ಪುಟ:ರಂಗಣ್ಣನ ಕನಸಿನ ದಿನಗಳು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ರಂಗಣ್ಣನ ಕನಸಿನ ದಿನಗಳು

ಬೀರನಹಳ್ಳಿಗೆ ಬೇರೆ ನಾವು ಹೋಗಬೇಕು. ಆ ಗ್ರಾಮಸ್ಥರು ಒಂದು ಸ್ಕೂಲ್ ಬೇಕು ಎಂದು ಕೇಳುತ್ತಿದಾರೆ. ?

'ಸ್ವಾಮಿಯವರು ಇನ್ ಸ್ಪೆಕ್ಷನ್ ಮುಗಿಸಿಕೊಂಡು ಕೆಂಪಾಪುರಕ್ಕೆ ವಾಪಸ್ ಬರಬೇಕಾದರೆ ಮಧ್ಯಾಹ್ನ ಬಹಳ ಹೊತ್ತಾಗುತ್ತೆ, ಗುಂಡೇನಹಳ್ಳಿಯಲ್ಲಿ ಮೊಕ್ಕಾಂ ಮಾಡುವುದಕ್ಕೆ ಶಾನೆ ವಸತಿ ಇದೆ. ತಮ್ಮ ಪ್ರಯಾಣಕ್ಕೆ ಗ್ರಾಮಸ್ಥರು ಗಾಡಿಯನ್ನು ಕೂಡ ಕಳಿಸಿಕೊಟ್ಟಿದ್ದಾರೆ.'

ರಂಗಣ್ಣ ಸ್ವಲ್ಪ ಆಲೋಚನೆ ಮಾಡಿದನು: ಈ ಮೇಷ್ಟು ಭಾರಿ ಒಕ್ಕಲ ಕುಳವಾಗಿ ಕಾಣುತ್ತಾನೆ ; ಮಧ್ಯಾಹ್ನದ ಹೊತ್ತಿನಲ್ಲಿ ಐದು ಮೈಲಿ ವಾಪಸ್ ಬರುವುದಕ್ಕೆ ಬದಲು ಮಧ್ಯಾಹ್ನ ಅಲ್ಲೇ ವಿಶ್ರಾಂತಿ ತೆಗೆದುಕೊಂಡು ಸಾಯಂಕಾಲಕ್ಕೆ ತಂಪು ಹೊತ್ತಿನಲ್ಲಿ ಹಿಂದಿರುಗಬಹುದಲ್ಲ. ಮೇಷ್ಟರ ಸಲಹೆ ಚೆನ್ನಾಗಿದೆ. ಹೀಗೆ ಆಲೋಚನೆ ಮಾಡಿಕೊಂಡು, ಒಳ್ಳೆಯದು ಮೇಷ್ಟೆ ! ನೀವು ಹೇಳಿದ ಹಾಗೆಯೆ? ಆಗಲಿ ಎಂದು ಒಪ್ಪಿಕೊಂಡನು. ಮೇಷ್ಟು ರಂಗಪ್ಪ ಕೈಮುಗಿದು, ' ರಾತ್ರಿ ಗಾಡಿ ಇಲ್ಲೇ ಇರುತ್ತೆ ಸಾರ್, ಬೆಳಗ್ಗೆ ದಯಮಾಡ ಬೇಕು ' ಎಂದು ಹೇಳಿ ಹೊರಟು ಹೋದನು.

ಶಂಕರಪ್ಪ ಉಪಾಹಾರವನ್ನು ಮುಗಿಸಿಕೊಂಡು ಬರುತ್ತಲೇ ರಂಗಣ್ಣ ನಾಳೆಯ ದಿನದ ಏರ್ಪಾಟನ್ನು ಅವನಿಗೆ ವಿವರಿಸಿದನು. " ಏರ್ಪಾಟು ಚೆನ್ನಾಗಿದೆ ಸ್ವಾಮಿ. ಗುಂಡೇನಹಳ್ಳಿಯಲ್ಲಿ ನೆಮ್ಮದಿ ಕುಳ ಬಹಳ ಜನ ಇದ್ದಾರೆ' ಎಂದು ಅವನು ಸಹ ಒಪ್ಪಿಗೆ ಕೊಟ್ಟನು. ಮಾರನೆಯ ದಿನ ಬೆಳಗ್ಗೆ ಎಂಟು ಗಂಟೆಗೆ ಗುಂಡೇನಹಳ್ಳಿಯಲ್ಲಿ ಇನ್ಸ್ಪೆಕ್ಟರ್ ಸಾಹೇಬರ ಮೊಕ್ಕಾಂ ಪ್ರಾರಂಭವಾಯಿತು. ಇಳಿದು ಕೊಳ್ಳುವುದಕ್ಕೆ ಅಲ್ಲಿ ಒಂದು ಮನೆಯನ್ನು ಖಾಲಿ ಮಾಡಿ ಕೊಟ್ಟಿದ್ದರು. ಅದು ತಾರಸಿನ ಮನೆ ; ಬತ್ತ ಮೊದಲಾದ ದವಸಗಳನ್ನು ಶೇಖರಿಸಿಡುವ ಮನೆ, ಬಲಗಡೆ ಕೋಣೆಯಲ್ಲಿ ಒ೦ದು ಮಂಚ ಒಂದು ಕುರ್ಚಿ ಮತ್ತು ಒಂದು ಮೇಜು ಅಣಿಯಾಗಿದ್ದು ವು. ನೆಲಕ್ಕೆ ಜಮಖಾನವನ್ನೂ ಹಾಸಿತ್ತು. ಅಡಿಗೆಯ ಮನೆ ಮತ್ತು ಮನೆಗಳು ಚೆನ್ನಾಗಿದ್ದುವು. ಬೆಳಗಿನ ಉಪಾಹಾರವನ್ನು ಮುಗಿಸಿಕೊಂಡು ರಂಗಣ್ಣ ಪಾಠ ಶಾಲೆಗೆ ತನಿಖೆಯ ಬಗ್ಗೆ ಹೊರಟನು.