ಪುಟ:ರಂಗಣ್ಣನ ಕನಸಿನ ದಿನಗಳು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ರಂಗಣ್ಣನ ಕನಸಿನ ದಿನಗಳು

ಇದೆ ; ಅದರ ನೀರು ಹಿಂದಕ್ಕೆ ಒತ್ತು ಕೊಂಡು ಬಂದಿದೆ. ಜಾರಾಗಿ ನೀರಿನಲ್ಲಿ ಅದೃಶ್ಯವಾಗಿ ಐವತ್ತು ಅಡಿಗಳ ತರುವಾಯ ಪುನಃ ಏರುತ್ತಾ ಹೊರಟಿದೆ ಎಡಗಡೆ ಎಲ್ಲಿಯಾದರೂ ದಾಟಬಹುದೆನೋ ಎಂದು ಪರೀಕ್ಷೆ ಮಾಡಿದರೆ ಅಲ್ಲಿಯೂ ನೀರು, ಕೊಚ್ಚೆ, ಆಚೆಗೆ ಬೇಲಿ, ಬೇಲಿಯಾಚೆ ಗದ್ದೆಗಳು. ರಂಗಣ್ಣನಿಗೆ ಪ್ಯಾದ್ ಮತ್ ಆಗಿ ಹೋಯಿತು. ನೀರು ಎಷ್ಟು ಆಳವಿದೆಯೋ ತಿಳಿಯದು. ರಸ್ತೆ ಯಲ್ಲಿ ಜನರ ಓಡಾಟ ಕಾಣಲಿಲ್ಲ. ಹಿಂದಕ್ಕೆ ಹೊರಟು ಹೋಗೋಣವೆಂದರೆ ಪ್ರಥಮ ಪ್ರಯತ್ನದಲ್ಲಿಯೇ ಹೀಗೆ ಭಂಗಪಡುವುದೇ? ಉತ್ತರ ಕುಮಾರನಂತೆ ಬೆನ್ನು ತೋರಿಸಿ ಓಡುವುದೇ ? ಕೂಡದು ಎಂಬ ಹೆಮ್ಮೆ, ಸ್ವಲ್ಪ ಹೊತ್ತಿನೊಳಗಾಗಿ ಎದುರು ಕಡೆಯಿಂದ ಒಂದು ಎತ್ತಿನಗಾಡಿ ಬಂತು ಅದರ ಹಿಂದೆ ಕೆಲವರು ಗಂಡಸರೂ ಹೆಂಗಸರೂ ಬರುತ್ತಿದ್ದರು. ಗಾಡಿ ಸರಾಗವಾಗಿ ನೀರಿನಲ್ಲಿ ಇಳಿದು ಈಚೆಗೆ ಬಂತು. ಜನರೆಲ್ಲ ನೀರಿನಲ್ಲಿ ಇಳಿದು ಧಾರಾಳವಾಗಿ ನಡೆದು ಕೊಂಡು ಬಂದು ಬಿಟ್ಟರು. ನೀರಿನ ಆಳ ಮೊಣಕಾಲು ಮಟ್ಟಿಗೆ ಮಾತ್ರ ಎನ್ನುವುದು ತಿಳಿಯಿತು. ನೀರನ್ನು ದಾಟಿಬಂದ ಜನ ರಂಗಣ್ಣನನ್ನು ನೋಡಿ, " ಯಾಕ್' ಸೋಮಿ ಅಂಗ್ ನೋಡ್ತಾ ನಿಂತಿದ್ರಿ? ಮೊಣಕಾಲ್ ಮಟ್ಟ ನೀರೈ ತೆ, ಅಷ್ಟೆ. ಬೈಸ್ಕೂಲ್ ಮೇಗೇನೆೇ ನಡೀರಲಾ ಮತ್ತೆ' ಎಂದು ಹೇಳುತ್ತಾ ಹೊರಟು ಹೋದರು.

ರಂಗಣ್ಣ ಎರಡು ನಿಮಿಷಗಳ ಕಾಲ ಆಲೋಚನೆ ಮಾಡಿ, ಬೂಟ್ಸುಗಳನ್ನು ಬಿಚ್ಚಿ, ಕಾಲುಚೀಲಗಳನ್ನು ತೆಗೆದು ಷರಾಯನ್ನು ಮೊಣಕಾಲ ಮೇಲಕ್ಕೆ ಮಡಿಸಿಕೊಂಡು, ಆ ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಇಳಿದನು. ಬೈಸ್ಕಲ್ಲನ್ನು ತಳ್ಳುತ್ತ ಆಚೆಯ ದಂಡೆಯನ್ನು ಸೇರಿದನು. ಆ ದಿಗ್ವಿಜಯದ ಸಂತೋಷ ಹೇಳತೀರದು. ಆಚೆಗೆಹೋದಮೇಲೆ ಪುನಃ ಬೂಟ್ಸುಗಳನ್ನು ಹಾಕಿಕೊಳ್ಳುವುದು ಕಷ್ಟವಾಯಿತು. ಬೈಸ್ಕಲ್ಲನ್ನು ಒರಗಿಸಿಡುವುದಕ್ಕೆ ಮರವಿಲ್ಲ, ಗಿಡವಿಲ್ಲ; ಕಡೆಗೆ ಎತ್ತರದ ಒಂದು ಕಲ್ಲು ಸಹ ಇಲ್ಲ! ಆದರೆ ರಂಗಣ್ಣ ಒಳ್ಳೆಯ ಹಂಚಿಕೆಗಾರ. ಹಿಂದೆ ಸ್ಕೌಟುಮಾಷ್ಟರಾಗಿ ಇದ್ದವನು ! ಬೈಸ್ಕಲ್ಲನ್ನು ನೆಲದಮೇಲೆ ಮಲಗಿಸಿ ಏಕಪಾದ ಲೀಲೆಯನ್ನು ತಾಳಿ ಜಯಶೀಲನಾದನು. ಹೀಗೆ ಬೂಟ್ಸು