ಪುಟ:ರಂಗಣ್ಣನ ಕನಸಿನ ದಿನಗಳು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ರಂಗಣ್ಣನ ಕನಸಿನ ದಿನಗಳು

ರಿಜಿಸ್ಟರು - ಎಲ್ಲವನ್ನೂ ನೋಡಿ ಆಯಿತು. ಸಾದಿಲ್ವಾರ್ ರಿಜಿಸ್ಟರು ಕಣ್ಣಿಗೆ ಬೀಳಲಿಲ್ಲ.

'ಮೇಸ್ಟ್ರೆ, ಸಾದಿಲ್ವಾರ್ ರಿಜಿಸ್ಟರ್ ಎಲ್ಲಿ ?' ಎಂದು ಕೇಳಿದನು.

'ಅಲ್ಲೇ ಇದೆ ಸ್ವಾಮಿ, ಮೊದಲಿನ ರಿಜಿಸ್ಟರ್ ಹಿಂದೆಯೇ ಮುಗಿದೋಯ್ತು. ಆಫೀಸಿಗೆ ಯಾದಿ ಬರೆದೆ. ಸಪ್ಲೈ ಬರಲಿಲ್ಲ. ಒಂದು ನೋಟ್ ಪುಸ್ತಕ ಕೊಂಡುಕೊಂಡು ಅದರಲ್ಲಿ ಬರೆದಿಟ್ಟಿದ್ದೇನೆ ಸ್ವಾಮಿ.' ರಂಗಣ್ಣ ಕೆಳಗಿನ ದಾಖಲೆಗಳಲ್ಲಿ ಹುಡುಕಿದಾಗ ನಲವತ್ತು ಪುಟಗಳ ಒಂದು ನೋಟ್ ಪುಸ್ತಕ ಸಿಕ್ಕಿತು. ಮೇಲೆ 'ಸಾದಿಲ್ವಾರ್ ಖರ್ಚಿನ ಪುಸ್ತಕ ' ಎಂದು ಬರೆದಿತ್ತು. ಮೊದಲನೆಯ ಹಾಳೆಯಲ್ಲಿ,

ಮೇ ತಿಂಗಳ ಸಾದಿಲ್ವಾರ್ ಜಮಾ ಖರ್ಚು 0-4-0
ನೋಟ್ ಬುಕ್ 0-1-0
ಕಾಗದ 0-2-0
ಮಸಿ, ಮುಳ್ಳು 0-1-0
ಒಟ್ಟು 0-4-0
ಬಾಕಿ ಇಲ್ಲ

ಎಂದು ಬರೆದಿತ್ತು. ಮುಂದೆ ಜೂನ್ ತಿಂಗಳಿಗೆ ಸಾದಿಲ್ವಾರ್ ಜಮಾ ; 0-4-0. ಖರ್ಚು : ಇಲ್ಲಾ, ಎಂದು ಬರೆದಿತ್ತು. ಹಾಗೆಯೇ ಮುಂದಿನ ಪ್ರತಿ ತಿಂಗಳಿಗೂ ಬರೆದು ಯಾವುದೋ ತಿಂಗಳಲ್ಲಿ ' ಸಾದಿಲ್ವಾರ್ ಒಟ್ಟು ಜಮಾ : 2-0-0. ಖರ್ಚು : ಬೋರ್ಡ್ ಒರಸುವ ಬಟ್ಟೆ= 2–0–0

ಬಾಕಿ ಏನೂ ಇಲ್ಲ.

ಎಂದು ಬರೆದಿತ್ತು ; ಮೇಷ್ಟ ರುಜುವಿತ್ತು. ರಂಗಣ್ಣ ಕಣ್ಣು ಕಣ್ಣು ಬಿಡುತ್ತಾ ಕುಳಿತುಕೊಂಡನು !