ಪುಟ:ರಂಗಣ್ಣನ ಕನಸಿನ ದಿನಗಳು.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟು ರಂಗಪ್ಪ

೪೩

ಹೀಗೆ ರಂಗಪ್ಪ ಉತ್ತರಕೊಟ್ಟು ಮುಂದಕ್ಕೆ ಪಾಠ ಮಾಡತೊಡಗಿದನು.

'ಗಿಡಗಳಲ್ಲಿ ಎಷ್ಟು ವಿಧ'

'ನಾನಾವಿಧ ಸಾರ್'

'ಯಾವ್ಯಾವು ? ನೀನು ಹೇಳು'

'ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಸೊಪ್ಪಿನ ಗಿಡಗಳು, ಬೇಲಿಯ ಗಿಡಗಳು ಸಾರ್,?

'ಹೂವಿನ ಗಿಡಗಳು ಎಂದರೇನು ?'

'ಬರಿಯ ಹೂವು ಬಿಡುವ ಗಿಡಗಳು ಸಾರ್?'

'ಎರಡು ಉದಾಹರಣೆ ಕೊಡು.'

'ಜಾಜಿ ಮತ್ತು ಮಲ್ಲಿಗೆ ಸಾರ್ '

'ಆ ಹೂವುಗಳು ಅರಳಿದಾಗ ಹೇಗೆ ಕಾಣುತ್ತವೆ ?'

'ಬೆಳ್ಳಗೆ ಕಾಣುತ್ತೆ ಸಾರ್, ಅಗಸರು ಬಟ್ಟೆ ತೊಳೆದು ಮಡಿ ಮಾಡಿಟ್ಟ ಹಾಗೆ ಸಾರ್ !'

'ಸರಿಕುಳಿತುಕೊಳ್ಳಿ.'

ರಂಗಪ್ಪ ನು ತಾನು ಜಯಸಾಧನೆ ಮಾಡಿದೆನೆಂಬ ತೃಪ್ತಿ ಮತ್ತು ಸಂತೋಷಗಳಿ೦ದ ಇನ್ಸ್ಪೆಕ್ಟರ್ ಸಾಹೇಬರ ಕಡೆಗೆ ತಿರುಗಿಕೊಂಡು ಕೈ ಮುಗಿದನು.

'ಮೇಷ್ಟೆ ! ಮಕ್ಕಳನ್ನು ಆಟಕ್ಕೆ ಬಿಡಿ' ಎಂದು ರಂಗಣ್ಣ ಹೇಳಿದನು.

ಆದರಂತೆ ಮಕ್ಕಳು ಹೊರಕ್ಕೆ ಹೊರಟು ಹೋದರು.

'ಮೇಷ್ಟೇ ! ಪುಸ್ತಕದಲ್ಲಿ ಆಗಸ ತೊಳೆದಂತೆಸೆದಿಹುದು-ಎಂದು ಸರಿಯಾಗಿ ಮುದ್ರಣವಾಗಿದೆ. ನೀವು ತಪ್ಪು ತಪ್ಪಾಗಿ ಓದಿಕೊಂಡು ತಪ್ಪು ತಪ್ಪಾಗಿ ಮಕ್ಕಳಿಗೆ ಹೇಳಿಕೊಟ್ಟಿದ್ದೀರಿ. ನೀವು ತಿದ್ದಿಕೊಳ್ಳಬೇಕು'

'ಇಲ್ಲ ಸಾರ್ ! ಪುಸ್ತಕದಲ್ಲಿ ತಪ್ಪು ಬಿದ್ದಿದೆ ಸಾರ್ !'