ಪುಟ:ರಂಗಣ್ಣನ ಕನಸಿನ ದಿನಗಳು.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೨೫

ಗಳನ್ನು ಧರಿಸಿದಮೇಲೆ ಗಡಿಯಾರವನ್ನು ನೋಡಿ ಕೊಳ್ಳುತ್ತಾನೆ. ಏಳೂವರೆ ಗಂಟೆ ಆಗಿಹೋಗಿತ್ತು. ಚಿಂತೆಯಿಲ್ಲ. ಇನ್ನೊಂದು ಅರ್ಧ ಗಂಟೆಯೊಳಗೆ ಕಂಬದಹಳ್ಳಿಯನ್ನು ಮುಟ್ಟುತ್ತೇನೆ. ಎಂದು ಧೈರ್ಯ ತಂದುಕೊಂಡು ಬೈ ಸ್ಕಲ್ಲನ್ನು ಹತ್ತಿ ಹೊರಟನು. ರಸ್ತೆ ಮೊದಲಿನಷ್ಟು ಕೆಡುಕಾಗಿರಲಿಲ್ಲ. ಆದರೆ ಅರ್ಧ ಮೈಲಿ ದೂರ ಹೋದನೋ ಇಲ್ಲವೋ ಜನಾರ್ದನ ಪುರದ ಕೆರೆಯ ನೀರು ಒದ್ದು ಕೊಂಡಿದ್ದ ಎರಡನೆಯ ಹರವು ಅಡ್ಡಲಾಯಿತು. ಆದರೆ ರಂಗಣ್ಣನಿಗೆ ಮೊದಲ ಹರವಿನ ಅನುಭವ ಇದ್ದುದರಿ೦ದಲೂ, ಅದರಲ್ಲಿ ತಾನು ಜಯಶಾಲಿಯಾಗಿದ್ದುದರಿ೦ದಲೂ ಈ ವಿಘ್ನ ಅವನನ್ನು ಹೆದರಿಸಲಿಲ್ಲ. ಮೊದಲಿನಂತೆಯೇ ರಂಗಣ್ಣ ಬೂಟುಗಳನ್ನು ಬಿಚ್ಚಿ ನೀರಿನ ಹರವನ್ನು ದಾಟಲು ಬೈಸ್ಕಲ್ಲನ್ನು ತಳ್ಳಿಕೊಂಡು ಇಳಿದನು. ಹತ್ತು ಅಡಿ ಹೋದಮೇಲೆ ನೀರು ಮೊಣಕಾಲ ಮಟ್ಟಕ್ಕೆ ಬಂತು. ಇನ್ನು ಐದು ಅಡಿ ಹೋಗುವುದರೊಳಗಾಗಿ ಆವನ ಷರಾಯಿಯ ಕೊನೆಗಳೆಲ್ಲ ತೊಯ್ದು ಹೋದವು. ಇನ್ನು ಐದು ಅಡಿಗಳ ದೂರ ಹೋಗುತ್ತಲೂ ತೊಡೆಗಳ ಅರ್ಧಕ್ಕೆ ನೀರಿನ ಮಟ್ಟ ಬಂತು. ಆಗ ರಂಗಣ್ಣನಿಗೆ ಪೇಚಾಟಕ್ಕಿಟ್ಟುಕೊ೦ಡಿತು ! ಆಳ ಇನ್ನೂ ಹೆಚ್ಚಾಗಿದೆಯೋ ಏನೋ ? ಮುಂದಕ್ಕೆ ಹೋಗುವುದೆ ? ಅಥವಾ ಹಿಂದಕ್ಕೆ ಹೊರಟು ಹೋಗುವುದೇ ? ಏನು ಮಾಡಲಿ ? ಎಂದು ಕೊಂಚ ಕಾಲ ಅವನು ಜಲಮಧ್ಯದಲ್ಲಿ ನಿಂತು ಸ್ಫೂರ್ತಿಗಾಗಿ ಉಗ್ರ ತಪಸ್ಸು ಮಾಡಿದನು ಗಾಡಿಗಳೂ ಜನರೂ ಓಡಾಡುವ ರಸ್ತೆ, ಬಹಳ ಆಳವಿದ್ದರೆ ಅವರು ಹೇಗೆ ತಾನೆ ಓಡಾಡಲು ಸಾಧ್ಯ? ಆದ್ದರಿಂದ ತೊಡೆಯ ಅರ್ಧಕ್ಕಿಂತ ಹೆಚ್ಚು ಆಳ ಇರಲಾರದು. ಹೀಗೆ ಪೂರ್ವಪಕ್ಷ ಪ್ರಮೇಯಗಳನ್ನು ಜೋಡಿಸಿ ಕೊಂಡು ಸಿದ್ದಾಂತ ಮಾಡಿದನು. ಅವನು ತರ್ಕಶಾಸ್ತ್ರದಲ್ಲಿ ದೊಡ್ಡ ಪಂಡಿತನಾಗಿದ್ದಿರಬೇಕೆಂದು ಯಾರಾದರೂ ಹೇಳಬಹುದು. ಆದರೆ ಅವನು ಹಿಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹುಡುಗ ! ತರ್ಕ ಗ್ರಂಥದ ಗಂಧವನ್ನೇ ಅರಿಯದ ಪಶು. ಕಡೆಗೆ ಅವನು ತರ್ಕಿಸಿದಂತೆಯೇ ನೀರು ತೊಡೆಯ ಅರ್ಧದಷ್ಟೇ ಆಳವಿದ್ದಿ ತು. ಸ್ವಲ್ಪ ಪ್ರಯಾಸಪಟ್ಟುಕೊಂಡು ರಂಗಣ್ಣ ಆಚೆಯ ದಂಡೆಯನ್ನು ಸೇರಿದನು. ತನ್ನ ಅವಸ್ಥೆಯನ್ನು ನೋಡಿ ಕೊಂಡು, `ನಕ್ಷೆ ನೋಡಿ