ಪುಟ:ರಘುಕುಲ ಚರಿತಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ರಘುಕುಲಚರಿತಂ. ೧೫] ಕಣ್ಣುಗಳು ಕೆಂಪೇರಿದ್ದುವು, ಅರಸು ಅವನನ್ನು ನೋಡಿದ ಕೂಡಲೆ, ಕುಲಗೋತ್ರಗಳನ್ನು ವಿಚಾರಿಸಿದನು, ಆ ಧೂಮವನು - ತಾನು ಶೂದ್ರ ನೆಂದೂ, ತನ್ನ ಹೆಸರು ಶಂಬುಕನೆಂದೂ, ಸ್ವರ್ಗ ಸುಖವನ್ನು ಬಯಸುತ ಲಿರುವೆನೆಂದೂ ಅರಿಕೆ ಮಾಡಿದನು. ತಪಸ್ಸನ್ನು ಆಚರಿಸುವುದರಲ್ಲಿ ಅಧಿ ಕಾರಿಯಲ್ಲದ, ಇವನ ಕತ್ತನ್ನು ಕತ್ತರಿಸಬೇಕೆಂದು ನಿಶ್ಚಸಿ, ಧರನಿ ಯಾಮಕನಾದ ರಾಮನು ಶಸ್ತಸಾಣಿಯಾದನು, ಮತ್ತು - ಮಂಜ್ ಸುರಿವುದರಿಂದ ಬಾಡಿದ ರೇಕುಗಳು ತಾವರೆಯನ್ನು ಕಾವಿನಿಂದ ಕೆಳ ಗಿಳಿಸುವಹಾಗೆ, ಬೆಂಕಿಯ ಕಿಡಿಗಳಿಂದ ಸುಟ್ಟ ರೋಮಗಳನ್ನೊಳಗೊಂ ಡಿರುವ ಆ ಶಂಬುಕನ ಮುಖವನ್ನು ಕಂಠನಾಳದಿಂದ ಉರುಳಸಿದನು. ಅನಧಿಕಾರಿಯೆನಿಸಿರುವ ಶೂದ್ರನಾದ ಶಂಬುಕನು - ತಪ್ಪುದಾರಿಯೆನಿಸಿ ರುವ ಕಶ್ಮಿ ಸಾಧ್ಯವಾದ ತಪಸ್ಸಿನಿಂದಲೂ ಸರ್ ಪದವಿಯನ್ನು ಪಡೆ ಯುತಲಿರಲಿಲ್ಲ, ಆದರೆ – ರಾಜದಂಡವನ್ನು ಪಡೆದು, ಸತ್ಪುರುಷರಿಗೆ ಅಭಿ ಸುವ ಸದ್ದತಿಯನ್ನು ಹೊಂದಿದನು, “ ಮಾನವರು ಪಾಪಗಳನ್ನು ಮಾಡಿ, ರಾಜರಿಂದ ಶಿಕ್ಷೆಯನ್ನು ಅನುಭವಿಸಿದರೆ, ನಿಮ್ಮಲರೆನಿಸಿ ಸುಕೃತಶಾಲಿಗಳಾದ ಸತ್ಪುರುಷರಹಾಗೆ ಸದ್ಧ ತಿಯನ್ನು ಪಡೆವರು ?ಎಂದು ಮಹಾನುಭಾವ ನಾದ ಮನುವೂ ಉದಹರಿಸಿರುವನಲ್ಲವೆ ? ಬಳಿಕ ರಘುನಾಥನು - ಶರ ತ್ಕಾಲದೊಡನೆ ಚಂದ್ರನು ಸೇರುವಹಾಗೆ, ದಾರಿಯಲ್ಲಿ ಕಾಣಿಸಿಕೊಂಡ ಮಹಾ ತೇಜಸ್ವಿ ಯೆನಿಸಿದ ಅಗಸ್ಟ್‌ನೊಡನೆ ಕಲೆತನು, ಕುಂಭ ಸಂಭ ವನು - ದೇವತೆಗಳಿಗೆ ತಕ್ಕುದೆನಿಸಿರುವ ಅಲಂಕಾರವನ್ನು ಆದರದಿಂದ ರಾಮನಿಗೆ ಕೊಟ್ಟನು, ಹಿಂದೆ ಕಡಲನ್ನು ಕುಡಿದು, ಮರಳಿ ಬಿಟ್ಟಾಗ, ಸಮುದ್ರನು - ತನ್ನ ಬಿಡುಗಡೆಗಾಗಿ ಕೊಟ್ಟ ಮಲ್ಯದಂತೆ ಆ ಅಂಗರಾಗ ವನ್ನು ಈ ಅಗಸ್ಯನಿಗೆ ಒಪ್ಪಿಸಿದ್ದನು. ದಾಶರಥಿಯು - ಈಚೆಗೆ ಮೈಧಿ ಲಿಯ ಸ್ಪರ್ಶವಿಲ್ಲದ ಕರದಿಂದ ಆ ದಿವ್ಯಪರಿಮಳವನ್ನು ಧರಿಸಿ ಆ ತಪೋವ ನದಿಂದ ಹಿಂದಿರುಗಿದನು, ಅದುವರೆಗೆ ಜೀವಿಸಿದ ದಿಜನ ತನುಜನು ಅಯೋಧ್ಯಾನಗರದಿಂದ ಹಿಂದಿರುಗಿದ್ದನು, ಪರಾಸುವಾಗಿದ್ದು ಮರಳ ಜೀವಿ ನಿದ ಪುತ್ರನೊಡನೆ ಸೇರಿದ ಬ್ರಾಹ್ಮಣನು-ಅಂತಕನನ್ನೂ ಜಯಿಸಿ ರಕ್ಷ ಕನೆನಿಸಿದ ರಾಮನನ್ನು ಸ್ತುತಿಸಿ, ಅದರಿಂದ ಹಿಂದೆ ತಾನಾಚರಿಸಿದ್ದ ನಿಂದೆ 13