ಪುಟ:ರಂಗಣ್ಣನ ಕನಸಿನ ದಿನಗಳು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ರಂಗಣ್ಣನ ಕನಸಿನ ದಿನಗಳು

'ಎಷ್ಟು ಮಂದಿ ಬಂದಾರು ಸ್ವಾಮಿ? ಇನ್ನೂರು ಜನ ಬಂದಾರಾ??

'ಎಲ್ಲಿ ಬ೦ತು ! ಈ ಪ್ರಾಂತದ ಮೇಷ್ಟರುಗಳು ನಲವತ್ತು ಜನ, ಮಿಡಲ್ ಸ್ಕೂಲಿನವರು ಹತ್ತು ಜನ- ಒಟ್ಟು ಐವತ್ತು ಜನ.

'ಇದೇನು ಹೆಚ್ಚು ಸ್ವಾಮಿ ! ಭೇಷಕ್ ಏರ್ಪಾಟು ಮಾಡುತ್ತೇನೆ. ಸಂಘದ ಸಭೆ ನಮ್ಮ ಊರಿನಲ್ಲಿ ಸೇರಿಸಿ ಸ್ವಾಮಿ, ನೀವೇನೂ ಯೋಚನೆ ಮಾಡಬೇಡಿ.'

'ಇದನ್ನು ನಿಮ್ಮಲ್ಲಿ ಪ್ರಸ್ತಾಪ ಮಾಡಬೇಕು ಎಂದು ಬಹಳ ದಿನಗಳಿ೦ದ ಯೋ ಚಿಸುತ್ತಿದ್ದೆ. ಈ ದಿನ ನೀವು ಇಲ್ಲಿಗೆ ಬಂದದ್ದು ಅನುಕೂಲವಾಯಿತು.

'ಆಗಲಿ ಸ್ವಾಮಿ. ಭರ್ಜರಿ ಏರ್ಪಾಟು ಮಾಡಿಸುತ್ತೇನೆ. ಇನ್ನೊಂದು ವಾರ ಬಿಟ್ಟು ಕೊಂಡುಸಭೆ ಸೇರಿಸುತ್ತೀರಾ ??

'ಹೌದು. ನಿಮಗೆ ಬಹಳ ಕೃತಜ್ಞನಾಗಿದ್ದೇನೆ ?

'ಆಯ್ಯೋ ಸ್ವಾಮಿ ! ಇದೇನು ? ನಮ್ಮ ಮಕ್ಕಳು, ನಮ್ಮ ಸ್ಕೂಲು ಉದ್ಧಾರವಾಗುವುದಕ್ಕೆ ನೀವು ಹೇಳಿದ್ದೀರಿ. ನಿಮ್ಮ ಹೊಟ್ಟೆಗೇನಲ್ಲವಲ್ಲ.'

ಹೀಗೆ ಮಾತುಕತೆಗಳು ಮುಗಿದುವು, ಸಾಯಂಕಾಲ ಗೌಡರೂ ರಂಗಣ್ಣನೂ ಗಾಳಿ ಸೇವನೆಗೆ ಹೊರಟರು. ಹಿಂದಿರುಗಿ ಬರುವಾಗ ಗೌಡರು ತಮ್ಮ ನೆಂಟರ ಮನೆಗೆ ರಂಗಣ್ಣನನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ರಾತ್ರಿ ಎಂಟು ಗಂಟೆಗೆ ರಂಗಣ್ಣ ಬಂಗಲೆಗೆ ಹಿಂದಿರುಗಿದನು. ಆ ಸಾಯಂಕಾಲ ಅವನ ಮನಸ್ಸಿನಲ್ಲಿ ಬಹಳ ಉತ್ಸಾಹ ಸಂತೋಷಗಳು ತುಂಬಿದ್ದುವು. ಮೊದಲು ಒಂದು ಕಡೆ ಪ್ರಾರಂಭವಾಗಲಿ. ಆಮೇಲೆ ರೇ೦ಜಿನಲ್ಲೆಲ್ಲ ಇಂಧ ಏರ್ಪಾಟುಗಳನ್ನು ಮಾಡಿ ಬಿಡುತ್ತೇನೆ. ತಿಂಗಳಿಗೊಂದು ದಿನವಾದರೂ ಉಪಾಧ್ಯಾಯರು ಕಾಷ್ಠ ವ್ಯಸನಗಳನ್ನು