ಪುಟ:ರಂಗಣ್ಣನ ಕನಸಿನ ದಿನಗಳು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೋರ್ಡು ಒರಸುವ ಬಟ್ಟೆ

೫೩

“ಮೇಷ್ಟೇ ! ಇದೇನು? ಎಂಟು ತಿಂಗಳ ಸಾದಿಲ್ವಾರ್ ಮೊಬಲಿಗೆಗೆಲ್ಲ ಬೋರ್ಡ್ ಒರಸುವ ಬಟ್ಟೆಯ ಖರ್ಚು ತೋರಿಸಿದ್ದೀರಿ. ನಿಮ್ಮ ಬೋರ್ಡ್ ಒರಸುವುದಕ್ಕೆ ಆ೦ಗೈಯಗಲ ಬಟ್ಟೆ ಕೂಡ ಇರಲಿಲ್ಲವಲ್ಲ ? ಎಂದು ಕೇಳಿದನು.

'ಇಗೋ ಸ್ವಾಮಿ ಬೋರ್ಡ ಒರಸುವ ಬಟ್ಟೆ! ಮೇಜಿನ ಮೇಲೆ ಆಗಿನಿ೦ದ ಇಟ್ಟಿದ್ದೇನೆ ! ತಮ್ಮೆದುರಿಗೇನೇ ಬೋರ್ಡು ಒರಸಿದ್ದೇನೆ. ನಾನು ಬಡವ ಸ್ವಾಮಿ ! ಆದರೆ ಸುಳ್ಳು ಲೆಕ್ಕ ಬರೆದಿಲ್ಲ ; ಸುಳ್ಳು ಸುಳ್ಳು, ಹೇಳೊ ಮನುಷ್ಯ ಅಲ್ಲ.'

'ಮೇಷ್ಟ್ರೇ ! ಇದು ನಿಮ್ಮ ರುಮಾಲಲ್ಲವೆ ?'

'ಸ್ವಾಮಿ ! ನಾನು ಬಡವ, ಭಯಸ್ಥ ! ನೋಡಿ ಸ್ವಾಮಿ | ಅಂಗಿ ಎರಡು ಮೂರು ಕಡೆ ಹರಿದು ಹೋಗಿದೆ ; ಈ ಪ೦ಚೆ ಜೂಲು ಜಲಾಗಿದೆ ಸಂಬಳ ಹದಿನೈದೇ ರೂಪಾಯಿ. ಮನೆಯಲ್ಲಿ ನಾಲ್ಕು ಜನ ಮಕ್ಕಳು, ನನ್ನ ಹೆಂಡತಿ ಮತ್ತು ಅತ್ತೆ, ನಾನು ಸುಳ್ಳು ಹೇಳೋದಿಲ್ಲ ಸ್ವಾಮಿ ! ಮೇಜಿನ ಮೇಲಿರುವುದೇ ಬೋಡ್೯ ಒರಸುವ ಬಟ್ಟೆ, ದುಡ್ಡು ತಿ೦ದಿಲ್ಲ. ರಸೀತಿ ಮಡಗಿದ್ದೇನೆ ! ತಲೆಗೆ ರುಮಾಲಿಲ್ಲದಿದ್ದರೆ ಜುಲ್ಮಾನೆ ಹಾಕುತ್ತೀರಿ, ಅದಕ್ಕೇನೆ ಅದನ್ನು ರುಮಾಲಾಗಿ ಹಾಕಿಕೊಂಡಿದ್ದೆ ಸ್ವಾಮಿ ?

'ಮತ್ತೆ ರುಮಾಲಿಲ್ಲದೆ ಈಗ ನಿಂತಿದ್ದೀರಲ್ಲ ನೀವು ?'

'ಇಗೋ ಸ್ವಾಮಿ ಮಡಕ್ಕೋತೀನಿ ! ಕಾಪಾಡಿಕೊಂಡು ಬರಬೇಕು !

ಮೇಷ್ಟ್ರು ಭಯದಿಂದ ಆ ಧೂಳು ತುಂಬಿದ ರುಮಾಲನ್ನೆ ತೊಟ್ಟ. ಸೊಟ್ಟಾಗಿಟ್ಟುಕೊಂಡು ಕೈ ಮುಗಿದುಕೊಂಡು ನಿಂತನು. ರುಮಾಲಿನ ಒಂದು ಕೊನೆ ಸಡಲಿ ಹೋಗಿ ಭುಜದ ಮೇಲೆ ಇಳಿ ಬಿದ್ದದ್ದು ಕೂಡ ಆ ಮೇಷ್ಟಿಗೆ ಅರಿವಾಗಲಿಲ್ಲ. ಮೇ ಷ್ಟು ರುಮಾಲಿಂದ ಬೋರ್ಡನ್ನು ಒರಸಿದ್ದರ ಅರ್ಥ ಆಗ ರಂಗಣ್ಣನಿಗೆ ಸ್ಮರಿಸಿತು ! ಅವನಿಗೆ ಕೋಪ ಬರಲಿಲ್ಲ. ಕಣ್ಣುಗಳು ಹನಿಗೂಡಿ ಮಂಜು ಮಂಜಾದುವು. ಮುಖವನ್ನು ಎತ್ತದೆ, “ ಮೇಷ್ಟ್ರ ಬಡತನ ಯಾವಾಗ ಹೋದೀತೋ ? ಯಾವಾಗ