ಪುಟ:ರಂಗಣ್ಣನ ಕನಸಿನ ದಿನಗಳು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟು ರಂಗಪ್ಪ

೪೫

ತೊಳೆಯುವುದಕ್ಕೆ ನಮ್ಮ ಮನೆಗೆ ತಂದುಹಾಕಿದ್ದರು. ಬಟ್ಟೆಗಳು ಇನ್ನೂ ಮಾಸಿರಲಿಲ್ಲ. ಹೊಸ ಬಟ್ಟೆಗಳು ಚೆನ್ನಾಗಿ ಮಾಸಿದ ಮೇಲೆ ತೊಳೆದರೆ ಬೆಳ್ಳಗಾಗುತ್ತವೆ. ಸ್ವಾಮಿಯವರ ಸವಾರಿ ಬರುತ್ತೆ ಎಂದು ವರ್ತಮಾನ ಬಂದ ಮೇಲೆ........!

ಠೀಕಾಗಿ ಇನ್ಸ್ಪೆಕ್ಟರ್ ಸಾಹೇಬರ ಮುಂದೆ ಕಾಣೋಣ ಎಂದು ಹಾಕಿಕೊ೦ಡರೋ ?

ಹೌದು ಸಾರ್ ?

ರಂಗಪ್ಪ ಅರ್ಧ ನಾಚಿಕೆಯಿಂದ ಮುಖವನ್ನು ತಗ್ಗಿಸಿಕೊಂಡನು.

ನೀವು ಚೆನ್ನಾಗಿ ಪಾಠ ಮಾಡುತ್ತಿರಿ ಮೇಷ್ಟೇ. ನೋಡಿ ಸಂತೋಷವಾಯಿತು, ”

ಈ ಪ್ರೋತ್ಸಾಹದ ಮಾತುಗಳಿಂದ ರಂಗಪ್ಪ ಮುಖವನ್ನು ಎತ್ತಿ, ಟೈನಿಂಗ್ ಆಗಿದೆ ಸಾರ್ ? ಎಂದನು.

ಈ ಪ್ರಕರಣ ಇಲ್ಲಿಗೆ ಮುಗಿಯಿತು. ಶಂಕರಪ್ಪ ಸ್ಕೂಲಿನ ದಾಖಲೆಗಳನ್ನು ನೋಡಬಂದವನು ಬೀರನಹಳ್ಳಿಗೆ ಹೋಗಿ ಬರುವ ಕಾರ್ಯಕ್ರಮ ಇದೆಯೆಂದು ಜ್ಞಾಪಕ ಕೊಟ್ಟನು. ಹಾಗಾದರೆ ಉಳಿದ ತನಿಖೆ ಮಧ್ಯಾಹ್ನ ಮಾಡೋಣ ” ಎಂದು ಹೇಳಿ ರಂಗಣ್ಣ ತನ್ನ ಬಿಡಾರಕ್ಕೆ ಹೊರಟನು. ಮೇಷ್ಟರು ರಂಗಪ್ಪನೂ ಜೊತೆಯಲ್ಲಿ ಬರುತ್ತ ತನಗೇನಾದರೂ ಪ್ರಮೋಷನ್ ಕೊಡಿಸಬೇಕೆಂದು ಅರಿಕೆ ಮಾಡಿಕೊಂಡನು. ಬೀಡಾರದ ಬಳಿ ಆ ಹಳ್ಳಿಯ ಮುಖಂಡರು ಮತ್ತು ಬಿಡದಿಯ ಮನೆಯ ಯಜಮಾನ - ಎಲ್ಲ ಐದಾರು ಜನ ಸೇರಿದ್ದರು. ಅವರು ಇನ್ಸ್ಪೆಕ್ಟರಿಗೆ ನಮಸ್ಕಾರ ಮಾಡಿ ನಿಂಬೇಹಣ್ಣುಗಳನ್ನು ಸಮರ್ಪಿಸಿದರು. ಒಳಗೆ ಹಜಾರದಲ್ಲಿ ಜಮಖಾನ ಹಾಸಿತ್ತು. ಕುರ್ಚಿ ಮೇಜು ಹಾಕಿತ್ತು. ಸಾಹೇಬರು ಕುರ್ಚಿಯ ಮೇಲೆ ಕುಳಿತುಕೊಂಡರು. ಉಳಿದವರು ಜಂಖಾನದ ಮೇಲೆ ಕುಳಿತುಕೊಂಡರು. ಮನೆಯ ಯಜಮಾನನು ಒಳಗಿನಿಂದ ಕಿತ್ತಳೆಹಣ್ಣು, ಬಾಳೆಯಹಣ್ಣು, ಖರ್ಜೂರ, ಬಾದಾಮಿ, ದ್ರಾಕ್ಷೆ ತುಂಬಿದ್ದ ಬೆಳ್ಳಿಯ ತಟ್ಟೆಯನ್ನು ತಂದಿಟ್ಟನು, ಹೊತ್ತಿನೊಳಗಾಗಿ ಗೋಪಾಲ ದೊಡ್ಡ ಲೋಟದ ತುಂಬ ಹದವಾದ