ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಗಮನ ಸಮಾರಂಭ

೩೨೧

ಅಲ್ಲಿ ನೋಡಿದರೆ ಸೀತಮ್ಮನವರು ಒಂದು ಸಣ್ಣ ಬುಟ್ಟಿಯನ್ನು ಪಕ್ಕದಲ್ಲಿಟ್ಟುಕೊಂಡು ತನ್ನ ಹೆಂಡತಿಯೊಡನೆ ಮಾತನಾಡುತ್ತ ಕುಳಿತಿದ್ದುದು ಕಂಡುಬಂತು. ತನ್ನ ಹೆಂಡತಿ ಯ ಮುಂದುಗಡೆ ಒಂದು ಬೆಳ್ಳಿಯ ತಟ್ಟೆಯಲ್ಲಿ ನಾಲ್ಕು ಕೋಡ ಬಳೆಗಳು ಇದ್ದು ವು. ಇನ್ಸ್ಪೆಕ್ಟರ್ ಸಾಹೇಬರನ್ನು ಕಂಡು ಸೀತಮ್ಮ ಸಂಭ್ರಮದಿಂದ ಎದ್ದು ನಮಸ್ಕಾರ ಮಾಡಿದಳು. ರಂಗಣ್ಣನ ಹೆಂಡತಿ ಗಂಡನಿಗೆ ಒಂದು ಮಣೆ ಹಾಕಿ, ಸ್ವಲ್ಪ ಕುಳಿತುಕೊಳ್ಳಿ. ಸೀತಮ್ಮನವರು ನಿಮಗಾಗಿ ಕೋಡಬಳೆ ಮಾಡಿಕೊಂಡು ಬುಟ್ಟಿ ಯಲ್ಲಿ ತಂದಿದ್ದಾರೆ. ಎರಡನ್ನು ಬಾಯಿಗೆ ಹಾಕಿಕೊಳ್ಳಿ. ಆಕೆಗೆ ಸಂತೋಷವಾಗುತ್ತದೆ' ಎಂದು ಹೇಳಿದಳು.

ರಂಗಣ್ಣ ಕುಳಿತುಕೊಂಡು, ಒಂದು ಕೋಡಬಳೆಯನ್ನು ಮೂಸಿ ನೋಡಿ ಸ್ವಲ್ಪ ಮುರಿಯಲು ಪ್ರಯತ್ನ ಪಟ್ಟನು. ಸೀತಮ್ಮ, 'ಸ್ವಲ್ಪವೂ ಎಣ್ಣೆ ಸೋಕಿಸಿಲ್ಲ ! ಅಪ್ಪಟ ತುಪ್ಪದಲ್ಲೇ ಕರದಿದ್ದೆನೆ ? ಕೊಬ್ಬರಿಯ ತುರಿ ಹೆಚ್ಚಾಗಿ ಬಿದ್ದಿದೆ ; ಅದರ ವಾಸನೆ ಸ್ವಲ್ಪ ಬರಬಹುದು ' ಎಂದು ಹೇಳಿದಳು.

“ಇದನ್ನೆಲ್ಲ ಮಾಡಿಕೊಂಡು ಹನ್ನೆರಡು ಮೈಲಿಯಿಂದ ಏಕೆ ಬಂದಿರಿ ಸೀತಮ್ಮನವರೇ ? ಬಹಳ ಶ್ರಮ ತೆಗೆದುಕೊಂಡಿರಲ್ಲ!'

'ಶ್ರಮ ಏನೂ ಇಲ್ಲ. ತಾವು ನಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿರಿ. ನನಗೆ ಸಾಹೇಬರು ಹಾಕಿದ್ದ ಜುಲ್ಮಾನೆ ವಜಾ ಮಾಡಿಸಿದಿರಿ. ಹಾಗೆ ವಿಶ್ವಾಸವಿಟ್ಟು ನೋಡಿ ಕೊಳ್ಳೋ ಜನ ಯಾರಿದ್ದಾರೆ ? ನನಗೆ ಪ್ರೀತಿಸೋ ಮಕ್ಕಳು ಮರಿಗಳು ಇಲ್ಲ ; ಆದರಿಸೋ ಬಂಧು ಬಳಗ ಇಲ್ಲ. ಯಾರಾದರೂ ಒಂದು ಒಳ್ಳೆಯ ಮಾತನಾಡಿದರೆ ಅವರೇ ನನಗೆ ಬಂಧುಗಳು ! ಒಂದು ಉಪಕಾರ ಮಾಡಿದರೆ ಅವರೇ ನನಗೆ ಮಕ್ಕಳು ! ತಮ್ಮ ಸಂಸಾರ ನೋಡಿ ನನಗೆ ಎಷ್ಟೋ ಸಂತೋಷ ! ದೇವರು ನಿಮ್ಮನ್ನೆಲ್ಲ ಚೆನ್ನಾಗಿರಲಿ !!

ರಂಗಣ್ಣ ಎರಡು ಕೋಡಬಳೆಗಳನ್ನು ತಿಂದು, ಊಟಕ್ಕೆ ಇಬ್ಬರು ಮೇಷ್ಟರುಗಳು ಬರುತ್ತಾರೆಂದು ಹೆಂಡತಿಗೆ ತಿಳಿಸಿದನು. ಸೀತಮ್ಮನವರನ್ನೂ ಊಟಕ್ಕೆ ನಿಲ್ಲಬೇಕೆಂದೂ ಹೇಳಿದನು. ತನ್ನ ಕೊಟಡಿಗೆ ಹಿಂದಿರು