ಪುಟ:ರಂಗಣ್ಣನ ಕನಸಿನ ದಿನಗಳು.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೨೭

ಬೈಸಿಕಲ್ಲಿಂದ ಇಳಿದು ನಡೆದು ಕೊಂಡು ಹೊರಟನು. ನೀರು ಸ್ವಲ್ಪ ರಭಸವಾಗಿಯೇ ಹರಿಯುತ್ತಿದೆ. ಏನು ಮಾಡಬೇಕು ? ಆಳ ಎಷ್ಟಿದೆಯೋ ? ಎಂದು ಆಲೋಚಿಸುತ್ತ ನಿಂತಿದ್ದಾಗ, ಎದುರುಗಡೆಯಿಂದ ಗಾಡಿಯೊಂದು ಇಳಿದು ಬಂತು. ಆಳ ಎಷ್ಟಿದೆಯೇ ಎಂದು ರಂಗಣ್ಣನು ಕುತೂಹಲದಿಂದ ನೋಡಿದನು. ಚಕ್ರಗಳ ಗುಂಬ ನೀರಿನಲ್ಲಿ ಮುಳುಗಿಹೋಯಿತು. ಎತ್ತುಗಳ ಕಾಲುಗಳು ಕಾಣಿಸಿದ್ದವು. ಗಾಡಿ ಸಹ ಎಲ್ಲಿ ಕೊಚ್ಚಿ ಕೊ೦ಡುಹೋಗುವುದೋ ಎನ್ನುವ ಹೆದರಿಕೆ ಯ ಇತ್ತು. ಆದರೆ ಎತ್ತುಗಳು ಬಲ ವಾಗಿದ್ದುವು ; ಗಾಡಿಯವನೂ ಕಟ್ಟು ಮಸ್ತಾಗಿದ್ದನು. ಆದ್ದರಿಂದ ಗಾಡಿ ನೀರಹರವನ್ನು ದಾಟಿ ಈಚೆಯ ದಂಡೆಯನ್ನು ಹತ್ತಿ ಹೊರಟು ಹೋಯಿತು. ರಂಗಣ್ಣ ಆಧೈರ್ಯ ದಿಂದ ನಿಂತು ನೋಡುತ್ತಾ ಇದ್ದಾನೆ! ಕೆಲವರು ಗಂಡಸರು ಮೂಟೆಗಳನ್ನು ಹೊತ್ತು ಕೊಂಡು ಎದುರು ಕಡೆಯಿಂದ ಬರುತ್ತಿದ್ದಾರೆ. ಅವರೇನು ಮಾಡುತ್ತಾರೋ ನೋಡೋಣ. ಹಿಂದಕ್ಕೆ ಹೊರಟು ಹೋಗುತ್ತಾರೋ ಏನೋ ? ಎಂದು ರಂಗಣ್ಣ ನೋಡುತ್ತಿದ್ದಾನೆ. ಏನೊಂದು ಎಗ್ಗೂ ಇಲ್ಲದೆ ಬಟ್ಟೆಗಳನ್ನು ಮೇಲಕ್ಕೆತ್ತಿಕೊಂಡು ನೀರನ್ನು ದಾಟಿ ಹೊರಟೇ ಹೋದರು ! ಆ ದೃಶ್ಯವನ್ನು ನೋಡಿದ ಮೇಲೆ ರಂಗಣ್ಣನಿಗೆ, - ತನ್ನ ಸ್ವಾಭಿಮಾನ ಭಂಗ ವಾದರೂ ಚಿಂತೆಯಿಲ್ಲ, ಜನಾರ್ದನಪುರಕ್ಕೆ ಹಿಂದಿರುಗೋಣ-ಎಂದು ಆಲೋಚನೆ ಬಂತು. ಪುನಃ ಇಷ್ಟು ದೂರ ಬಂದಿದ್ದೇನೆ, ಹಳ್ಳಿ ಸಹ ಕಾಣುತ್ತಿದೆ, ಫಲ ಕೈಗೆ ಎಟಕುತ್ತಿರುವಾಗ ಪ್ರಯತ್ನವನ್ನು ಕೈಬಿಟ್ಟವರುಂಟೆ ? ಎಂದು ಮತ್ತೊಂದು ಆಲೋಚನೆ ಬಂತು. ಹೀಗೆ ಡೋಲಾಯಮಾನ ಸನಾಗಿದ್ದಾಗ ಎದುರಿಗೆ ಕೆಲವರು ಹೆಂಗಸರು ತಲೆಯಮೇಲೆ ಬುಟ್ಟಿಗಳನ್ನು ಹೊತ್ತು ಕೊಂಡು ಬರುತ್ತಿದ್ದ ರು. ಅವರು ಸಹ ನೀರಿಗಿಳಿದರು ! ಸಭ್ಯನಾದ ರಂಗಣ್ಣ ಬೈ ಸ್ಕಲ್ಲನ್ನು ತಿರುಗಿಸಿಕೊಂಡು ರಸ್ತೆಯನ್ನು ಹತ್ತಿ ಮೇಲಕ್ಕೆ ಹೊರಟನು. ಸ್ವಲ್ಪ ಹೊತ್ತಿನೊಳಗಾಗಿ ಹಿಂದೆ ಇದ್ದ ಹೆಂಗಸರು ನೀರನ್ನು ದಾಟಿ ರಂಗಣ್ಣನ ಮುಂದೆಯೇ ಹಾದು ಹೊರಟು ಹೋದರು. ಆಗ ರಂಗಣ್ಣ ದೃಢನಿಶ್ಚಯ ಮಾಡಿದನು. ಹೆಂಗಸರು ಕೂಡ ಹೆದರದೆ ನೀರನ್ನು ದಾಟಿ ಹೊರಟುಹೋದರು, ನಾನು ಅವರಿಗಿಂತ ಕೀಳಾಗಬೇಕೇ ? ಬಟ್ಟೆ ನೆನೆದರೆ ನೆನೆಯಲಿ,