ಪುಟ:ರಂಗಣ್ಣನ ಕನಸಿನ ದಿನಗಳು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ರಂಗಣ್ಣನ ಕನಸಿನ ದಿನಗಳು

ಹಾಲನ್ನು ತಂದು ಮೇಜಿನ ಮೇಲಿಟ್ಟನು. ಯಜಮಾನನು, 'ತಗೋಬೇಕು ಸ್ವಾಮಿಯವರು. ಈ ದಿನ ಇಲ್ಲಿ ಮೊಕ್ಕಾಂ ಮಾಡಿದ್ದು ನಮಗೆಲ್ಲ ಬಹಳ ಸಂತೋಷ ಸ್ವಾಮಿ, ತಮ್ಮ ಕಾಲದಾಗೆ ವಿದ್ಯೆ ಚೆನ್ನಾಗಿ ಹರಡಿದೆ ಸ್ವಾಮಿ' - ಎಂದು ಉಪಚಾರೋಕ್ತಿಯನ್ನಾಡಿದನು, ರಂಗಣ್ಣನು ಸಮಯೋಚಿತವಾಗಿ ಉತ್ತರ ಕೊಟ್ಟನು. ಮಾತನಾಡುತ್ತ ಹಾಲನ್ನು ಮುಗಿಸಿ ನಾಲ್ಕು ಬಾಳೆಯಹಣ್ಣು ಎರಡು ಕಿತ್ತಳೆ ಹಣ್ಣುಗಳನ್ನು ಹೊಟ್ಟೆಗೆ ಸೇರಿಸಿದನು. ಆ ಹೊತ್ತಿಗೆ ಎರಡು ಎಳನೀರು ಕೆ ಸಿದ್ಧವಾಗಿ ಬಂದುವು. ಅವುಗಳಲ್ಲಿ ಒಂದನ್ನು ಖಾಲಿ ಮಾಡಿದನು. ಇಷ್ಟೆಲ್ಲ ಸಿದ್ಧತೆ ಗಳನ್ನು ಮಾಡಿಕೊಂಡು ಗಾಡಿಯಲ್ಲಿ ಕುಳಿತು ಬೀರನಹಳ್ಳಿಗೆ ಹೊರಟನು. ಜೊತೆಯಲ್ಲಿ ಶಂಕರಪ್ಪ ಮತ್ತು ಮೇಷ್ಟು ರಂಗಪ್ಪ ಇದ್ದರು. ಅಲ್ಲಿಗೆ ಹೋಗಿ ವಿದ್ಯಮಾನಗಳನ್ನು ನೋಡಿ ಕೊಂಡು ಹಿಂದಿರುಗಬೇಕಾದರೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಯಾಯಿತು. ಊಟ ಮಾಡಿದನಂತರ ಸ್ವಲ್ಪ ವಿಶ್ರಮಿಸಿಕೊಂಡು ಗುಂಡೇನಹಳ್ಳಿಯ ಸ್ಕೂಲಿನ ತನಿಖೆ ಮುಗಿಸಿ ಕೊಂಡು ರಾತ್ರಿ ಎಂಟು ಗಂಟೆಗೆ ಪುನಃ ಕೆಂಪಾಪುರವನ್ನು ಇನ್‌ಸ್ಪೆಕ್ಟರು ತಲುಪಿದ್ದಾಯಿತು.