ಪುಟ:ರಂಗಣ್ಣನ ಕನಸಿನ ದಿನಗಳು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೭೩

ಒಂದು ರೂಪಾಯಿ ಸಾಲ ತರ್ತಿನ್ನಿ ಅಂತ ಹೊರಟೀರಾ ! ಸಾಲ ತೀರೋದೆಂಗೆ ? ಅಲ್ಲಿ ಕುಕ್ಕರಿಸಿಕೊಂಡು ನಾಲ್ಕು ಜನಕ್ಕೆ ತಲೆ ಕೆರೀರಿ; ಎಂಟಾಣೆ ಬರ್ತೈತೆ. ನಿಮ್ಮ ಆಳಿಸ್ಕೋಲ್ಗೆ ಬೆಂಕಿ ಬೀಳಾ-ಎಂದು ತರಾಟೆಗೆ ತೆಗೆದುಕೊಂಡಳು. ನಾನೇನು ಮಾಡಲಿ ಸಾರ್ ? ಮಕ್ಕಳು- ಹಸಿವೋ ಎಂದು ಅಳುತ್ತಾ ನಿಂತುಕೊಂಡವು.”

'ಕಡೆಗೆ ಹೇಗೆ ಫೈಸಲ್ ಆಯ್ತು ನಿಮ್ಮ ಯವಾರ ?'

'ಹೇಗೆ ಎಂತ ಹೇಳಿ ಸಾರ್? ನಮ್ಮ ಈ ಹಳ್ಳಿಯಲ್ಲಿ ಹೈಸ್ಕೂಲ್ ಓದಿದ ಹುಡುಗರು ಕೆಲವರು, ಪೇಟೆ ಹೋಟಲಿಗೆ ಹಾಲು ಮಾರೊ ಯುವಕರು ಕೆಲವರು ಇದ್ದಾರೆ. ಊರ ಪೇಟೆ ಕಂಡವರು. ಇಬ್ಬರು ಹುಡುಗರು ನಮ್ಮ ಕೂಗಾಟ ಕೇಳಿ ಇತ್ತ ಬಂದರು. ನಾನು ತಮಾಷೆಗೆ- ಏಕೆ ಬಂದಿರಣ್ಣಾ ಇಲ್ಲಿಗೆ ? ಕ್ರಾಪ್ ಗ್ರೀಪ್ ಹೊಡೀಬೇಕಾ ನಿಮಗೆ ?- ಎಂದು ಕೇಳಿದೆ. ಅವರೂ ತಮಾಷೆಗೆ - ಹುಂ, ಕ್ರಾಪ್ ಕತ್ತರಿಸೋರು ನಮ್ಮ ಹಳ್ಳಿಲಿ ಯಾರಿದ್ದಾರೆ ? ತಲೆ ಏನೋ ಬೆಳೆದಿದೆ-ಎಂದರು. ನಾನು - ಅಮೇರಿಕನ್ ಕಟ್ಟಿಗೆ ನಾಲ್ಕಾಣೆ, ಫ್ರೆಂಚ್ ಕಟ್ಟಿಗೆ ಆರಾಣೆ, ಕುಳಿತುಕೊಂಡು ನೋಡಿ ಪರಮಾಯಿಷಿನ-ಎಂದೆ. ಆ ಹುಡುಗರು ಷೋಕಿ ಮೇಲೆ ಕುಳಿತೇ ಬಿಟ್ಟರು ಸಾರ್‌, ಒಬ್ಬನಿಗೆ ಅಮೆರಿಕನ್ ಕಟ್ ಮತ್ತೊಬ್ಬನಿಗೆ ಫ್ರೆಂಚ್ ಕಟ್ ಕ್ರಾಪು ಕತ್ತರಿಸಿದೆ. ಕೊಟ್ಟರು. ಎಲ್ಲಿ ಕಲಿತೆ ಮುನಿಸಾಮಿ ? ಒಳ್ಳೆಯ ಪಳಗಿದ ಕೈ ನಿನ್ನದು ಬೆಂಗಳೂರಿನಲ್ಲಿ ಕೂಡ ಇಂಥ ಕ್ರಾಪ್ ಕಟ್ ಕಾಣೆವು - ಎಂದು ಮೆಚ್ಚಿಕೊಂಡು ಹೊರಟು ಹೋದರು. ಆಮೇಲೆ ನನ್ನ ಹೆಂಡತಿಯ ಕೈಗೆ ಹತ್ತಾಣೆ ಕೊಟ್ಟೆ. ಅವಳು ದಿನಾ ನಾಲ್ಕು ಜನಕ್ಕೆ ಹೀಗೆ ಜುಟ್ಟು ಕತ್ತರಿಸಿ ಸಂಪಾದಿಸಿರಿ ; ಇಲ್ಲಾದ್ರೆ ನಿಮ್ಮೆ ಹಿಟ್ಟಾಕಾಕಿಲ್ಲ ಎಂದು ಹೇಳಿ ಬಿಟ್ಟಳು.”

'ಸರಿ, ಅಂದಿನಿಂದ ಈ ಪಾಠ ಶಾಲೆ ಹಜಾಮತ್ ಶಾಲೆ ಆಯಿತೊ ?'

'ಇಲ್ಲ ಸಾರ್. ಎರಡು ದಿನ ಯಾರೂ ಬರಲಿಲ್ಲ. ಆದರೆ ಆ ಇಬ್ಬರು ಹುಡುಗರು ತಮ್ಮ ಸ್ನೇಹಿತರಿಗೆಲ್ಲ ಕ್ರಾಪು ತೋರಿಸಿ ಪ್ರಚಾರ ಅವರು