ಪುಟ:ರಂಗಣ್ಣನ ಕನಸಿನ ದಿನಗಳು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಂಬದ ಕೋಳಿ

೨೧

ಕೊಟ್ಟಿದ್ದರೆ ನಾನೇ ಫೈಸಲ್ ಮಾಡುತ್ತಿದ್ದೆ. ಚಾರ್ಜು ಕೊಟ್ಟು ಹೋದ ಮೇಲೆ ಇಲ್ಲಿಯ ಕಾಗದಗಳನ್ನೆಲ್ಲಾ ನನಗೆ ಕೊಟ್ಟು ಹೋಗಬೇಕಾಗಿತ್ತು. ಒಳ್ಳೆಯದು. ಆ ಕಟ್ಟಿನಲ್ಲಿರುವುದನ್ನು ನನಗೆ ಮೊದಲು ತೋರಿಸಿ ಆಮೇಲೆ ರವಾನೆ ಮಾಡಿ. ಎಲ್ಲಕ್ಕೂ ಹಿಂದಿನ ತಾರೀಕನ್ನು ಹಾಕಿ ರುಜು ಮಾಡಿದ್ದಾರೆ ಎಂದು ಕಾಣುತ್ತದೆ.'

'ಹೌದು ಸ್ವಾಮಿ.'

' ಸರಿ. ನಾನೇ ಅವರಿಗೆ ಬರೆಯುತ್ತೇನೆ. ಉಳಿದಿರುವ ಕಾಗದಗಳನ್ನೆಲ್ಲ ಹಿಂದಕ್ಕೆ ಕಳಿಸಿ ಬಿಡಲಿ.'

ಅಪ್ಪಣೆ ಸ್ವಾಮಿ!

'ನಾಳೆ ಬೆಳಗ್ಗೆ ಯಾವುದಾದರೂ ಒಂದೆರಡು ವಾರ ಶಾಲೆಗಳನ್ನು ನೋಡಿ ಕೊಂಡು ಬರುತ್ತೇನೆ ಹತ್ತನೆಯ ತಾರೀಕಿನಿಂದ ಸರ್ಕೀಟು ಹೊರಡೋಣ

'ಅಪ್ಪಣೆ ಸ್ವಾಮಿ !?

ಶಂಕರಪ್ಪನು ಹೊರಟು ಹೋದನು. ರಂಗಣ್ಣನಿಗೆ ಹೀಗೆ ಕಚೇರಿಯ ಹೊಸ ಹೊಸ ಅನುಭವಗಳುಂಟಾದುವು. ಗೋಡೆಗೆ ನೇತು ಹಾಕಿದ್ದ ನಕ್ಷೆಯನ್ನು ನೋಡುತ್ತ -- " ನಾಳೆ ಕಂಬದಹಳ್ಳಿ ಕಡೆಗೆ ಹೋಗಿ ಬರುತ್ತೇನೆ ರಸ್ತೆ ಇರುವ ಹಾಗೆ ಕಾಣುತ್ತದೆ : ಹೋಗಿ ಬರುವುದು ಎಲ್ಲ ಹತ್ತು ಹನ್ನೆರಡು ಮೈಲಿಗಳಷ್ಟು ದೂರ ಆಗುತ್ತದೆ. ಆದ್ದರಿಂದ ಬೈ ಸ್ಕಲ್ ಮೇಲೆ ಬೆಳಗ್ಗೆ ಏಳು ಗಂಟೆಗೆ ಹೊರಟರೆ ಹತ್ತು ಗಂಟೆಗೆಲ್ಲ ಹಿಂದಿರುಗಿಬರಬಹುದು ಎಂದು ತೀರ್ಮಾನಿಸಿ ಕೊಂಡನು.