, ಹಣದ ವಿಚಾರ ಪ್ರಸ್ತಾಪ ಮಾಡಿದನೋ ?'

'ಇಲ್ಲ ಸ್ವಾಮಿ ? ತನ್ನ ಪಾಡಿಗೆ ತಾನಿದ್ದಾನೆ. ತನ್ನ ಹೆಂಡತಿ ಹತ್ತಿರ ತನ್ನ ಕಥೆಯನ್ನೆಲ್ಲ ತಿಳಿಸಿ-~ ಈಗ ನನಗೆ ಬುದ್ಧಿ ಬಂತು, ಇನ್ನು