ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಗಮನ ಸಮಾರಂಭ

೩೨೩

'ಏನು ಕೆಂಚಪ್ಪನವರೇ ! ಇದು ಬೋರ್ಡ್ ಒರಸುವ ಬಟ್ಟೆಯೇ ಏನು ?' ಎಂದು ನಗು ತ್ತಾ ಕೇಳಿದನು,

'ಅಲ್ಲ ಸ್ವಾಮಿ | ನಾನು ಬಡವ, ಆದರೆ ಸುಳ್ಳುಗಳು ಹೇಳೋ ಮನುಷ್ಯನಲ್ಲ ! ಇದು ಬೋರ್ಡ್ ಒರಸೋ ಬಟ್ಟೆ ಅಲ್ಲ ಸ್ವಾಮಿ! ಇದು ತಾವು ಕೃಪೆಮಾಡಿ ತೆಗೆದು ಕೊಟ್ಟ ರುಮಾಲು: ಒಂದನ್ನು ಅಗಸರವನಿಗೆ ಹಾಕಿದ್ದೇನೆ ; ಇನ್ನೊಂದನ್ನು ಇಗೋ ! ತಲೆಗೆ ಮಡಿಗಿಕೊಂಡಿದ್ದೇನೆ ಸ್ವಾಮಿ !!

'ಆ ರುಮಾಲನ್ನು ಏನು ಮಾಡಿದಿರಿ ??

'ಅದು ಬೋರ್ಡ್ ಒರಸೋ ಬಟ್ಟೆ ಸ್ವಾಮಿ ! ಬೋರ್ಡ್ ಒರಸೋದಕ್ಕೇನೆ ಮಡಗಿದ್ದೇನೆ ! ತಮ್ಮ ಆಪ್ಪಣೆಯಂತೆ ಸಣ್ಣ ಸಣ್ಣ ಚೌಕಗಳಾಗಿ ಕತ್ತರಿಸಿ ಉಪಯೋಗಿಸುತ್ತಾ ಇದ್ದೇನೆ. ನಾನು ಸುಳ್ಳು ಸಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ !?

'ಒಳ್ಳೆಯದು ಮೇಷ್ಟ್ರೆ ! ನಿಮ್ಮನ್ನು ಕಂಡರೆ, ನಿಮ್ಮನ್ನು ನೆನೆಸಿಕೊಂಡರೆ, ನನಗೆ ತುಂಬಾ ಸಂತೋಷವಾಗುತ್ತದೆ. ಈ ಕಲಿ ಕಾಲದಲ್ಲಿ ನಿಮ್ಮಂಥ ಸತ್ಯವಂತರು ಅತಿವಿರಳ !

ಆ ದಿನದ ಸಂಘದ ಸಭೆಯಲ್ಲಿ ಸಂತೋಷ ಸಂಭ್ರಮಗಳು ಕಾಣುತ್ತಿರಲಿಲ್ಲ. ಉಪಾಧ್ಯಾಯರು ಕಿಕ್ಕಿರಿದು ತುಂಬಿದ್ದರು. ಹಾಸ್ಯ ನಲಿವು ನಗು ಏನೂ ಇಲ್ಲದೆ ಬಹಳ ಗಂಭೀರವಾಗಿಯೂ, ಸ್ವಲ್ಪ ಮಟ್ಟಿಗೆ ಶೋಕಯುಕ್ತರಾಗಿಯೂ ಆ ಉಪಾಧ್ಯಾಯರು ಕುಳಿತಿದ್ದರು. ಸಂಪ್ರದಾಯದಂತೆ ದೇವತಾ ಪ್ರಾರ್ಥನೆ ಮತ್ತು ಸಂಗೀತ ಆದ ಮೇಲೆ ಕಾರ್ಯದರ್ಶಿಯೂ ಇನ್ನು ಕೆಲವರು ಉಪಾಧ್ಯಾಯರೂ ರಂಗಣ್ಣನ ಗುಣಕಥನ ಮಾಡಿ ಭಾಷಣ ಮಾಡಿದರು. ಅವರ ಮಾತುಗಳಲ್ಲಿ ಕಾಪಟ್ಯವೇನೂ ಇರಲಿಲ್ಲ. ರಂಗಣ್ಣ ಮಾತನಾಡಬೇಕಾಗಿ ಬಂತು. ಆ ಉಪಾಧ್ಯಾಯರಿಗೆ ಏನನ್ನು ಹೇಳುವುದು ! ಅವನಿಗೂ ಹೃದಯ ಭಾರವಾಗಿತ್ತು. ಸರಕಾರದ ನೌಕರನಾಗಿ ತಾನು ಕೆಲಸಮಾಡಿದ್ದರೂ ಅನೇಕ ಉಪಾಧ್ಯಾಯರ ಸ್ನೇಹವನ್ನು ಅವನು ಸಂಪಾದಿಸಿಕೊಂಡಿದ್ದನು. ಅವರ ಗೃಹಕೃತ್ಯಗಳ ಆಂತರ್ಯಗಳನ್ನೆಲ್ಲ ತಿಳಿದುಕೊಂಡಿದ್ದನು. ಹಲವರು ತಮ್ಮ ಸಂಸಾರ ವಿಚಾರ