ಪುಟ:ರಂಗಣ್ಣನ ಕನಸಿನ ದಿನಗಳು.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ರಂಗಣ್ಣನ ಕನಸಿನ ದಿನಗಳು

ಅವರಿಗೆ ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ಸಂಬಳ ದೊರೆತೀತೋ ? ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವ ಸೆಂಚುರಿ ಕ್ಲಬ್ಬಿನ ಲೋಲರಿಗೆ ದೇವರು ಯಾವಾಗ ಕರುಣೆ ತುಂಬುವನೋ ? ದೇವರೇ ಈ ಬಡವರ ರಕ್ಷಣೆಗೆ ಬರಬೇಕು ! ಎಂದು ನೊಂದುಕೊಂಡು ಎರಡು ನಿಮಿಷ ಮೌನವಾಗಿದ್ದನು. ಬಳಿಕ,

ಮೇಷ್ಟೆ ! ಸಾದಿಲ್ವಾರ್ ಮೊಬಲಗೆಲ್ಲ ಬೋರ್ಡು ಒರಸುವ ಬಟ್ಟೆ ಗೇ ಆಗಿ ಹೋಯಿತಲ್ಲಾ ! ಬೋರ್ಡು ಮೇಲೆ ಬರೆಯೋ ಸೀಮೆ ಸುಣ್ಣದ ಖರ್ಚಿಗೆ ಏನು ಮಾಡುತ್ತೀರಿ ? ಎಂದು ಕೇಳಿದನು.

ಅದನ್ನು ಕೊಂಡು ಕೊಂಡಿಲ್ಲ ಸ್ವಾಮಿ, ಆದ್ದರಿ೦ದ ಲೆಕ್ಕದಲ್ಲಿ ಬರೆದಿಲ್ಲ. ನಾನು ಸುಳ್ಳು ಲೆಕ್ಕ ಬರೆಯೋ ಮನುಷ್ಯ ಅಲ್ಲ ಸ್ವಾಮಿ !?

ಮತ್ತೆ ಸೀಮೆಸುಣ್ಣ ನಿಮಗೆ ಹೇಗೆ ದೊರೆಯುತ್ತೆ ??

ಈ ಹಳ್ಳಿ ಲಿ ದಾಸಯ್ಯಗಳು ಬಹಳ ಮಂದಿ ಇದ್ದಾರೆ ಸ್ವಾಮಿ ! ದಪ್ಪ ದಪ್ಪ ನಾಮ ಹಾಕ್ತಾರೆ. ಸ್ಕೂಲಿಗೆ ಬರೋ ಮಕ್ಕಳು ಮನೆಯಿಂದ ನಾಮದ ತುಂಡುಗಳನ್ನು ತಂದು ಕೊಡ್ತಾರೆ ಸ್ವಾಮಿ | ಅದನ್ನೇ ಉಪಯೋಗಿಸುತ್ತ ಕಷ್ಟ ಪಟ್ಟು ಮಕ್ಕಳಿಗೆ ವಿದ್ಯೆ ಹೇಳಿ ಕೊಟ್ಟಿದ್ದೇನೆ. ನಾನು ಸುಳ್ಳುಪಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ ?”

ಕಾಗದ, ಬರೆಯುವ ಮುಳ್ಳು, ಮಸಿ ಈಗ ನಿಮಗೆ ಬೇಕಾಗಿಲ್ಲವೋ ??

ಬೇಕು ಸ್ವಾಮಿ ! ಹಿಂದೆ ಕೊಂಡುಕೊಂಡು ನಾಜೂಕಾಗಿ ಉಪಯೋಗಿಸಿದೆ, ನಾಳೆ ತಿಂಗಳಿನ ಸಾದಿಲ್ವಾರ್ ಮೊಬಗಿನಲ್ಲಿ ಮತ್ತೆ ಕೊಂಡುಕೊಳ್ಳುತ್ತೇನೆ ಸ್ವಾಮಿ ! ಕಾಪಾಡಿಕೊಂಡು ಬರಬೇಕು.

ಒಳ್ಳೆಯದು ಮೇಷ್ಟೆ ! ಈ ಪುಸ್ತಕ ನನ್ನ ಹತ್ತಿರ ಇರಲಿ. ಮಧ್ಯಾಹ್ನಕ್ಕೆ ಆಫೀಸಿನ ಹತ್ತಿರ ಬನ್ನಿ ” ಎಂದು ಹೇಳಿ ಭೇಟಿಯನ್ನು ಮುಗಿಸಿಕೊಂಡು ಆ ಸಾದಿಲ್ವಾರ್ ಪುಸ್ತಕವನ್ನು ಜೇಬಿನಲ್ಲಿಟ್ಟು ಕೊಂಡು ರಂಗಣ್ಣ ಪಾಠಶಾಲೆಯಿಂದ ಹೊರಬಿದ್ದನು. ಮೇಷ್ಟು ಅಷ್ಟು ದೂರ ಹಿಂಬಾಲಿಸಿಕೊಂಡು ಬರುತ್ತ, 'ಪ್ರಮೋಷನ್ ಕೊಟ್ಟು ಕಾಪಾಡಿಕೊಂಡು