ಪುಟ:ರಂಗಣ್ಣನ ಕನಸಿನ ದಿನಗಳು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ರಂಗಣ್ಣನ ಕನಸಿನ ದಿನಗಳು

ಮೇಲ್ವಿಚಾರಣೆಯೂ ಬೇಕಿಲ್ಲದೆ ತಂತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿಕೊ೦ಡು ಹೋಗುತ್ತಿದ್ದರು.

ಆದ್ದರಿಂದ ಪಾಠ ಶಾಲೆಗಳಿಗೆ ತಕ್ಕ ಕಟ್ಟಡಗಳೂ ಉಪಕರಣಗಳೂ ಇಲ್ಲದೇ ಇರುವುದರ ಜೊತೆಗೆ ಮೇಲೆ ಹೇಳಿದ ನಿರುತ್ಸಾಹಕ ಸನ್ನಿವೇಶಗಳನ್ನೂ ಸೇರ್ಪಡಿಸಿಕೊಂಡು ರೇ೦ಜಿನಲ್ಲಿ ವಿದ್ಯಾಭಿವೃದ್ಧಿಯನ್ನುಂಟು ಮಾಡಬೇಕಾಗಿತ್ತು ; ಉಪಾಧ್ಯಾಯರಲ್ಲಿ ಶಿಸ್ತನ್ನು ಬೆಳಸಬೇಕಾಗಿತ್ತು; ಅವರಲ್ಲಿ ಉತ್ಸಾಹವನ್ನೂ ತನ್ನ ಬಗ್ಗೆ ಪ್ರೇಮವನ್ನೂ ರಂಗಣ್ಣನು ಬೆಳಸಬೇಕಾಗಿತ್ತು. ಮೇಲಿನ ಆಲೋಚನಾತರಂಗಗಳಲ್ಲಿ ಮಗ್ನನಾಗಿ ರಂಗಣ್ಣನು ಹರಪುರದ ಬಂಗಲೆಯಲ್ಲಿ ಮಂಚದ ಮೇಲೆ ಮಲಗಿದ್ದನು. ಸೊಗಸಾದ ಮೆತ್ತನೆಯ ಹಾಸಿಗೆ; ಕಸೂತಿ ಕೆಲಸ ಮಾಡಿ ನೀಲಿ ದಾರದಲ್ಲಿ ಅವನ ಹೆಸರನ್ನು ಚಿತ್ರಿಸಿದ್ದ ಗವುಸುಳ್ಳ ದಿ೦ಬುಗಳು ; ಬ್ರಿಟಿಷ ತಯಾರಿಕೆಯ, ಬೂರ್ನಿಸು, ಶುಭ್ರವಾದ ಸೊಳ್ಳೆಯ ಪರದೆ. ಆ ವಿಲಾಸದ ಭೋಗದ ಶಯ್ಯೆಯಲ್ಲಿ ರಂಗಣ್ಣ ಮಲಗಿದ್ದಾನೆ. ಆ ಕೊಟಡಿಯಲ್ಲಿ ಮೇಜಿನ ಮೇಲೆ ಹಾಸಿದ್ದ ಸ್ವಂತವಾದ ಹಸು ಬಣ್ಣದ ನುಣುಪಾದ ಮುಚ್ಚು ಬನಾತು. ಅದರ ಮೇಲೆ ಕಚೇರಿಯ ಕೆಲವು ಕಾಗದಗಳು, ಪಕ್ಷದ ಸ್ಕೂಲಿನ ಮೇಲೆ ಕೊಳಪಿನ ಕಂಚಿನ ಕೂಜ, ಲೋಟ. ನೆಲಕ್ಕೆ ಹಾಕಿದ್ದ ಜಮಖಾನದ ಒಂದು ಕಡೆ ತಿಂಡಿಗಳು ತುಂಬಿದ್ದ ಚಿಕ್ಕ ಬೆತ್ತದ ನೆಟ್ಟಗೆ ; ದೂರದಲ್ಲಿ ಅದರ ಮೇಲೆ ಚೆನ್ನಾಗಿ ಮಡಿಸಿಟ್ಟಿದ್ದ ಕಾಲು, ಟರ್ಕಿ ಟವಲ್ಲುಗಳು ಮತ್ತು ಪಂಚೆಗಳು. ಅಂಗಿಯ ನಿಲುಕಟ್ಟಿನ ಮೇಲೆ, ಅವನ ಸೂಟುಗಳು ಮತ್ತು ರುಮಾಲು. ಆ ಸರ್ಕೀಟು ಜೀವನದ ಸೊಗಸನ್ನು ನೋಡಿ ದೇವತೆಗಳು ಭೂಮಿಯಲ್ಲಿ ಅವತರಿಸಲು ತವಕ ಪಡುತ್ತಿದ್ದರೆಂದಮೇಲೆ ಹೆಚ್ಚಾಗಿ ಹೇಳತಕ್ಕದ್ದೆನು ! ಬೇರೆ ಇಲಾಖೆಯವರು ಬೆರಗಾಗಿ ಹೋಗಿದ್ದರು, ಆ ದಿನ ಬೆಳಗ್ಗೆ ರಂಗಣ್ಣ ಬಹಳ ಸುತ್ತಾಡಿಕೊಂಡು ಬಂದಿದ್ದುದರಿಂದ ಊಟ ಮಾಡಿದ ಮೇಲೆ ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಿತ್ತು.

ಸಾಯಂಕಾಲ ನಾಲ್ಕು ಗಂಟೆಗೆ ಹಾಸಿಗೆಯಿಂದೆದ್ದು ಮುಖವನ್ನು ತೊಳೆದುಕೊಂಡು ಕೊಟಡಿಗೆ ರಂಗಣ್ಣನು ಬಂದನು. ಗೋಪಾಲ