ಪುಟ:ರಂಗಣ್ಣನ ಕನಸಿನ ದಿನಗಳು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ರಂಗಣ್ಣನ ಕನಸಿನ ದಿನಗಳು

ಹತ್ತು ರೂಪಾಯಿ ಸಂಬಳ, ಸರ್ಕಿಟಿನಿಂದ ಭತ್ಯ ಸರಾಸರಿ ಅವನಿಗೆ ತಿಂಗಳಿಗೆ ಐದು ರೂಪಾಯಿ ಗಿಟ್ಟುತ್ತದೆ. ಅಪ್ಪಣೆಯಾದರೆ ಒಬ್ಬ ಬ್ರಾಹ್ಮಣನನ್ನು ಗೊತ್ತು ಮಾಡುತ್ತೇನೆ. ನಮ್ಮ ಪೈಕಿಯೆ ಒಬ್ಬಾತ ಇದ್ದಾನೆ.'

ರಂಗಣ್ಣನಿಗೆ ಆ ಸಲಹೆ ಚೆನ್ನಾಗಿದೆಯೆಂದು ತೋರಿತು. ಹಾಗೆಯೇ ಮಾಡಿ ಶಂಕರಪ್ಪ ! ಆದರೆ ಮನುಷ್ಯ ಚೊಕ್ಕಟವಾಗಿರಬೇಕು ; ಮತ್ತು ಕೈದುಡುಕು ಇರಬಾರದು' ಎಂದು ಹೇಳಿದನು. ಅದರಂತೆ ಗೋಪಾಲ ಎಂಬ ಯುವಕನನ್ನು ನೇಮಕ ಮಾಡಿಕೊಂಡದ್ದಾಯಿತು. ಈ ಮಾತುಗಳು ಮುಗಿಯುವ ಹೊತ್ತಿಗೆ ಟಪಾಲು ಬಂತು. ಅದರಲ್ಲಿ ಶಂಕರಪ್ಪನ ವಿಳಾಸಕ್ಕೆ ಮೈಸೂರು ಸರ್ಕಾರಿ ಮೇಲೆ ಕಳುಹಿಸಿದ್ದ ದಪ್ಪವಾದೊಂದು ಕಟ್ಟೊಂದು ಬಂದಿತ್ತು. ರಂಗಣ್ಣ ಅದನ್ನು ಅವನ ಕೈಗೆ ಕೊಟ್ಟು 'ಇದೇನು ಶಂಕರಪ್ಪ ! ಈ ಕಟ್ಟು?' ಎಂದು ಕೇಳಿದನು. ಅವನು ಒಂದು ಕ್ಷಣ ಮೌನವಾಗಿದ್ದು ಬಳಿಕ, 'ಸ್ವಾಮಿಯವರಿಗೆ ಇದೆಲ್ಲ ಹೊಸದು. ರೇಂಜುಗಳಲ್ಲಿ ಹೀಗೆಲ್ಲ ನಡೆಯುತ್ತದೆ' ಎಂದನು. ಆ ಉತ್ತರದಿಂದ ರಂಗಣ್ಣನಿಗೆ ಏನೊಂದೂ ಅರ್ಧ ವಾಗಲಿಲ್ಲ.

'ಇವೇನು ಕಚೇರಿಯ ಕಾಗದಗಳೇ ?' ಎಂದು ರಂಗಣ್ಣ ಊಹೆ ಮಾಡಿ ಕೇಳಿದನು.

'ಹೌದು ಸ್ವಾಮಿ! ಇನ್ ಸ್ಪೆಕ್ಟರವರು ಫೈಸಲ್ ಆಗದೇ ಇದ್ದ ಕೆಲವು ಕಾಗದಗಳನ್ನೂ ಅರ್ಜಿಗಳನ್ನೂ ಜೊತೆಯಲ್ಲಿ ತೆಗೆದು ಕೊಡು ಹೋಗಿದ್ದರು. ಈಗ ಅವುಗಳಿಗೆಲ್ಲ ಉತ್ತರಗಳನ್ನು ಬರೆದು ಕಳಿಸಿದ್ದಾರೆ. ಜೊತೆಗೆ ಸ್ಕೂಲುಗಳ ತನಿಖೆ ವರದಿಗಳನ್ನು ಹಿಂದೆ ಬರೆದಿರಲಿಲ್ಲ ; ಅವುಗಳನ್ನೂ ಬರೆದು ಕಳಿಸಿದ್ದಾರೆ.'

'ಆ ಕಾಗದಗಳನ್ನೆಲ್ಲ ನಾನೇ ಫೈಸಲ್ ಮಾಡುತ್ತಿದ್ದೆನಲ್ಲ ??

'ತಾವು ಹೊಸಬರು ; ತಮಗೆ ಆ ವಿಷಯಗಳ ಪರಿಚಯ ಆಗಿರುವುದಿಲ್ಲ. ಅವರು ಅದನ್ನೆಲ್ಲ ಪರಿಚಯ ಮಾಡಿಕೊಂಡಿದ್ದವರು. ಆದ್ದರಿಂದ ಅವರೇ ಫೈಸಲ್ ಮಾಡಬೇಕೆಂದು ತೆಗೆದುಕೊಂಡು ಹೋಗಿದ್ದರು.'

'ನನಗೆ ತಿಳಿಯದೆ ಇಂಥ ಕಾರಬಾರು ನಡೆಯಬಾರದು ಶಂಕರಪ್ಪ! ಆ ಕಾಗದಗಳನ್ನು ನನ್ನ ಕೈಯಲ್ಲಿ ಕೊಟ್ಟು ಹೀಗೆ ಮಾಡಿ ಎಂದು ಸಲಹೆ