ಪುಟ:ರಂಗಣ್ಣನ ಕನಸಿನ ದಿನಗಳು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೭೧

'ಅದರ ಕಥೆ ಸ್ವಾಮಿಯವರಿಗೆ ಅರಿಕೆ ಮಾಡಿಕೊತೀನಿ, ಕಾಪಾಡಿಕೊಂಡು ಬರಬೇಕು ! ಶಿಷ್ಯನ ಮೇಲೆ ಅನುಗ್ರಹ ತೋರಿಸಬೇಕು ! ? ಎಂದು ಹೇಳಿದ್ದೆ ತಡ, ಮೇಷ್ಟು ಹೊರಕ್ಕೆ ಬಂದು ಹುಡುಗರಿಗೆಲ್ಲ ಇನ್ ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಎಲ್ಲಾರೂ ಊಟಾ ಮಾಡಿ ಕೊಂಡು ಒಳ್ಳೆಯ ಬಟ್ಟೆ ಹಾಕಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬಂದುಬಿಡಿ ' ಎಂದು ಹೇಳಿದನು. ಮಕ್ಕಳು ಒಳಕ್ಕೆ ಬಂದು ತಂತಮ್ಮ ಪ್ಲೇಟು ಪುಸ್ತಕಗಳನ್ನೆತ್ತಿಕೊಂಡು ಓಡಿದರು. ಶ್ಯಾನುಭೋಗರ ಹುಡುಗನಿಗೆ, “ ಇನ್ ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಬಂದು ಕಾಣಬೇಕು ಎಂದು ನಿಮ್ಮ ತಂದೆಗೆ ತಿಳಿಸು' ಎಂದು ಹೇಳಿ ಕಳುಹಿಸಿದನು.

ರಂಗಣ್ಣ ಒಳಗಿನ ಏರ್ಪಾಟನ್ನು ಪರೀಕ್ಷಿಸುತ್ತಿದ್ದಾನೆ. ದೂರದಲ್ಲಿ ಒಂದು ಮೂಲೆಯಲ್ಲಿ ಮುಕ್ಕಾಲು ನಿಲುವು, ಪಿಂಗಾಣಿ ಬೇಸಿನ್ ಮತ್ತು ಟವಲ್ಲುಗಳಿವೆ. ಇತ್ತ ಗೋಡೆಗೆ ಒಳ್ಳೆಯ ಕನ್ನಡಿ ಇದೆ. ಆದರೆ ಕನ್ನಡಿಯನ್ನು ಬೇಕಾದಾಗ ಮುಚ್ಚುವಂತೆ ತೆರೆ ಇದೆ. ಮೇಷ್ಟ್ರು ಮುನಿಸಾಮಿ ಏನು ಮಾಡುತ್ತಾನೋ ನೋಡೋಣ ; ಅವನ ಕಥೆ ತಿಳಿದುಕೊಳ್ಳೋಣ ಎಂದು ರಂಗಣ್ಣನು ಕುತೂಹಲಾವಿಷ್ಟನಾಗಿ ಕುಳಿತಿದ್ದನು. ಮೇಷ್ಟ್ರು ಮೇಜಿನ ಸೆಳೆಖಾನೆಯಿಂದ ಸೊಗಸಾದ ರೇಜರ್, ಕ್ರಾಸ್ ಮಿಷನ್, ಹೊಸದಾದ ಸೋಪು ಬಿಲ್ಲೆ - ಇವುಗಳನ್ನು ತೆಗೆದು ಮೇಜಿನ ಮೇಲಿಟ್ಟನು. ಬೇರೆ ಒಂದು ಪೆಟ್ಟಿಗೆಯಿಂದ ಮಡಿ ಮಾಡಿದ್ದ ದೊಡ್ಡ ಬಿಳಿಯ ವಸ್ತ್ರವನ್ನು ತೆಗೆದನು. ಹಿಂಭಾಗದ ತನ್ನ ಮನೆಯಿಂದ ಬಿಸಿ ನೀರನ್ನು ತಂದು ಬ್ರಷ್ಟನ್ನು ಚೆನ್ನಾಗಿ ತೊಳೆದನು, ಶುಭ್ರವಾದ ಗಾಜಿನ ಬಟ್ಟಲಿನಲ್ಲಿ ಬಿಸಿನೀರನ್ನು ತಂದಿಟ್ಟು ಕೊಂಡು, ' ಸ್ವಾಮಿಯವರು ರುಮಾಲು ಕೋಟು ತೆಗೆದಿಡಬೇಕು ' ಎಂದನು, ಅಷ್ಟು ಹೊತ್ತಿಗೆ ಶ್ಯಾನುಭೋಗರ ಹುಡುಗ ಒಗೆದ ಒಳ್ಳೆಯ ಪಂಚೆಯನ್ನೂ ಒ೦ದು ಟವಲನ್ನೂ ತಂದುಕೊಟ್ಟನು. ರಂಗಣ್ಣ ಪಂಚೆಯನ್ನುಟ್ಟುಕೊಂಡು ಅಂಗಿ ಷರಾಯಿ ಮೊದಲಾದ ಉಡುಪುಗಳನ್ನೆಲ್ಲ ತೆಗೆದು ಕುರ್ಚಿಯಲ್ಲಿ ಕುಳಿತುಕೊಂಡನು. ರಂಗಣ್ಣನ ಕೊರಳಿಗೆ ಮೇಷ್ಟು ವಸ್ತ್ರವನ್ನು ಇಳಿಬಿಟ್ಟು ಕಟ್ಟಿ ತನ್ನ ಕಸುಬಿನ ಕೈಚಳಕವನ್ನು ತೋರಿಸಲು ಮೊದಲು