ಪುಟ:ರಂಗಣ್ಣನ ಕನಸಿನ ದಿನಗಳು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬದಹಳ್ಳಿಗೆ ಭೇಟಿ

೩೧

ಗೊತ್ತೋ ಏನೋ? ಎಂದು ಒಬ್ಬ ಗೌಡನು ಹೇಳಿದನು. ಆ ಹುಡುಗರು ಸ್ಕೂಲಿನ ವಿದ್ಯಾರ್ಥಿಗಳಂತೆ ಕಂಡು ಬಂದದ್ದರಿಂದ ರಂಗಣ್ಣನೇ ಅವರನ್ನು 'ಇಲ್ಲಿ ಸ್ಕೂಲು ಎಲ್ಲಿದೆ ? ಎಂದು ಕೇಳಿದನು. ಅವರು ' ತೋರ್ಸ್ತ್ತೇವೆ ಬನ್ನಿ ಸಾರ್' ಎ೦ದು ಹೇಳಿ ಕರೆದುಕೊಂಡು ಹೊರಟರು. ಹಳ್ಳಿಯವರು, ' ಎಂಗಾನ ಆಗಲಿ, ಇಸ್ಕೂಲ್ ತೋರ್ಸೋ ರು ಸಿಕ್ಕರಲ್ಲ ನಮ್ಮಳ್ಳಿಗೆ' ಎಂದು ಆಡಿಕೊಳ್ಳುತ್ತ ಮುಂದಕ್ಕೆ ಹೊರಟರು.

ಒಂದು ಫರ್ಲಾ೦ಗು ದೂರ ಎರಡು ಮೂರು ಡೊಂಕು ಓಣಿಗಳನ್ನು ದಾಟಿದ ಮೇಲೆ ಹಳ್ಳಿಯ ಆಚೆಯ ಕೊನೆಯಲ್ಲಿ ಹಳ್ಳಿ ಹೆಂಚು ಹೊದಿಸಿದ್ದ ಒಂದು ಸಣ್ಣ ಕಟ್ಟಡ ಸಿಕ್ಕಿತು. ರಂಗಣ್ಣನಿಗೆ ಬಂದ ಕೆಲಸ ಸದ್ಯ ನೆರವೇರಿತಲ್ಲಾ ಎಂದು ಸಂತೋಷವಾಯಿತು. ಮುಂದುಗಡೆ ಗೋಡೆಗೆ ಬೈಸ್ಕಲ್ಲನ್ನು ಒರಗಿಸಿಟ್ಟು ಒಳಕ್ಕೆ ಹೋದನು. ಅಲ್ಲಿ ಎಂಟು ಹತ್ತು ಹುಡುಗರು ಎದ್ದು ನಿಂತುಕೊಂಡು, “ ನಮಸ್ಕಾರ ಸಾರ್ ? ಎಂದು ಕಿಂಚಿದರು. ರಂಗಣ್ಣ ಅವರಿಗೆ ನಮಸ್ಕಾರ ಮಾಡಿದನು. ಮುಂದೆ ನೋಡಿದರೆ ಮೇಷ್ಟರು ಕಣ್ಣಿಗೆ ಬಿ ಕೆಳಲಿಲ್ಲ. ಕುರ್ಚಿ ಖಾಲಿಯಾಗಿತ್ತು.

'ಈ ದಿನ ಮೇಷ್ಟರು ಬರಲಿಲ್ಲವೇ ?'

'ಇಲ್ಲಾ ಸಾರ್", ರಜಾದ ಮೇಲವ್ರೆ.'

'ನನ್ನೆ ಬಂದಿದ್ದರೇನು ?'

'ಇಲ್ಲಾ ಸಾರ್, ಎರಡು ದಿವ್ಸ ಬರೋದಿಲ್ಲ. ಕೆಲಸ ಐತೆ- ಎಂದು ಹೇಳವ್ರೆ.'

'ಮತ್ತೆ ಸ್ಕೂಲ್ ಬಾಗಿಲು ತೆರೆದಿದೆಯಲ್ಲ ? ಬೀಗ ಯಾರು ತೆಗೆದರು ?'

'ಬೀಗದ ಕೈ ನಮ್ತಾವ ಕೊಟ್ಟು ಹೋಗ್ತಾರೆ ಸಾರ್, ನಾವೇ ಬೀಗ ತೆಗೆದು ಒಳಗೆಲ್ಲ ಗುಡಿಸಿ ಚೊಕ್ಕ ಮಾಡ್ತೇವೆ. ಮೇಷ್ಟು ಆಮೇಲೆ ಬಂದು ಪಾಠ ಮಾಡ್ತಾರೆ.'

'ಮೇಷ್ಟು ಎಲ್ಲಿ ವಾಸಮಾಡುತ್ತಾರೆ ?'

'ನಾಗೇನಳ್ಳಿ ಸಾರ್. ಇಲ್ಲಿಗೆ ಎರಡು ಮೈಲಿ, ಮೇಷ್ಟು ಬೈಸ್ಕಲ್ ಮಡಕ್ಕೊಂಡವ್ರೆ.