ಪುಟ:ರಂಗಣ್ಣನ ಕನಸಿನ ದಿನಗಳು.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ರಂಗಣ್ಣನ ಕನಸಿನ ದಿನಗಳು

ನೋಟೀಸ್ ಹಾಕಿತ್ತು. ತನ್ನ ಸರ್ಕ್ಯುಲರ್ ಪ್ರಕಾರ ಮೇಷ್ಟು ಆ ನೋಟೀಸ್ ಹಾಕಿದ್ದುದರ ಬಗ್ಗೆ ರಂಗಣ್ಣನಿಗೆ ಸಂತೋಷವಾಯಿತು. ಬಾಗಿಲ ಬಳಿ ನಿಂತುಕೊಂಡು ನಗುತ್ತಾ, 'ಮೇಷ್ಟೆ, ನಾನು ಒಳಕ್ಕೆ ಬರಬಹುದೆ ?” ಎಂದು ಕೇಳಿದನು. ಮೇಷ್ಟು ಸ್ವಲ್ಪ ಗಾಬರಿಯಾಗಿ, ಬರಬಹುದು ಸ್ವಾಮಿ ! ತಮ್ಮ ಆಪ್ಪಣೆ ಪ್ರಕಾರ ಗ್ರಾಮಸ್ಥರ ತಿಳಿವಳಿಕೆ ಬಗ್ಗೆ ಆ ಬೋರ್ಡನ್ನು ತಗಲು ಹಾಕಿದ್ದೇನೆ, ಅಷ್ಟೇ' ಎಂದನು. ಒಳಕ್ಕೆ ಪ್ರವೇಶಿಸಿದಾಗ ಮಕ್ಕಳು ಎದ್ದು ನಿಂತುಕೊಂಡು ಕೈ ಮುಗಿದರು. ಹಿಂದೆ ಕಿರಿಚುತ್ತಿದ್ದಂತೆ 'ನಮಸ್ಕಾರಾ ಸಾರ್' ಎಂದು ಕಿರಿಚಲಿಲ್ಲ. ಅದನ್ನು ನೋಡಿ ರಂಗಣ್ಣನಿಗೆ ಸಂತೋಷವಾಯಿತು. ಮಕ್ಕಳಿಗೆ ಕೂತುಕೊಳ್ಳುವಂತೆ ಹೇಳಿದನು.

ಉಪಾಧ್ಯಾಯನಿಗೆ ಸುಮಾರು ನಲವತ್ತೈದು ವರ್ಷ. ಆದರೆ ಕೂದಲು ಆಗಲೇ ನೆರೆತಿತ್ತು. ಗಡ್ಡ ಉದ್ದವಾಗಿ ಬೆಳೆದಿರಲಿಲ್ಲ ; ಆದರೆ ಕ್ಷೌರ ಮಾಡಿಸಿಕೊಂಡು ಮೂರು ತಿಂಗಳು ಆಗಿದ್ದಿರಬಹುದು ಎಂದು ತೋರುತ್ತಿತ್ತು. ಎಣ್ಣೆಗೆಂಪಿನ ಬಣ್ಣ; ಮಧ್ಯಸ್ಥನಾದ ಎತ್ತರ, ಅಂಗಿ ಎರಡು ಮೂರು ಕಡೆ ಹರಿದಿತ್ತು ; ತಲೆಗೆ ಮಾಸಿಲ್ಲೊಂದು ರುಮಾಲು. ಮೇಷ್ಟರ ಹೆಸರು ಕೆಂಚಪ್ಪ, ಆತ ಒಕ್ಕಲಿಗ, ರಂಗಣ್ಣನು ಮೇಷ್ಟರನ್ನುನೋಡಿ, “ಮೂರನೆಯ ತರಗತಿಗೆ ಒಂದು ಲೆಕ್ಕ ಹಾಕಿ ಮೇಷ್ಟೆ ? ಎಂದು ಹೇಳಿದನು. ಆ ಮೇಷ್ಟು ಕಪ್ಪು ಹಲಗೆಯ ಮೇಲೆ ಹತ್ತಿ ಹತ್ತದಂಧ ಸುಣ್ಣದಿಂದ,378547896X5458945 ಎಂಬುದೊಂದು ಗುಣಾಕಾರದ ಲೆಕ್ಕವನ್ನು ಹಾಕಿದನು. 'ಮೇಷ್ಟೆ, ಅಷ್ಟು ದೊಡ್ಡ ಲೆಕ್ಕ ಬೇಡ, ಚಿಕ್ಕದೊಂದು ಲೆಕ್ಕ ಹಾಕಿ.ದೊಡ್ಡದು ಬೇಡ?

'ಮಾಡ್ತಾರೆ ಸ್ವಾಮಿ ! ಕಷ್ಟ ಪಟ್ಟು ಹೇಳಿ ಕೊಟ್ಟಿದ್ದೇನೆ. ಸ್ವಾಮಿಯವರು ನನ್ನ ಕಷ್ಟ ನೋಡಬೇಕು !

'ಕಷ್ಟ ಪಟ್ಟು ಹೇಳಿಕೊಟ್ಟಿದ್ದೀರಿ ಮೇಷ್ಟೆ, ಅಡ್ಡಿಯಿಲ್ಲ. ಆದರೆ ಅವರ ದರ್ಜೆಗೆ ಮೀರಿ ಲೆಕ್ಕ ಹಾಕಬಾರದು. ಪಾಠಗಳ ಪಟ್ಟಿಯಲ್ಲಿ ಮೂರು ಅಂಕಿಗಳಿಗಿಂತ