ಪುಟ:ರಂಗಣ್ಣನ ಕನಸಿನ ದಿನಗಳು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡ ಬೋರೇಗೌಡರು

೫೯

ನೀವು ? ನಿಮ್ಮ ಹಣೆಯಲ್ಲೇ ಬರೆದಿಲ್ಲ. ನಾನು ಇಚ್ಛೆಪಟ್ಟರೆ ನಿಮ್ಮನ್ನು ಒಂದು ವಾರದೊಳಗಾಗಿ ವರ್ಗ ಮಾಡಿಸುತ್ತೇನೆ. ಆಹವಾಲು ಹೇಳಿಕೊಳ್ಳುವುದಕ್ಕೆ ಬಂದ ಬಡ ರೈತನನ್ನು ಪೊಲೀಸ್ ಲಾಕಪ್ಪಿಗೆ ಹಾಕುವ ಈ ದಬ್ಬಾಳಿಕೆ ನಾಳೆ ನಾಳಿದ್ದರಲ್ಲಿ ಸಂಸ್ಥಾನವಾದ್ಯಂತ ಪತ್ರಿಕೆಗಳಲ್ಲಿ ಬರುವುದನ್ನು ನೀವೇ ಓದುತ್ತೀರಿ ! ' ಎಂದು ಆ ಸಿಪಾಯಿ ಮೇಷ್ಟರು ಹೇಳಿ, ಅಲ್ಲಿ ನಿಲ್ಲದೆ ಡೆಪ್ಯುಟಿ ಕಮಿಷನರಿಗೆ ನಮಸ್ಕಾರವನ್ನೂ ಮಾಡದೆ ಹೊರಟೇ ಹೋದನು .

ಮತ್ತೊಬ್ಬ ಪುಂಡು ಉಪಾಧ್ಯಾಯನು ಹಿಂದಿನ ಡಿಸ್ಟ್ರಿಕ್ಟ್ ಇನ್ ಸ್ಪೆಕ್ಟರ ಮೇಲೆ ಕೋರ್ಟುಗಳಲ್ಲಿ ಕೇಸುಗಳನ್ನು ದಾಖಲ್ಮಾಡಿ ಅವರಿಂದ ದಮ್ಮಯ್ಯ ಗುಡ್ಡೆ ಹಾಕಿಸಿಕೊಂಡನು.

ಹೀಗೆ ಕೆಲವರೇನೋ ಪುಂಡರು ಇದ್ದರು. ಅವರು ಆಯಾ ಪ್ರಾಂತಗಳಲ್ಲಿ ಪಾಳೆಯಗಾರರಾಗಿ ಭಯಗ್ರಸ್ತರಾದ ಇತರ ಮೇಷ್ಟ ರುಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಆಳುತ್ತಿದ್ದರು. ಹಿಂದಿನ ಕೆಲವರು ಇನ್ಸ್ಪೆಕ್ಟರುಗಳು ಅವರ ದೆಶೆಯಿಂದ ಬಹಳ ಭಂಗ ಪಟ್ಟದ್ದೂ ಉಂಟು ; ಕೆಲವರು ಅವರನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಮುಖಂಡರ ಇಚ್ಛಾನುಸಾರ ವರ್ಗಗಳನ್ನು ಮಾಡುತ್ತಾ ಪ್ರಮೋಷನುಗಳನ್ನು ಕೊಡಿಸುತ್ತಾ ಇದ್ದುದೂ ಉಂಟು.

ಹೊರಗಿನವರ ಪ್ರಭಾವ ಬೀಳದೇ ಇದ್ದಾಗ ಸಾಮಾನ್ಯವಾಗಿ ರೇ೦ಜಿನಲ್ಲಿ ಶೇಕಡ ಎಪ್ಪತ್ತು ಮಂದಿ ಉಪಾಪಾಧ್ಯಾಯರು ತಂತಮ್ಮ ಕೆಲಸಗಳನ್ನು ಭಯದಿಂದ ಮಾಡಿ ಕೊಂಡು ಹೋಗುತ್ತಿದ್ದರು. ದೇವರು ಕೊಟ್ಟ ಬುದ್ಧಿಯನ್ನು ಉಪಯೋಗಿಸಿ ಪಾಠಗಳನ್ನು ಹೇಳಿಕೊಡುತ್ತಿದ್ದರು. ಒ೦ದು ವೇಳೆ ಟ್ರೈನಿಂಗ್ ಆಗಿದ್ದರೂ ಸಹ ಆ ನಾರ್ಮಲ್ ಸ್ಕೂಲುಗಳಲ್ಲಿ ಕಲಿತದ್ದನ್ನು ಆ ಋಣ ತಮಗೆ ಬೇಡವೆಂದು ಅಲ್ಲಿಯೇ ಗುರುದಕ್ಷಿಣೆ ಕೊಟ್ಟು ಬಿಟ್ಟು ತಮ್ಮ ಹಿಂದಿನ ಪದ್ದತಿಗಳಂತೆಯೇ ಪಾಠ ಮಾಡುತ್ತಿದ್ದರು. ಸುಮಾರು ಶೇಕಡ ಇಪ್ಪತ್ತು ಮಂದಿ ಒಳ್ಳೆಯ ದಕ್ಷರಾದ ಉಪಾಧ್ಯಾಯರು ಇರುತ್ತಿದ್ದರು; ಅವರು ಯಾರಿಂದಲೂ ಹೇಳಿಸಿಕೊಳ್ಳದೆ, ಯಾರ ಕಾವಲೂ