ಪುಟ:ರಂಗಣ್ಣನ ಕನಸಿನ ದಿನಗಳು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೋರ್ಡು ಒರಸುವ ಬಟ್ಟೆ

೫೧


ಹಾಳುಮಾಡಿಕೊಂಡಿರಲ್ಲಾ ! ಈ ಕೈವಸ್ತ್ರದಿಂದ ನಾನು ಒರಸುತ್ತಿದ್ದೆನೇ, ಇದನ್ನೇ ನಿಮಗೆ ಕೊಟ್ಟು ಬಿಟ್ಟು ಹೋಗುತ್ತೇನೆ. ಬೋರ್ಡು ಒರಸುವುದಕ್ಕೆ ಇಟ್ಟು ಕೊಳ್ಳಿ.

ಸ್ವಾಮಿಯವರ ಸೇವಕ ! ತಾಪೇದಾರ ! ಬಡವ ! ಆದರೆ ಸುಳ್ಳು ಹೇಳೋ ಮನುಷ್ಯ ಅಲ್ಲ. ಕಷ್ಟ ಪಟ್ಟು ಕೆಲಸ ಮಾಡಿದ್ದೇನೆ ಸ್ವಾಮಿ.'

ರಂಗಣ್ಣನು ಉಕ್ತಲೇಖನ ಪಾಠದ ಕ್ರಮವನ್ನು ಆ ಮೇಷ್ಟರಿಗೆ ಚೆನ್ನಾಗಿ ತಿಳಿಸಿ ಕೊಟ್ಟು, ಇನ್ನು ಮುಂದೆ ನಾನು ಹೇಳಿಕೊಟ್ಟ ಕ್ರಮದಲ್ಲಿ ಪಾಠಮಾಡಿ ಮೇಷ್ಟೇ ! ತಪ್ಪುಗಳನ್ನು ಬರೆಯದಂತೆ ನಾವು ಮಕ್ಕಳಿಗೆ ಸಹಾಯಮಾಡ ಬೇಕು. ಸುಮ್ಮನೆ ಪರೀಕ್ಷೆಯಲ್ಲಿ ಹೇಳಿದಂತೆ ಉಕ್ತಲೇಖನ ಮಾಡಬಾರದು. ಈಗ ಮಕ್ಕಳನ್ನು ಆಟಕ್ಕೆ ಬಿಡಿ ಮೇಷ್ಟೇ ' ಎಂದು ಹೇಳಿದನು. ಮಕ್ಕಳೆಲ್ಲ ಆಟಕ್ಕೆ ಹೊರಕ್ಕೆ ಹೋದರು. ರಂಗಣ್ಣನು ಸ್ಕೂಲಿನ ದಾಖಲೆಗಳನ್ನು ನೋಡಬೇಕೆಂದು ಬಯಸಿದಾಗ ಮೇಷ್ಟು ಎಲ್ಲ ರಿಜಿಸ್ಟರುಗಳನ್ನೂ ತೆಗೆದು ಮೇಜಿನ ಮೇಲಿಟ್ಟನು. ಆಡ್ಮಿರ್ಷ ರಿಜಿಸ್ಟರು ಮತ್ತು ಹಾಜರಿ ರಿಜಿಸ್ಟರುಗಳನ್ನು ರಂಗಣ್ಣನು ನೋಡುತ್ತಿದ್ದಾಗ ಮೇಷ್ಟು ಒಂದು ದೊಡ್ಡ ಲೋಟದಲ್ಲಿ ಕಾಸಿದ ಹಾಲು ಒಂದಿಷ್ಟು ಸಕ್ಕರೆ ಆರೇಳು ಬಾಳೆಯ ಹಣ್ಣುಗಳು, ಹತ್ತು ಹನ್ನೆರಡು ಹಲಸಿನ ಹಣ್ಣಿನ ತೊಳೆಗಳು- ಇವುಗಳನ್ನು ಸರಬರಾಜು ಮಾಡಿಕೊಂಡು ಬಂದು ಮೇಜಿನ ಮೇಲೆ ತಂದಿಟ್ಟನು.

ಸ್ವಾಮಿಯವರು ತೆಗೋಬೇಕು. ಬಹಳ ದಣಿದು ಬಂದಿದ್ದೀರಿ. ತಮ್ಮ ಕಾಲದಲ್ಲಿ ಮೇಷ್ಟರಿಗೆಲ್ಲ ಒಳ್ಳೆಯ ತಿಳಿವಳಿಕೆ ಕೊಡುತ್ತಿದ್ದೀರಿ ಸ್ವಾಮಿ ! ನಮ್ಮನ್ನೆಲ್ಲ ಕಾಪಾಡಿಕೊಂಡು ಬರಬೇಕು ಸ್ವಾಮಿ ! ನಾನು ಭಯಸ್ಥ ; ಕಷ್ಟ ಪಟ್ಟು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸ್ವಾಮಿ!? ಎಂದು ಉಪಾಧ್ಯಾಯನು ಹೇಳಿದನು. ರಂಗಣ್ಣನಿಗೆ ಈ ಹಾಲು ಹಣ್ಣು ಗಳ ನಿವೇದನೆ ಅಭ್ಯಾಸವಾಗಿ ಹೋಗಿತ್ತು. ಯಥಾಶಕ್ತಿ ಅವುಗಳನ್ನು ಸ್ವೀಕರಿಸಿ ಮುಂದೆ ದಾಖಲೆಗಳನ್ನು ನೋಡುತ್ತಾ ಹೋದನು. ಮೇಷ್ಟರು ಬರೆದಿದ್ದ ಟಿಪ್ಪಣಿ, ಡೈರಿ, ಸಂಬಳದ ಬಟವಾಡೆ ರಿಜಿಸ್ಟರು, ಸ್ಟಾಕ್