ಪುಟ:ರಂಗಣ್ಣನ ಕನಸಿನ ದಿನಗಳು.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡ ಬೋರೇಗೌಡರು

೫೭

ವರು ಮುಖಂಡರು ; ಪ್ರಜಾ ಪ್ರತಿನಿಧಿ ಸಭೆಯ ಅಧವಾ ನ್ಯಾಯವಿಧಾಯಕ ಸಭೆಯ ಸದಸ್ಯರಲ್ಲಿ ಕೆಲವರು. ಆ ಪುಂಡು ಉಪಾಧ್ಯಾಯರೇ ಆ ಸದಸ್ಯರ ಏಜೆಂಟರುಗಳು, ಸರ್ಕಾರಿ ನೌಕರರ-ಅಮಲ್ದಾರರು, ಪೊಲೀ ಸ್ಇನ್ಸ್ಪೆಕ್ಟರು ಮೊದಲಾದವರ – ಓಡಾಟಗಳನ್ನು ಹೊಂಚು ನೋಡುತ್ತ ನಡೆದುದನ್ನೂ ಜೊತೆಗೆ ತಮ್ಮ ಕಲ್ಪನೆಯನ್ನೂ ಸೇರಿಸಿ ತಂ ತಮ್ಮ ಯಜಮಾನರುಗಳಿಗೆ ವರದಿ ಮಾಡುವುದು, ವರ್ತಮಾನ ಪತ್ರಿಕೆಗಳನ್ನು ಹಂಚುವುದು-ಇವೆಲ್ಲ ಆ ಉಪಾಧ್ಯಾಯರ ಕಾರ್ಯಕಲಾಪಗಳಲ್ಲಿ ಸೇರಿದುವು, ಇವರ ವರದಿಗಳನ್ನು ಸೇರಿಸಿ ಜೊತೆಗೆ ತಾವೂ ಸ್ವಲ್ಪ ಸೃಷ್ಟನೆ ಮಾಡಿ ಆ ಮುಖಂಡರೆನಿಸಿದವರು ಆಗಾಗ್ಗೆ ದಿವಾನರನ್ನೂ ಕೌನ್ಸಿಲರುಗಳನ್ನೂ ಇಲಾಖೆಗಳ ಮುಖ್ಯಾಧಿಕಾರಿಗಳನ್ನೂ ಕಂಡು ಚಾಡಿಗಳನ್ನು ಹೇಳುತ್ತಿದ್ದರು. ಇಂಥ ಪು೦ಡುಪಾಧ್ಯಾಯರನ್ನು ಹತೋಟಿಗೆ ತಂದುಕೊಳ್ಳುವುದು ಹೇಗೆ ? ಹಿಂದಿನ ಇನ್ ಸ್ಪೆಕ್ಟರುಗಳು ಒಮ್ಮೆ ಒಬ್ಬಬ್ಬರು ಪುಂಡ ರನ್ನು ರೇಂಜ್ ಬಿಟ್ಟು ವರ್ಗ ಮಾಡಿಸಲು ಪ್ರಯತ್ನ ಪಟ್ಟರು. ಮೇಲಿನ ಸಾಹೇಬರಿಂದ ವರ್ಗದ ಆರ್ಡರನ್ನು ತರಿಸಿ ಜಾರಿಗೆ ಕೊಟ್ಟರು ಆಗ ನಮ್ಮ ಮುಖಂಡರು ದೊಡ್ಡ ಸಾಹೇಬರಿಗೆ ಕಾಗದವನ್ನು ಬರೆದು ವರ್ಗದ ಆರ್ಡರನ್ನು ವಜಾ ಮಾಡ ಬೇಕೆಂದು ಹೇಳಿದರು ಮುಖಂಡರ ಆ ಕಾಗದ ಬಂದ ದಿನ ದೊಡ್ಡ ಸಾಹೇಬರು ಅದನ್ನು ಒಡೆದು ನೋಡುತ್ತಿದ್ದ ಹಾಗೆಯೇ ಆಳನ್ನು ಕರೆದು ತಂಬಿಗೆಗೆ ನೀರು ಹಾಕು ' ಎನ್ನುತ್ತ ಅವಸರವಸರವಾಗಿ ಕುರ್ಚಿ ಬಿಟ್ಟು ಹೊರಟರಂತೆ ! ಒಟ್ಟಿನಲ್ಲಿ ಪರಿಣಾಮವೇನಾಯಿತು ? ಆ ಕೆಳಗಿನ ಸಾಹೇಬರಿಗೆ ಮೇಲಿನ ಸಾಹೇಬರಿಂದ ಬೈಗಳು ; ತಿಳಿವಳಿಕೆ ಇಲ್ಲ, ದಕ್ಷತೆ ಇಲ್ಲ, ಇತ್ಯಾದಿ ಬಾಣಗಳು. ಕೂಡಲೇ ವರ್ಗವನ್ನು ವಜೆ ಮಾಡಿ ವರದಿ ಕಳುಹಿಸಬೇಕು ಎಂದು ಖಾಸಗಿ ಹುಕುಂ.

ಒಂದು ಬಾರಿ ಡೆಪ್ಯುಟಿ ಕಮಿಷನರ್ ಸಾಹೇಬರು ಜನಾರ್ದನಪುರದಲ್ಲಿ ಮೊಕ್ಕಾಂ ಮಾಡಿದ್ದರು. ತಿಮ್ಮನಹಳ್ಳಿಯಲ್ಲಿ ರೈತರನ್ನೆಲ್ಲ ಎತ್ತಿ ಕಟ್ಟಿ ಕಂದಾಯದ ರೆಮಿಷನ್ ಬಗ್ಗೆ ಬಂಡಾಯ ಎಬ್ಬಿಸುತ್ತಿರುವುದಾಗಿಯೂ, ಅಲ್ಲಿಯ ಪಂಚಾಯತಿಯಲ್ಲಿ ವ್ಯಾಜ್ಯಗಳನ್ನು ಹುಟ್ಟಿಸಿ ಅದರ