ಪುಟ:ರಂಗಣ್ಣನ ಕನಸಿನ ದಿನಗಳು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ರಂಗಣ್ಣನ ಕನಸಿನ ದಿನಗಳು

ಮುಂದೆ ರಂಗಣ್ಣನಿಗೆ ಏನು ಮಾಡಬೇಕೆಂಬುದು ಹೊಳೆಯಲಿಲ್ಲ. ಐದು ನಿಮಿಷಗಳ ಕಾಲ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಂಡನು. ಮೇಜಿಗೆ ಮತ್ತು ಪೆಟ್ಟಿಗೆಗೆ ಬೀಗಗಳು ಹಾಕಿದ್ದುವು. ಸ್ಕೂಲಿನ ದಾಖಲೆಗಳೆಲ್ಲ ಒಳಗಿದ್ದುವು. ರಂಗಣ್ಣ ಸಪ್ಪೆ ಮೋರೆ ಮಾಡಿಕೊಂಡು ಚಿ೦ತಿಸುತ್ತ ಕುಳಿತಿದ್ದನು. ಅವನಿಗೆ ಮುಂದಿನ ಹಳ್ಳಿಗಳಿಗೆ ಹೋಗ ಬೇಕೆ೦ಬ ಆಶೆ ಅಳಿದು ಹೋಯಿತು, ಜನಾರ್ದನಪುರಕ್ಕೆ ಹಿಂದಿರುಗಿದರೆ ಸಾಕಪ್ಪ ಎಂದಾಯಿತು. ಆದರೆ ಈಗ ಜನಾರ್ದನಪುರಕ್ಕೆ ಹಿಂತಿರುಗುವುದು ಹೇಗೆ ? ಎಂದು ದೊಡ್ಡ ಯೋಚನೆ ಹಿಡಿಯಿತು. ಬಂದ ದಾರಿ ಹಿಡಿದುಕೊಂಡು ಹೋಗುವುದೇ ಹೊರತು ಬೇರೆ ಉಪಾಯ ಹೊಳೆಯಲಿಲ್ಲ, ನಿಟ್ಟುಸಿರು ಬಿಟ್ಟು ಕೊಂಡು ಎದ್ದನು. ಹೊರಕ್ಕೆ ಬಂದು ಬೈಸ್ಕಲ್ ತಳ್ಳಿಕೊಂಡು ಹೊರಟನು. ಆವನ ಅದೃಷ್ಟಕ್ಕೆ ಕೆರೆಯ ಹತ್ತಿರ ಒಂದು ಬೋಳು ಎತ್ತಿನಗಾಡಿ ಜನಾರ್ದನಪುರದ ಕಡೆಗೆ ನಿಧಾನವಾಗಿ ಹೋಗುತ್ತಾ ಇತ್ತು. ಗಾಡಿಯವನನ್ನು ಸ್ವಲ್ಪ ಮಾತನಾಡಿಸಿ ನೋಡಿದನು. ಅವನು ಒಳ್ಳೆಯ ಮನುಷ್ಯ. ನಾನು ದಾಟಕ್ಕೆನೆ ಬನ್ನಿ ಸೋಮಿ ' ಎಂದು ಹೇಳಿ ಗಾಡಿ ನಿಲ್ಲಿಸಿದನು. ತಾನೇ ಇಳಿದು ಬಂದು ಬೈಸಲ್ಲನ್ನು ಎತ್ತಿ ಒಳಗಿಟ್ಟು, 'ಏರ್ಕೊಳ್ಳಿ ಸೋಮಿ ' ಎಂದನು.

ರಂಗಣ್ಣ ಎಂದೂ ಬೋಳ ಗಾಡಿಯಲ್ಲಿ ಪ್ರಯಾಣ ಮಾಡಿದವನೇ ಅಲ್ಲ. ಆದರೆ ಆಗಿನ ಸಂದರ್ಭದಲ್ಲಿ ಆದು ಪುಷ್ಪಕ ವಿಮಾನದಂತೆ ಮನೋಹರವಾಗಿ ಕಂಡಿತು, ಕೋಡಿಯ ನೀರನ್ನು ದಾಟಿದ್ದಾಯಿತು. ಸಮರಸ್ತೆಗೆ ಬಂದಮೇಲೆ ಗಾಡಿಯಿ೦ದ ರಂಗಣ್ಣ ಇಳಿದನು. ಗಾಡಿಯವನು ಮುಂದೆ ಎರಡು ಕಾಲುವೆ ಐತೆ ಸೋಮಿ. ಬರ್ತಾ ಎಂಗೆ ಬಂದ್ರೋ ಕಾಣೆ, ಗಾಡಿಯಲ್ಲಿ ಏರ್ಕೊಳ್ಳಿ, ನಿಮ್ಮ ಮನೇತಾವ ಬಿಟ್ ಬಿಡ್ತೇನಿ? ಎಂದು ಹೇಳಿದ. ಆ ಸಲಹೆ ಹಿತವಾಗಿಯೇ ಕಂಡಿತು. ಪುನಃ ರಂಗಣ್ಣ ಗಾಡಿಯನ್ನು ಹತ್ತಿದನು. ಗಾಡಿಯವನೊಡನೆ ಮಾತುಕತೆ ಆಡುತ್ತಿದ್ದಾಗ ಒಬ್ಬರಿಗೊಬ್ಬರ ಪರಿಚಯ ಬೆಳೆಯಿತು.

'ನೀವು ಇಸ್ಕೋಲ್ ಇನ್ ಚ್ ಪೆಟ್ರಾ ? ನಮ್ಮಳ್ಳಿಗೊಂದು ಇಸ್ಕೋಲ್ ಕೊಡಿ ಸೋಮಿ ! ಈ ಇಸ್ಕೊಲ್ ಮೇಷ್ಟೂ ನೂವೆ ನಮ್ಮ