ಪುಟ:ರಂಗಣ್ಣನ ಕನಸಿನ ದಿನಗಳು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೋರ್ಡು ಒರಸುವ ಬಟ್ಟೆ

೪೯

ತಿಳಿಸಿರುವಂತೆ ಹೇಳಿಕೊಡಬೇಕು. ಪಾಠಗಳ ಪಟ್ಟಿ ಎಲ್ಲಿ ? ತೆಗೆದು ಕೊಡಿ.?

ಮೇಷ್ಟು ಪೆಟ್ಟಿಗೆಯಲ್ಲಿ ಹುಡುಕಿ ಹಳೆಯದೊಂದು ಪಟ್ಟಿಯನ್ನು ತೆಗೆದು ಕೊಟ್ಟನು. ಅದರಲ್ಲಿ ಮುದ್ರಿಸಿರುವುದನ್ನು ತೋರಿಸಿ, ಇದನ್ನು ನೀವು ನೋಡಿಲ್ಲವೇ ಮೇಷ್ಟೆ ?” ಎಂದು ರಂಗಣ್ಣ ಕೇಳಿದನು.

'ಇಲ್ಲ ಸ್ವಾಮಿ ? ನಾನು ಬಡವ. ಆದರೆ ಸುಳ್ಳು ಹೇಳೋ ಮನುಷ್ಯನಲ್ಲ.”

'ಒಳ್ಳೆಯದು. ಮುಂದೆ ಇದರಲ್ಲಿರುವುದನ್ನೆಲ್ಲ ನೋಡಿ ಕೊಂಡು ಸರಿಯಾಗಿ ಪಾಠಮಾಡಿ ಮೇಷ್ಟೇ.'

'ಅಪ್ಪಣೆ ಸ್ವಾಮಿ.'

ರಂಗಣ್ಣನು ಓದುವ ಪಾಠ, ಪದ್ಯ ಪಾರ ಮೊದಲಾದುವನ್ನು ಸ್ವಲ್ಪ ಪರೀಕ್ಷೆ ಮಾಡಿದನಂತರ “ಮೇಷ್ಟೇ ! ಉಕ್ತಲೇಖನ ಪಾರವನ್ನು ಮೂರನೆಯ ತರಗತಿಗೆ ಸ್ವಲ್ಪ ಮಾಡಿ ನೋಡೋಣ ” ಎಂದನು. ಮೇಷ್ಟು ಓದುವ ಪುಸ್ತಕದಿಂದ ಒಂದು ಭಾಗವನ್ನು ತೆಗೆದು, “ ಹೇಳುವುದನ್ನು ಬರೆಯಿರಿ' ಎಂದು ತಿಳಿವಳಿಕೆ ಕೊಟ್ಟು, ' ಒಂದು ಆಲದ ಮರದಲ್ಲಿ ಒಂದು ಆಲದ ಮರದಲ್ಲಿ, ಆಯಿತೇ, ಒಂದು ಆಲದ ಮರದಲ್ಲಿ, ಒಂದು ಕಾಗೆ, ಒಂದು ಕಾಗೆ, ಒಂದು ಕಾಗೆ, ಗೂಡು ಕಟ್ಟಿ ಕೊಂಡು , ಗೂಡು ಕಟ್ಟಿ ಕೊಂಡು, ಗೂಡು ಕಟ್ಟಿ ಕೊಂಡು' ಎಂದು ಮುಂತಾಗಿ ಹೇಳುತ್ತಾ ಹುಡುಗರಿಂದ ಬರೆಯಿಸುತ್ತಿದ್ದನು. ರಂಗಣ್ಣ, 'ಮೇಷ್ಟೆ, ಸ್ವಲ್ಪ ನಿಲ್ಲಿಸಿ' ಎಂದು ಅವನನ್ನು ತಡೆದು ಬೋರ್ಡಿನ ಹತ್ತಿರ ತಾನೇ ಹೋಗಿ ನಿಂತುಕೊಂಡನು. ಬೋರ್ಡ್ ಒರಸುವ ಬಟ್ಟೆ ಕೊಡಿ ಮೇಷ್ಟ್ರೇ .?

'ಸ್ವಾಮಿ!'

'ಬಟ್ಟೆ ಎಲ್ಲಿ ಮೇಷ್ಟೆ ?'

'ಸ್ವಾಮಿ ! ಸ್ವಾಮಿ !' ಎಂದು ನಡುಗುತ್ತ ಆ ಮೇಷ್ಟು ತಲೆಗಿದ್ದ ರುಮಾಲನ್ನು ತೆಗೆದು ಬೋರ್ಡನ್ನು ಒರಸಿ ಆ ರುಮಾಲನ್ನು ಮೇಜಿನ ಮೇಲಿಟ್ಟು ಬಿಟ್ಟನು ! ರಂಗಣ್ಣನಿಗೆ, 'ನಾನೆಂಥ ಪಾಪ ಮಾಡಿದೆ ದೇವರೇ!

4