ಪುಟ:ರಂಗಣ್ಣನ ಕನಸಿನ ದಿನಗಳು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨

ರಂಗಣ್ಣನ ಕನಸಿನ ದಿನಗಳು


ಕೆಲವರಿಗಂತೂ ಆ ಕ್ರಮಗಳೇ ಗೊತ್ತಿಲ್ಲ. ಈಗ ಸಭೆಯಲ್ಲಿ ಆ ಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನು ಕೊಡಲಾಗುತ್ತದೆ. ಉಪಾಧ್ಯಾಯರು ಅವುಗಳಿ೦ದ ಲಾಭ ಪಡೆಯಬೇಕು' ಎಂದು ಮುಂತಾಗಿ ಹೇಳಿದನು.

ತರುವಾಯ ಭಾಷೆಯ ಪಾಠಗಳನ್ನು ಕುರಿತು ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ಭಾಷಣ ಮಾಡಿದರು. ಒಂದು ಗದ್ಯದ ಪಾಠ, ಒಂದು ಪದ್ಯದ ಪಾಠ- ಇವುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಕ್ರಮವನ್ನು ವಿವರಿಸಿದರು. ಇದಾದ ಮೇಲೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಗಣಿತದಲ್ಲಿ ಮೂರನೆಯ ತರಗತಿಗೆ ಮಾದರಿ ಪಾಠವನ್ನು ಮಾಡಿ ತೋರಿಸಿದರು. ಇನ್ನೊಬ್ಬರು ಮುಖ್ಯೋಪಾಧ್ಯಾಯರು ಭೂಗೋಳ ಪಾಠಗಳನ್ನು ಮಾಡುವ ಕ್ರಮವನ್ನು ವಿವರಿಸಿದರು. ಮಿಡಲ್ ಸ್ಕೂಲಿನ ಸಹಾಯೋಪಾಧ್ಯಾಯರೊಬ್ಬರು ಚರಿತ್ರೆಯ ಸಾರಗಳಿಗೆ ಬೇಕಾದ ಉಪಕರಣಗಳನ್ನೂ ಅವುಗಳನ್ನು ಶೇಖರಿಸುವ ಕ್ರಮವನ್ನೂ ಪಾಠಗಳಲ್ಲಿ ಉಪಯೋಗಿಸುವ ಕ್ರಮವನ್ನೂ ತಿಳಿಸಿದರು. ಇಷ್ಟು ಹೊತ್ತಿಗೆ ಹತ್ತೂವರೆ ಗಂಟೆ ಆಯಿತು ಆಮೇಲೆ ರಂಗಣ್ಣನು ಉಪಾಧ್ಯಾಯರನ್ನು ಕುರಿತು, ಭಾಷೆಯ ಪಾಠ ಮಾಡುವುದರಲ್ಲಿ ಮತ್ತು ಗಣಿತ ಪಾಠಗಳಲ್ಲಿ ನಿಮಗೆ ಏನಾದರೂ ಕಷ್ಟಗಳಿದ್ದರೆ ತಿಳಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಚರ್ಚಿಸೋಣ ” ಎಂದು ಹೇಳಿದನು. ಕೆಲವರು ಉಪಾಧ್ಯಾಯರು ನಿಂತುಕೊಂಡು ಕೆಲವು ಭಾಗಗಳ ಮೇಲೆ ವಿವರಣೆ ಕೇಳಿದರು. ಅವುಗಳಿಗೆಲ್ಲ ರಂಗಣ್ಣನೇ ಪರಿಹಾರಗಳನ್ನು ವಿವರಿಸಿದನು. ಪ್ರಾತಃಕಾಲದ ಸಭೆ ಹನ್ನೊಂದೂವರೆ ಗಂಟೆಯವರೆಗೂ ನಡೆಯಿತು. ಮುಕ್ತಾಯವಾಗುವಾಗ ರಂಗಣ್ಣನು, ' ಈಗ ತಿಳಿಸಿದ ಕ್ರಮಗಳನ್ನು ಆಚರಣೆಗೆ ತರಬೇಕಾದುದು ಮುಖ್ಯ. ಪ್ರತಿ ತಿಂಗಳಲ್ಲೂ ಹೀಗೆಯೇ ಪಾಠಗಳ ವಿಷಯದಲ್ಲಿ ತಿಳಿವಳಿಕೆಯನ್ನು ಕೊಡುತ್ತೇವೆ. ನೀವುಗಳು ಸಹ ಬೋಧನೆಯಲ್ಲಿ ನಿಮಗಿರುವ ತೊಡಕುಗಳನ್ನು ಗುರುತು ಹಾಕಿಕೊಂಡು ಬಂದು ಅವುಗಳಿಗೆ ಪರಿಹಾರವನ್ನು ಪಡೆಯಿರಿ. ಉಪಾಧ್ಯಾಯರಿಗೆಲ್ಲ ಹೇಳಬೇಕಾದ ಇನ್ನೊಂದು ಮುಖ್ಯ ವಿಚಾರವಿದೆ. ಈಗ ನನ್ನ ಅನುಭವದಲ್ಲಿ ಕೆಲವರು ಉಪಾಧ್ಯಾಯರು ನಿಯಮಗಳನ್ನು