ಪುಟ:ರಂಗಣ್ಣನ ಕನಸಿನ ದಿನಗಳು.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ರಂಗಣ್ಣನ ಕನಸಿನ ದಿನಗಳು

ಪ್ರಾರಂಭಿಸಿದನು. ಲೆಕ್ಕಗಳಲ್ಲಿ ತಿಳಿವಳಿಕೆ ಚೆನ್ನಾಗಿತ್ತು. ಎರಡನೆಯ ತರಗತಿಯಲ್ಲಿ ಓದುಗಾರಿಕೆ ಸುಮಾರಾಗಿತ್ತು. ತರುವಾಯ ಮೂರನೆಯ ತರಗತಿಯಲ್ಲಿ ಪದ್ಯ ಪಾಠವನ್ನು ಸ್ವಲ್ಪ ಮಾಡುವಂತೆ ಇನ್ಸ್ಪೆಕ್ಟರ್ಸಾ ಹೇಬರು ಮೇಷ್ಟರಿಗೆ ಹೇಳಿದರು. ಹೀಗೆ ಕೇಳುತ್ತಾರೆಂದು ಆ ಮೇಷ್ಟರಿಗೆ ಮೊದಲೇ ವರ್ತಮಾನ ಬಂದಿದ್ದುದರಿಂದ ಅವನು ತಯಾ ರಾಗಿದ್ದನು. ಬೋರ್ಡನ್ನು ಒರಸಿ ಚೊಕ್ಕಟ ಮಾಡಿಟ್ಟು ' ಬಿಡುವು ಎಂಬ ಪದ್ಯ ಪಾಠವನ್ನು ಪ್ರಾರಂಭಿಸಿದನು. ಪಾಠಶಾಲೆಗಳಿಗೆ ರಜ ಬರುವ ಕಾಲ ಯಾವುದು ? ಹುಡುಗರು ಆಗ ಏನು ಮಾಡುತ್ತಾರೆ ? ಆಗ ಪ್ರಕೃತಿ ಹೇಗೆ ಕಾಣುತ್ತದೆ ? ಎಂತೆಲ್ಲ ಪ್ರಶ್ನೆಗಳನ್ನು ಕೇಳಿದನು. ಹುಡುಗರು ಚೆನ್ನಾಗಿ ಉತ್ತರ ಹೇಳಿದರು. ಆ ಉಪಾಧ್ಯಾಯನ ವಿಚಾರದಲ್ಲಿ ರಂಗಣ್ಣನಿಗೆ ಒಳ್ಳೆಯ ಅಭಿಪ್ರಾಯ ಬಂತು. ಪಾಠಕ್ಕೆ ಪೀಠಿಕೆ ಮುಗಿದ ನಂತರ ಹುಡುಗರು ಪದ್ಯವನ್ನು ಓದಲಾರಂಭಿಸಿದರು.

ಹೂಗಿಡದಲಿ ಹೂವರಳಿಹುದು
ಆಗಸಾ ತೊಳೆದಂತೆಸೆದಿಹುದು
ಕೂಗುವುವತ್ತಲು ಹಕ್ಕಿಗಳು
ಸಾಗುವೆವಾ ಬೆಟ್ಟದ ಬಳಿಗೆ,

ಎಂದು ಒಬ್ಬ ಹುಡುಗನು ಓದಿದನು. ರಂಗಣ್ಣನು ಸರಿಯಾಗಿ ಓದು, ತಪ್ಪಿಲ್ಲದೆ ಓದಬೇಕು' ಎಂದು ಸೂಚನೆ ಕೊಟ್ಟನು. ಆದರೂ ಪುನಃ ಹುಡುಗನು ಮೊದಲಿನಂತೆಯೇ ಓದಿದನು.

'ಮೇಷ್ಟೇ ! ನೀವು ಸರಿಯಾಗಿ ಓದಿ ತಿಳಿಸಿರಿ?'

ರಂಗಪ್ಪ ನು ಕೈಗೆ ಪುಸ್ತಕವನ್ನು ತೆಗೆದುಕೊಂಡು ವಿಕಾರ ರಾಗದಿಂದ 'ಹೂಗಿಡದಲಿ ಹೂವರಳಿಹುದು ; ಆಗಸ ತೊಳದಂತೆಸೆದಿಹುದು; ಕೂಗುವುವೆತ್ತಲು .......' ಎಂದು ಹುಡುಗನಂತೆಯೆ ಓದಿದನು.

'ಮೇಷ್ಟೇ ! ಆಗಸಾ ಎಂದು ಓದಬೇಡಿ. ಆಗಸ ಎಂದು ಓದಬೇಕು. ಪುಸ್ತಕ ಇಲ್ಲಿ ಕೊಡಿ ನೋಡೋಣ.'

'ಇದರಲ್ಲಿ ತಪ್ಪು ಬಿದ್ದಿದೆ ಸಾರ್ ! ಇಲಾಖೆಯ ಪುಸ್ತಕಗಳ ತುಂಬ ಬರೀ ತಪ್ಪುಗಳೇ ಇವೆ!'