ಪುಟ:ರಂಗಣ್ಣನ ಕನಸಿನ ದಿನಗಳು.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ರಂಗಣ್ಣನ ಕನಸಿನ ದಿನಗಳು

'ಅದು ಹೇಗೆ ತಪ್ಪು?'

'ನಾವು ಅಗಸರು ಸಾರ್ ! ಮಡಿ ಮಾಡೋವು ! ತೊಳೆಯೋದು ಎಂದರೆ ಬಟ್ಟೆ ಒಗೆಯೋದು ಎಂದು ಆರ್ಥ ! ನಾನು ಕಸಬಿನವನು ಸಾರ್.!'

ರಂಗಣ್ಣ ಆ ಮೇಷ್ಟರನ್ನು ನಖಶಿಖಾಂತವಾಗಿ ನಾಲ್ಕು ಬಾರಿ ನೋಡಿದನು! ಆ ಭಾರಿ ಸರಿಗೆ ರುಮಾಲನ್ನೂ ಆ ಭಾರಿ ಸರಿಗೆ ಪಂಚೆಯನ್ನು ಬಾರಿಬಾರಿಗೂ ನೋಡಿದನು ! ತನ್ನ ಮನಸ್ಸಿನಲ್ಲಿ ನಗು ಉಕ್ಕಿ ಬರುತ್ತಿತ್ತು. ' ನಾನೆಂತಹ ವೆಚ್ಚು ! ಭಾರಿ ಒಕ್ಕಲ ಕುಳ ಎಂದು ತಿಳಿದು ಕೊಂಡೆನಲ್ಲ - ಎಂದು ಕೈ ವಸ್ತ್ರದಿಂದ ತನ್ನ ಬಾಯನ್ನು ಮರೆಮಾಡಿಕೊ೦ಡನು. ಎರಡು ನಿಮಿಷ ಸುಧಾರಿಸಿಕೊಂಡು, “ಮೇಷ್ಟ್ರೆ ! ಈ ಸ್ಟೂಲಿನ ಮೇಲೆ ಕುಳಿತುಕೊಳ್ಳಿ' ಎಂದು ಹೇಳುತ್ತ ಕೈ ಹಿಡಿದು ರಂಗಪ್ಪನನ್ನು ಕುಳ್ಳಿರಿಸಿದನು.

'ಈ ಪದ್ಯದಲ್ಲಿ ಹೂಗಿಡಗಳ ವಿಚಾರ ಮತ್ತೂ ಆಕಾಶದ ವಿಚಾರ ಹೇಳಿದೆ. ಹೂವಿನ ಗಿಡಗಳಲ್ಲಿ ಹೂವುಗಳೆಲ್ಲ ಅರಳಿವೆ ; ನೋಡುವುದಕ್ಕೆ ಚೆನ್ನಾಗಿ ಕಾಣುತ್ತವೆ ಎನ್ನುವುದು ಮೊದಲನೆಯ ಪಂಕ್ತಿಯ ಅಭಿಪ್ರಾಯ, ಆಕಾಶದಲ್ಲಿ ಮೋಡಗಳೇನೂ ಇಲ್ಲ ; ನಿರ್ಮಲವಾಗಿ ಕಾಣುತ್ತಿದೆ ಎನ್ನುವುದು ಎರಡನೆಯ ಪಂಕ್ತಿಯ ಅಭಿಪ್ರಾಯ. ಆಕಾಶ ಎನ್ನುವುದು ಸಂಸ್ಕೃತದ ಮಾತು. ಅದಕ್ಕೆ ಆಗಸ ಎನ್ನುವುದು ತದ್ಭವ, ಪುಸ್ತಕದಲ್ಲಿ ಸರಿಯಾಗಿದೆ. ನೀವು ಆಗಸರು, ಆದ್ದರಿಂದ ಪುಸ್ತಕದಲ್ಲಿಯೂ ಅಗಸ ಇರಬೇಕು ಎಂದು ತಪ್ಪು ತಿಳಿದುಕೊಂಡಿರಿ. ಈಗ ಅರ್ಥವಾಯಿತೋ?

'ಆಯಿತು ಸಾರ್ ! ನಮಗೆ ಯಾರೂ ಇದನ್ನು ತಿಳಿಸಲೇ ಇಲ್ಲ ಸಾರ್ ! >

ಒಳ್ಳೆಯದು. ಈಗ ನಾನು ತಿಳಿಸಿದ್ದೆನಲ್ಲ. ಮುಂದೆ ಹೀಗೆ ತಪ್ಪು ಮಾಡಬೇಡಿ. ನೀವು ಹಾಕಿಕೊಂಡಿರುವ ಈ ಜರ್ಬಿನ ಉಡುಪು ತೊಳೆಯುವುದಕ್ಕೋಸ್ಕರ ಬಂದಿದೆಯೋ ?

' ಹೌದು ಸಾರ್. ನಾಲ್ಕು ವಾರದ ಹಿಂದೆ ದೊಡ್ಡ ಗೌಡರ ಮಗನಿಗೆ ಮದುವೆ ಆಯಿತು. ಇವೆಲ್ಲ ಆಗ ವರನಿಗೆ ಕೊಟ್ಟಿದ್ದ ಬಟ್ಟೆಗಳು!