ಪುಟ:ರಂಗಣ್ಣನ ಕನಸಿನ ದಿನಗಳು.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ರಂಗಣ್ಣನ ಕನಸಿನ ದಿನಗಳು

ಮಾಡಿದನು. ರಂಗಣ್ಣನಿಗೆ ತಾನು ಸ್ಕೂಲು ಬಳಿ ಬಂದಾಗ ಒಳಗಿಂದ ತಲೆಗೆ ಮುಸುಕುಹಾಕಿಕೊಂಡು ಹೊರಕ್ಕೆ ಓಡಿ ಹೋದ ನಾಲ್ವರ ಜ್ಞಾಪಕ ಬಂತು ! ಎಲ್ಲವೂ ಅರ್ಥವಾಯಿತು. ತಿರುಗುಮುರುಗಾಗಿಟ್ಟಿದ್ದ ಮೇಜಿನ ಅರ್ಥವೂ ಆಯಿತು. ಮುನಿಸಾಮಿ ಸೋಪನ್ನು ಹಚ್ಚಿದ ಠೀವಿಯೇ ಠೀವಿ, ಇನ್ ಸ್ಪೆಕ್ಟರ್ ಸಾಹೇಬರಿಗೆ ಮೇಷ್ಟ್ರು ಕ್ಷೌರ ಮಾಡುವ ದೃಶ್ಯ, ಗುರುವಿಗೆ ಶಿಷ್ಯನೊಬ್ಬನು ಕ್ಷೌರ ಮಾಡುವ ದೃಶ್ಯ - ಆ ವಿಶ್ವಾಸ, ಆ ಭಕ್ತಿ, ಆ ಸಂತೋಷಗಳನ್ನು ಈ ಬಡ ಲೇಖನಿಗೆ ಚಿತ್ರಿಸಲು ಸಾಧ್ಯವಿಲ್ಲ. ಮುನಿಸಾಮಿ ತನ್ನ ಕಥೆ ಹೇಳ ತೊಡಗಿದನು :

'ನಾನು ಪುನಃ ಈ ಕಸುಬಿಗೆ ಕೈ ಹಾಕುತ್ತಿರಲಿಲ್ಲ ಸಾರ್, ಎಂತಿದ್ದರೂ ಮಿಡಲ್ ಸ್ಕೂಲ್ ಪರೀಕ್ಷೆ ಆಯಿತು. ತಮ್ಮ ದಯದಿಂದ ಟ್ರೈನಿಂಗ್ ಪರೀಕ್ಷೆಯೂ ಆಯಿತು. ಬ್ರಾಹ್ಮಣ ಮೇಷ್ಟರ ಹಾಗೆ ಹುಡುಗರಿಗೆ ಪಾಠ ಹೇಳಿಕೊಂಡು ಗುರು ಎಂದು ಗೌರವ ಪಡೆದುಕೊಂಡಿರೋಣ. ನನ್ನಪ್ಪನೊಂದಿಗೇನೆ ಈ ಕಸಬು ಕೊನೆಗಾಣಲಿ ಎಂದು ನಾನಿದ್ದೆ. ಆದರೆ ಇಲಾಖೆಯಲ್ಲಿ ಸಂಬಳ ಬಹಳ ಕಡಮೆ ಸಾರ್ ! ಇಷ್ಟು ವರ್ಷ ಸರ್ವೀಸ್ ಮಾಡಿನೂ ಹದಿನೈದೇ ರೂಪಾಯಿ ಸಂಬಳ ! ನನಗೂ ಮೂರು ಮಕ್ಕಳಾದರು. ಜೊತೆಗೆ ತಮ್ಮ ಇದ್ದಾನೆ. ಹೆಂಡತಿ, ಮಕ್ಕಳು, ತಮ್ಮ, ನಾನೂ – ಈ ಸಂಸಾರ ಹದಿನೈದು ರೂಪಾಯಿ ಸಂಬಳದಲ್ಲಿ ಪೂರೈಸೋದಿಲ್ಲ. ಒಂದು ದಿನ ಕೈಯ್ಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ರಾಗಿ ಇರಲಿಲ್ಲ.'

;'ಮತ್ತೆ ಕೂಳಿಗೆ ಏನು ಮಾಡಿದಿರಿ ನೀವೆಲ್ಲ ?”

'ನಾನೇನು ಮಾಡಲಿ ಸಾರ್ ! ಹೇಗಾದರೂ ಸುಧಾರಿಸು ; ರೈತರ ಮನೆಗೆ ಹೋಗಿ ರಾಗಿ ಸಾಲ ತೆಗೆದು ಕೊಂಡು ಬಾ; ಇಲ್ಲವಾದರೆ ಒಂದು ರೂಪಾಯಿ ಸಾಲ ತರ್ತೇನೆ ; ರಾಗಿ ತಂದುಕೊಳ್ಳೋಣ ಹೆಂಡತಿಗೆ ಹೇಳಿದೆ.?

'ಸಾಲ ತಂದುಕೊಂಡಿರೋ?”

'ಇಲ್ಲ ಸಾರ್ ! ನನ್ನ ಹೆಂಡತಿ ಯವಾರಕ್ಕೆ ಬಂದಳು.ಈ ಇಸ್ಕೋಲ್ ಕೆಲಸ ಯಾಕಾಯ್ತ ನಿಮ್ಮ ! ದಿನಕ್ಕೆ ಎಂಟಾಣೆ ಕೂಲಿ. ಕುಂತ ಕಡೆ ನಾಲ್ಕು ಜನಕ್ಕೆ ತಲೆ ಕೆರೆದರೆ ಎಂಟಾಣೆ ಬರಾಕಿಲ್ವಾ ? ಎಂದು