ಪುಟ:ರಂಗಣ್ಣನ ಕನಸಿನ ದಿನಗಳು.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆವಲಹಳ್ಳಿಯಲ್ಲಿ ಸಭೆ

೮೧

ದೇವತಾ ಪ್ರಾರ್ಥನೆ ಮುಗಿದನಂತರ ರಂಗಣ್ಣ ಅಧ್ಯಕ್ಷರ ಆರಂಭ ಭಾಷಣ ವನ್ನು ಮಾಡಿದನು : ' ಈ ದಿವಸ ಆವಲಹಳ್ಳಿಯಲ್ಲಿ ಈ ಸಭೆ ಸೇರಿರುವುದಕ್ಕೆ ಕಾರಣರಾದವರು ನನ್ನ ಮಿತ್ರರಾದ ಶ್ರೀ ದೊಡ್ಡಬೋರೇಗೌಡರು. ಅವರು ತೋರಿಸಿರುವ ಆದರಾತಿಥ್ಯಗಳಿಗೆ ಪ್ರತ್ಯುಪಕಾರವನ್ನು ನಾವು ಮಾಡಬೇಕಾದರೆ ನಮ್ಮ ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದಲೂ ದಕ್ಷತೆಯಿಂದಲೂ ನೆರವೇರಿಸಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇದಕ್ಕೆ ಉಪಾಧ್ಯಾಯರ ಶ್ರದ್ಧಾಯುಕ್ತವಾದ ಪ್ರಯತ್ನ ಮತ್ತು ಗ್ರಾಮಸ್ಥರ ಸಂತೋಷ ಪೂರ್ವಕವಾದ ಸಹಕಾರ- ಇವೆರಡೂ ಆವಶ್ಯಕ. ಈಗ ಉಪಾಧ್ಯಾಯರಿಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಸಾಯಂಕಾಲ ಸಭೆ ಸೇರಿದಾಗ ಗ್ರಾಮಸ್ಥರಿಗೆ ಹೇಳಬೇಕಾದುದನ್ನು ಹೇಳುತ್ತೇನೆ. ನಾನು ಹೇಳುವ ಮಾತುಗಳಿಗೆ ಉಪಾಧ್ಯಾಯರಾರೂ ಕೋಪಿಸಿಕೊಳ್ಳಬಾರದೆಂದು ಮೊದಲಿನಲ್ಲೇ ಪ್ರಾರ್ಥಿಸಿಕೊಳ್ಳುತ್ತೇನೆ.'

'ಉಪಾಧ್ಯಾಯರು ಮೊದಲಿನಲ್ಲಿ ಇಲಾಖೆಯ ರೂಲ್ಸಿನಂತೆ ನಡೆದು ಸಂವಿಧಾನನ್ನು ಪಾಲಿಸಬೇಕು. ಈಗ ಮಕ್ಕಳನ್ನು ವರ್ಷದ ಎಲ್ಲಾ ತಿಂಗಳಲ್ಲಿ ಮೊದಲನೆಯ ದರ್ಜೆಗೆ ದಾಖಲ್ಮಾಡಿಸಿಕೊಳ್ಳುತ್ತಿದ್ದೀರಿ. ಇದು ತಪ್ಪು. ಬೇಸಗೆಯ ರಜ ಮುಗಿದು ಪಾಠಶಾಲೆ ಪ್ರಾರಂಭವಾಗುವಾಗ ಒಂದು ತಿಂಗಳು ಅವಧಿಯಲ್ಲಿ ಸೇರಿಸಿಕೊಳ್ಳಬೇಕು ; ಅನಂತರ ಸೇರಿಸಬಾರದು. ನವರಾತ್ರಿಯನಂತರ ಸೇರಿಸಬಹುದೆಂದು ನಿಯಮವೇನೋ ಇದೆ. ಆದರೆ ಸ್ಥಳಾವಕಾಶ, ಪಾಠ ಹೇಳಿಕೊಡುವುದಕ್ಕೆ ಉಪಾಧ್ಯಾಯರ ಸೌಕರ್ಯ– ಇವು ಇದ್ದರೆ ಮಾತ್ರ ಸೇರಿಸಬಹುದು ; ಇಲ್ಲವಾದರೆ ಸೇರಿಸಕೂಡದು. ಇದನ್ನು ಕಡ್ಡಾಯವಾಗಿ ಆಚರಣೆಗೆ ತರಬೇಕು. ಮಕ್ಕಳಿಗೆ ಅ, ಆ, ಇ, ಈ, ಎಂಬ ಕ್ರಮದಲ್ಲಿ

ವರ್ಣಮಾಲೆಯ ಅಕ್ಷರಗಳನ್ನು ತಿದ್ದಿಸುತ್ತೀರಿ. ಈ ಕ್ರಮವನ್ನು ಬಿಟ್ಟು ಪುಸ್ತಕದಲ್ಲಿ ಪಾಠಗಳಿರುವ ಕ್ರಮದಲ್ಲಿಯೇ ಪಾಠಗಳನ್ನು ಕಲಿಸಬೇಕು ; ಮತ್ತು ಮಕ್ಕಳ ಅಭಿವೃದ್ಧಿಯ ತಃಖ್ತೆಯನ್ನು ತಪ್ಪದೆ ಇಡಬೇಕು. ಉಪಾಧ್ಯಾಯರಲ್ಲಿ ಹಲವರು ಶಿಕ್ಷಣಕ್ರಮಗಳ ಪ್ರಕಾರ ಪಾಠಮಾಡುತ್ತಿಲ್ಲ.

6