ಪುಟ:ರಂಗಣ್ಣನ ಕನಸಿನ ದಿನಗಳು.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೨೩

ಮೈಸೂರುಗಳಲ್ಲಿಯೇ ಹೆಚ್ಚಾಗಿ ಓಡಾಡಿ ಅಭ್ಯಾಸವಿದ್ದವನು ರಂಗಣ್ಣ. ಕಡೆಗೆ ಡಿಸ್ಟ್ರಿಕ್ಟಿನ ಮುಖ್ಯ ಸ್ಥಳಗಳಲ್ಲಿ ಮೂರು ನಾಲ್ಕನ್ನು ಕೂಡ ಸರಿಯಾಗಿ ನೋಡಿರಲಿಲ್ಲ. ಆದ್ದರಿಂದ ಒಳನಾಡಿನಲ್ಲಿ ಬೋರೆಗೌಡನ ರಸ್ತೆಗಳು ಹೇಗಿರುತ್ತವೆ ಎನ್ನುವ ಅನುಭವವೇ ಇರಲಿಲ್ಲ. ನಕ್ಷೆಯಲ್ಲಿ ರಸ್ತೆ ಯ ಗೀಟನ್ನು ನೋಡಿ, ರಸ್ತೆ ಎಂದರೆ ಬೆಂಗಳೂರು ಪಟ್ಟಣದ ಕೃಷ್ಣರಾಜೇ೦ದ್ರ ರಸ್ತೆ ನರಸಿ೦ಹರಾಜ ರಸ್ತೆ ಅಲ್ಲದಿದ್ದರೂ ವಿಶ್ವೇಶ್ವರಪುರದ ಸಂದು ರಸ್ತೆಗಳಂತಾದರೂ ಇರಬಹುದು – ಎಂದು ತಿಳಿದುಕೊಂಡಿದ್ದನು. ಆದರೆ ಈ ರಸ್ತೆ ಹಾಗಿರಲಿಲ್ಲ. ರಸ್ತೆಗೆ ಜಲ್ಲಿ ಎಂದರೆ ಏನೆಂಬುದು ತಿಳಿದೇ ಇರಲಿಲ್ಲ. ಅಗಲ ಕಿರಿದು ; ಪಕ್ಕಗಳಲ್ಲಿ ಹಳ್ಳಗಳು, ಕೆಲವು ಕಡೆ ಆ ಹಳ್ಳಗಳಲ್ಲಿ ನೀರು. ರಸ್ತೆಯಲ್ಲಿ ಎತ್ತಿನ ಗಾಡಿಗಳು ಓಡಾಡಿ ಓಡಾಡಿ ಒಂದೊಂದು ಅಡಿಯಷ್ಟು ಹಳ್ಳಗಳು ಬಿದ್ದಿದ್ದ ಉದ್ದನೆಯ ಹಾದಿ; ಆ ಹಳ್ಳಗಳ ನಡುವೆ ಕಿರಿದಾದ ದಿಣ್ಣೆ; ಪಕ್ಕಗಳಲ್ಲಿ ಮತ್ತು ಅಡ್ಡಲಾಗಿ ಸಹ ಕೊರಕಲುಗಳು. ರಂಗಣ್ಣನಿಗೆ ಬೈಸ್ಕಲ್ ಮೇಲೆ ಹೋಗುವುದು ಬರುಬರುತ್ತಾ ದುಸ್ತರವಾಯಿತು. ಅಲ್ಲಲ್ಲಿ ಬೈಸ್ಕಲ್ ಮೇಲೆ ಸರ್ಕಸ್ ಮಾಡಬೇಕಾಗಿ ಬಂತು ; ಒಂದೆರಡು ಸಲ ಚಕ್ರಗಳು ಜಾರಿ ಬಂಡಿ ಜಾಡಿನ ಹಳ್ಳಕ್ಕೆ ಬೀಳಿಸಿದುವು. ಇದೇನೋ? ಫಜೀತಿಗೆ ಇಟ್ಟು ಕೊಂಡಿತು ಎಂದುಕೊಳ್ಳುತ್ತ, ಬೈಸ್ಕಲ್ಲಿಂದ ಇಳಿದು ಆದನ್ನು ತಳ್ಳಿಕೊಂಡು ಮುಂದಕ್ಕೆ ಹೊರಟನು. ಮುಂದೆ ರಸ್ತೆ ಉತ್ತಮ ವಾಗಿರಬಹುದು ಎಂಬುದೊಂದು ಆಶೆ ; ಹೊರಟವನು ಕೆಲಸವನ್ನು ಮುಗಿಸದೆ ಹಿಂದಿರುಗಬಾರದೆಂಬ ಸ್ವಾಭಿಮಾನ, ಆದ್ದರಿಂದ ಬೈಸ್ಕಲ್ಲನ್ನು ತಳ್ಳಿಕೊಂಡು ಮುಂದಕ್ಕೆ ಹೊರಟನು. ಒಂದು ಫರ್ಲಾಂಗು ದೂರ ಹೀಗೆ ಹೋದಮೇಲೆ ಅವನು ನಿರೀಕ್ಷಿಸಿದ್ದಂತೆಯೇ ಅಲ್ಲಿ ಗಟ್ಟಿನೆಲ, ಸಮ ರಸ್ತೆ ಇತ್ತು. ರಂಗಣ್ಣನಿಗೆ ಮನಸ್ಸಿನಲ್ಲಿ ಸಂತೋಷವಾಯಿತು. ಪಟ್ಟು ಹಿಡಿದು ಕೆಲಸ ಮಾಡಿದರೆ ಕಾರ್ಯ ಕೈಗೂಡುವುದು ಖಂಡಿತ ಎಂಬ ಹಿರಿಯರ ವಾಕ್ಯ ಜ್ಞಾಪಕಕ್ಕೆ ಬಂತು. ಬೈ ಸ್ಕಲ್ ಹತ್ತಿಕೊಂಡು ಹೊರಟನು. ಎರಡು ಫರ್ಲಾಂಗು ದೂರ ಹೋದಮೇಲೆ ಬೈಸ್ಕಲ್ ಇಳಿಯಬೇಕಾಯಿತು, ಮುಂದೆ ರಸ್ತೆಯಲ್ಲಿ ಅಡ್ಡಲಾಗಿ ಐವತ್ತು ಅಡಿ ಅಗಲಕ್ಕೆ ನೀರು. ಬಲಗಡೆಗೆ ನೋಡುತ್ತಾನೆ; ಜನಾರ್ದನಪುರದ ಭಾರಿ ಕೆರೆ ಕಾಣುತ್ತಾ