ಪುಟ:ರಂಗಣ್ಣನ ಕನಸಿನ ದಿನಗಳು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ರಂಗಣ್ಣನ ಕನಸಿನ ದಿನಗಳು

ಬಡವನಾದ ಆ ಮೇಷ್ಟರ ರುಮಾಲು ಹಾಳಾಯಿತಲ್ಲ ' ಎಂದು ಬಹಳವಾಗಿ ಮನಸ್ಸು ಕರಗಿಹೋಯಿತು.

'ಅದೇಕೆ ಹಾಗೆ ಮಾಡಿದಿರಿ ಮೇಷ್ಟೆ ? ಬೋರ್ಡು ಒರಸುವುದಕ್ಕೆ ಅಂಗೈಯಗಲ ಬಟ್ಟೆ ಇಟ್ಟು ಕೊಳ್ಳಬಾರದೇ ? ಸಾದಿಲ್ವಾರು ನಾಲ್ಕಾಣೆ ಇರುತ್ತದೆಯಲ್ಲ.”

'ಸಾದಿಲ್ವಾರು ಮೊಬಲಗು ಸಾಕಾಗುವುದಿಲ್ಲ ಸ್ವಾಮಿ !'

ರಂಗಣ್ಣನಿಗೂ ಅದೇ ಅಭಿಪ್ರಾಯವಾಗಿತ್ತು, ಒಂಟಿ ಉಪಾಧ್ಯಾಯರಿರುವ ಪಾಠಶಾಲೆಗಳಿಗೆ ತಿಂಗಳಿಗೆ ಎಂಟಾಣೆಯನ್ನಾದರೂ ಸಾದಿಲ್ವಾರಿಗೆ ಕೊಡಬೇಕು. ಅದರಂತೆ ಲೆಕ್ಕ ಮಾಡಿ ಹೆಚ್ಚು ಜನ ಉಪಾಧ್ಯಾಯರಿರುವ ಪಾರಶಾಲೆಗಳಿಗೂ ಸಾದಿಲ್ವಾರು ಮೊಬಲಗನ್ನು ಹೆಚ್ಚಿಸಬೇಕು ಎಂಬುದು ಅವನ ತೀರ್ಮಾನವಾಗಿತ್ತು. ಆದ್ದರಿಂದ ಆ ವಿಚಾರದಲ್ಲಿ ಮೇಲಕ್ಕೆ ಪುನಃ ಸಿಫಾರಸುಮಾಡಿ, ಒತ್ತಾಯಮಾಡಿ, ಅನುಕೂಲ ಪಡಿಸಬೇಕೆಂದು ನಿರ್ಧರಿಸಿದನು. ಬಳಿಕ ಬೋರ್ಡಿನ ಮೇಲೆ ಕೃಷ್ಣ ಸರ್ಪ,' ' ಹುತ್ತ ' ಎಂದು ಮಾತುಗಳನ್ನು ಬರೆಯತೊಡಗಿದಾಗ ಹಾಳು ಸೀಮೆಯ ಸುಣ್ಣ ಸರಿಯಾಗಿ ಬರೆಯದೇ ಹೋಯಿತು. * ಒಳ್ಳೆಯ ಸೀಮೆ ಸುಣ್ಣ ಕೊಂಡುಕೊಳ್ಳಬೇಕು ಮೇಷ್ಟೆ. ಇದೆಲ್ಲೋ ನಾಡು ಸುಣ್ಣ' ಎಂದು ಹೇಳಿದನು.

'ಅಪ್ಪಣೆ ಸ್ವಾಮಿ.'

ರಂಗಣ್ಣನು ಕಪ್ಪು ಹಲಗೆಯ ಮೇಲೆ ಕ್ಲಿಷ್ಟ ಪದಗಳನ್ನು ಬರೆದು ಮಕ್ಕಳಿಂದ ಅವುಗಳನ್ನು ಓದಿಸಿದನು. ಆಮೇಲೆ ಅವುಗಳನ್ನು ತಮ್ಮ ಕಪ್ಪು ಹಲಗೆಗಳಲ್ಲಿ ಮಕ್ಕಳು ಬರೆಯುವಂತೆ ಹೇಳಿದನು. ಹಾಗೆ ಬರೆದುದನ್ನು ನೋಡಿ ತಪ್ಪಿದ ಮಾತುಗಳನ್ನು ಬೋರ್ಡಿನ ಮೇಲಿರುವ ಮಾತುಗಳ ಸಹಾಯದಿಂದ ನೋಡಿ ಸರಿಪಡಿಸಿಕೊಳ್ಳುವಂತೆ ಹೇಳಿದನು. ಇದಾದ ಮೇಲೆ ಕಪ್ಪು ಹಲಗೆಗಳಲ್ಲಿ ಬರೆದಿರುವುದನ್ನೆಲ್ಲ ಅಳಿಸಿಬಿಡುವಂತೆ ಹೇಳಿ ತಾನು ಬೋರ್ಡನ್ನು ಒರಸಲು ತನ್ನ ಕರವಸ್ತ್ರಕ್ಕೆ ಕೈ ಹಾಕತೊಡಗಿದಾಗ ಮೆಷ್ಟು ಒ೦ದೇ ಬಾರಿಗೆ ಹಾರಿ ಮೇಜಿನ ಮೇಲಿದ್ದ ರುಮಾಲಿಂದ ಆ ಬೋರ್ಡನ್ನು ಒರಸಿಬಿಟ್ಟನು. “ಅಯ್ಯೋ ಮೇಷ್ಟೇ ! ಪುನಃ ರುಮಾಲನ್ನು