ಪುಟ:ರಂಗಣ್ಣನ ಕನಸಿನ ದಿನಗಳು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡ ಬೋರೇಗೌಡರು

೬೧

ತಟ್ಟೆಯಲ್ಲಿ ಸಜ್ಜಿಗೆ, ಲೋಟದಲ್ಲಿ ಕಾಫಿ, ನಾಲ್ಕು ರಸ ಬಾಳೆ ಹಣ್ಣುಗಳನ್ನು ತಂದಿಟ್ಟನು. ಆ ಹೊತ್ತಿಗೆ ಶಂಕರಪ್ಪ ತಲೆ ಹಾಕಿ, ' ಆವಲಹಳ್ಳಿಯ ದೊಡ್ಡ ಬೋರೇಗೌಡರು ಬಂದಿದ್ದಾರೆ' ಎಂದು ವರ್ತಮಾನವನ್ನು ಕೊಟ್ಟನು. ಒಂದು ಕುರ್ಚಿ ತಂದು ಹಾಕಿ, ಶಂಕರಪ್ಪ : ಗೋಪಾಲ ! ಗೌಡರಿಗೂ ಏನಾದರೂ ತ೦ದುಕೊಡು' ಎಂದು ಹೇಳಿ ರಂಗಣ್ಣನೇ ಎದ್ದು ಹೋಗಿ, ' ಬರಬೇಕು, ಗೌಡರು. ಕ್ಷಮಿಸಬೇಕು ; ಬಹಳ ಹೊತ್ತಿನಿಂದ ಕಾದಿದ್ದಿರೋ ಏನೋ ? ಎಂದು ಹಸ್ತಲಾಘವಕೊಟ್ಟು ಅವರನ್ನು ಸ್ವಾಗತಿಸಿ ಒಳಕ್ಕೆ ಕರೆದು ಕೊಂಡು ಬಂದನು. ದೊಡ್ಡ ಬೋರೇಗೌಡರು ಭಾರಿ ಒಕ್ಕಲಿಗರು. ವರ್ಷಕ್ಕೆ ಒಂದು ಸಾವಿರ ರೂಪಾಯಿಗಳ ಮೇಲೆ ಕಂದಾಯ ಕಟ್ಟುವ ಗಟ್ಟಿ ಕುಳ. ಆದರೆ ಅವರು ರಾಜಕೀಯದಲ್ಲಿ ಪ್ರವೇಶ ಮಾಡಿದವರಲ್ಲ ; ಅವರಿಗೆ ಪ್ರಜಾಪ್ರತಿನಿಧಿಸಭೆ ಮೊದಲಾದುವು ಬೇಕಾಗಿರಲಿಲ್ಲ. ತಮ್ಮ ಹಳ್ಳಿಯಲ್ಲಿ ಐದು ಸಾವಿರ ರುಪಾಯಿ ಖರ್ಚು ಮಾಡಿ ಪ್ರಾಥಮಿಕ ಪಾಠಶಾಲೆಗೆ ಒಳ್ಳೆಯ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇತರ ವಿಧಗಳಲ್ಲಿಯೂ ಸಾರ್ವಜನಿಕ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದರು. ಗೋಪಾಲನು ಗೌಡರಿಗೂ ಉಪಾಹಾರವನ್ನು ತಂದಿಟ್ಟ ಮೇಲೆ ರಂಗಣ್ಣ ತನ್ನ ತಿಂಡಿಯ ಪೆಟ್ಟಿಗೆಯನ್ನು ತೆರೆದನು. ಅವನ ಹೆಂಡತಿ ಸರ್ಕೀಟು ಕಾಲದಲ್ಲಿ ಗಂಡನಿಗೆ ಕೈಗಾವಲು ತಿಂಡಿ ಇರಲೆಂದು ಮಾಡಿ ಕೊಟ್ಟಿದ್ದ ಶೇಂಗೊಳಲು, ಚಕ್ಕುಲಿ ಮತ್ತು ಬೇಸಿನ್ ಲಾಡುಗಳು ಅದರಲ್ಲಿದ್ದುವು. ಅವುಗಳಲ್ಲಿ ಕೆಲವನ್ನು ತೆಗೆದು ರಂಗಣ್ಣ ತಟ್ಟೆ ಯಲ್ಲಿಟ್ಟನು. ಗೌಡರು ಸಂತೋಷ ಪಟ್ಟ ದ್ದು ಒಂದೇ ಅಲ್ಲ; ಏನು ಸ್ವಾಮಿ ! ದೊಡ್ಡ ಸಾಹೇಬರಿಗೂ ಇ೦ಥ ಉಪಾಹಾರ ದೊರೆಯುವುದಿಲ್ಲವಲ್ಲ! ಪುಣ್ಯವಂತರು ಸ್ವಾಮಿ ತಾವು!' ಎಂದು ಮೆಚ್ಚಿಕೆಯ ಮಾತುಗಳನಾಡುತ್ತ ತಟ್ಟೆಯಲ್ಲಿದ್ದುದನ್ನು ತೆಗೆದುಕೊಂಡರು.

'ಗೌಡರೇ ? ನನಗೆ ಭತ್ಯದ ಹಣವನ್ನು ಸರ್ಕಾದವರು ಏನು ಕೊಡುತ್ತಾರೋ ಅದರ ಮೇಲೆ ಹತ್ತು ರೂಪಾಯಿಗಳನ್ನು ನಾನು ಖರ್ಚು ಮಾಡುತ್ತೇನೆ. ಭತ್ಯದ ಹಣದಲ್ಲಿ ಉಳಿತಾಯ ಮಾಡ ಹೋಗಿ ಹೊಟ್ಟೆಯನ್ನು ಒಣಗಿಸುವುದಿಲ್ಲ. ನಾನೂ ಹೊಟ್ಟೆ ತುಂಬ ತಿನ್ನುತ್ತೇನೆ ;