ಪುಟ:ರಂಗಣ್ಣನ ಕನಸಿನ ದಿನಗಳು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ರಂಗಣ್ಣನ ಕನಸಿನ ದಿನಗಳು

ಉಗುಳುತ್ತ ಕುಳಿತಿದ್ದ ಮುದುಕರು. ಅವುಗಳನ್ನೆಲ್ಲ ನೋಡುತ್ತ ಒಂದಷ್ಟು ದೂರ ಹೋದಮೇಲೆ ಪಾಠ ಶಾಲೆ ಎಲ್ಲಿರುವುದೆಂಬುದನ್ನು ವಿಚಾರಿಸಲು ತೊಡಗಿದನು. ಪಕ್ಕದಲ್ಲಿ ಕೆಲವರು ಎಳೆಯ ಹುಡುಗರು ನಿಂತಿದ್ದರು. " ಇಲ್ಲಿ ಪಾಠಶಾಲೆ ಎಲ್ಲಿದೆ ? ತೋರಿಸುತ್ತೀಯಾ ? ' ಎಂದು ರಂಗಣ್ಣನು ಕೇಳಿದನು. ಉತ್ತರ ಹೇಳುವುದಕ್ಕೆ ಬದಲು ಆ ಹುಡುಗರು ಗಾಬರಿಯಾಗಿ " ಅಮ್ಮಾ!' ಎಂದು ಅಳುತ್ತಾ ಓಡಿ ಹೋದರು ! ಇನ್ನು ಸ್ವಲ್ಪ ದೂರ ಹೋದಮೇಲೆ ಎದುರಿಗೆ ಬರುತ್ತಿದ್ದ ಮಧ್ಯ ವಯಸ್ಸಿನ ಹಳ್ಳಿಯವನನ್ನು ನೋಡಿ, " ಅಯ್ಯಾ ! ಇಲ್ಲಿ ಪಾಠಶಾಲೆ ಎಲ್ಲಿದೆ' ಎಂದು ಕೇಳಿದನು,

'ನಂಗೊತ್ತಿಲ್ಲ ಸೋಮಿ. ಅದೇ ನೈತೋ ಅದೇ ನಿಲ್ಲೊ ಈ ಊರಾಗೆ, ನಾನೀಯೂರವನಲ್ಲ' ಎಂದು ಹೇಳುತ್ತ, ನಿಲ್ಲದೆ ಆ ಮನುಷ್ಯ ಹೊರಟೇ ಹೋದನು.

ರಂಗಣ್ಣ ಅಲ್ಲಿಯೇ ಸ್ವಲ್ಪ ನಿಂತು ಎದುರಿಗೆ ಬಂದ ಇಬ್ಬರು ಹಳ್ಳಿಯವರನ್ನು ನೋಡಿ, ಈ ಹಳ್ಳಿಯವರೇನಪ್ಪ ? ಕೇಳಿದನು.

'ಹೌದು ಸೋಮಿ !!

'ಇಲ್ಲಿ ಪಾಠಶಾಲೆ ಎಲ್ಲಿದೆ ? :

ಅವರು ಬೆಪ್ಪಾಗಿ ನಿಂತು ರಂಗಣ್ಣನನ್ನು ನೋಡುತ್ತ, ಶಾಲಾವ ? ಅದೇನ್ ಸೋಮಿ ಅಂಗಂದ್ರೆ ? ' ಎಂದು ಕೇಳಿದರು !

'ಸ್ಕೂಲ್, ಹುಡುಗರಿಗೆ ಪಾಠ ಹೇಳಿಕೊಡುವ ಶಾಲೆ ; ಪಾಠ ಶಾಲೆ.

'ಓಹೋ ! ಇಸ್ಕೊಲಾ ? ಹೈಕ್ಲಮನೆ, ಲೇ ಏಳ್ಲಾ ! ಎಲ್ಲಿತೋ ಇಸ್ಕೂಲು. ಸಾಹೇಬ್ರು ಕೇಳ್ತವ್ರೆ' ಎಂದು ಒಬ್ಬನು ಮತ್ತೊಬ್ಬನಿಗೆ ಹೇಳಿದನು.

'ಇಲ್ಲೇ ಎಲ್ಲೋ ಐತೆ ಸೋಮಿ ' ಎಂದು ಮತ್ತೊಬ್ಬನು ಹೇಳುತ್ತಾ ಬೆನ್ನು ನೋಟವನ್ನು ನಾಲ್ಕೂ ದಿಕ್ಕಿಗೂ ಬೀರುತ್ತಾ ನಿಂತೇ ಇದ್ದನು. ಅಷ್ಟು ಹೊತ್ತಿಗೆ ಕೆಲವರು ದೊಡ್ಡ ಹುಡುಗರು ಆ ಕಡೆ ಬರುತ್ತಿದ್ದರು, ಅವರನ್ನು ದೃಷ್ಟಿಸಿ, 'ತಾಳಿ ಸೋಮಿ ಆ ಹೈಕೃನ್ನ ಕೇಳಾಣ, ಅವರ್ಗೆ